crores spent on various hospitality programs :ತಲೆತಿರುಗಿಸುತ್ತೆ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ಸರ್ಕಾರದಿಂದಾದ ಖರ್ಚು

ಬೆಂಗಳೂರು : crores spent on various hospitality programs : ಸರ್ಕಾರ ಆಡಳಿತ ನಡೆಸಲು ಖರ್ಚು ಮಾಡೋದು ಜನರ ತೆರಿಗೆ ಹಣವನ್ನು. ‌ಆದ್ರೆ ಜನಸಾಮಾನ್ಯರ ಈ ತೆರಿಗೆ ಹಣ ಪೋಲು ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಬ್ದಾರಿ. ಇದೀಗ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮ ಸೇರಿದಂತೆ ಗಣ್ಯರ ಔತನಕೂಟ, ಅತಿಥಿ ಸತ್ಕಾರ ಹೆಸರಿನಲ್ಲಿ ಕೋಟಿ ಕೋಟಿ ಖರ್ಚಾಗಿರುವ ಸ್ಪೋಟಕ ಸಂಗತಿ ಬೆಳಕಿಗೆ ಬಂದಿದೆ. 2004ರಿಂದ 2021ರವರೆಗಿನ ಸರ್ಕಾರದ ಈ ಖರ್ಚು ವೆಚ್ಚಗಳ ದಾಖಲೆಗಳು ಮಾಹಿತಿ ಹಕ್ಕಿನಡಿ ಬಹಿರಂಗಗೊಂಡಿದೆ.

ಸರ್ಕಾರದ ಈ ಖರ್ಚು ವೆಚ್ಚಗಳ ಬಗೆಗಿನ‌ ವಿವರಗಳನ್ನು ಒದಗಿಸುವಂತೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದರು.‌ ಈ ಸಂದರ್ಭ ಕೋಟಿ ಕೋಟಿ ಖರ್ಚು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. 2004ರಿಂದ 2021ರವರೆಗೆ ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮಕ್ಕೆ 48 ಲಕ್ಷ 36 ಸಾವಿರ 616 ರೂ ಖರ್ಚು ಮಾಡಿರೋದು ಗೊತ್ತಾಗಿದೆ. ಇದರ ಜೊತೆ ನೂತನ ಮಂತ್ರಿಗಳ ಪ್ರಮಾಣವಚನ ಸಮಾರಂಭಕ್ಕೆ 59 ಲಕ್ಷದ 09 ಸಾವಿರದ 725ರೂ ಖರ್ಚು ಮಾಡಲಾಗಿದೆ.

ಇನ್ನು ಈ ಸಮಾರಂಭದಲ್ಲಿ ಅವಶ್ಯವಿರುವ ಹೂಗುಚ್ಚ, ಉಪಹಾರ, ಹೈಟೀ, ಸಿಹಿ ತಿಂಡಿಗಾಗಿ ಬರೋಬ್ಬರಿ 1 ಕೋಟಿ 07 ಲಕ್ಷದ 46 ಸಾವಿರ 341ರೂ ವೆಚ್ಚ ಮಾಡಲಾಗಿದೆ. ಇನ್ನು ರಾಜ್ಯಕ್ಕೆ ಬೇರೆ ಬೇರೆ ಕಾರಣಗಳಿಗಾಗಿ ಗಣ್ಯರು ಬಂದು ಹೋಗ್ತಾ ಇರ್ತಾರೆ. ಹೀಗೆ
2013 ರಿಂದ 2022 ರವರೆಗೆ ವಿವಿಧ ಕಾರಣದಿಂದ ರಾಜ್ಯಕ್ಕೆ ಬಂದ ಗಣ್ಯರ ಔತನಕೂಟಕ್ಕೆ ಬರೋಬ್ಬರಿ 3 ಕೋಟಿ 17 ಲಕ್ಷದ 60 ಸಾವಿರ 702ರೂ ಖರ್ಚು ಮಾಡಲಾಗಿದೆ. ಇನ್ನೊಂದು ಅಚ್ಚರಿ ಎನೆಂದರೆ ಒಂದು ಔತಣಕೂಟವೊಂದರಲ್ಲಿ ಒಂದು ಊಟಕ್ಕೆ 6,136ರೂ ಖರ್ಚು ಮಾಡಿರೋದು ಮಾಹಿತಿ ಹಕ್ಕಿನಡಿ ಗೊತ್ತಾಗಿದೆ.

ನವೆಂಬರ್ 30, 2020 ರಂದು ತಾಜ್ ವಿಂಡ್ ಹೊಟೇಲ್ ನಲ್ಲಿ ನಡೆದ ಈ ಔತನಕೂಟದ ಒಂದು ಊಟಕ್ಕೆ 6,136ರೂ ಖರ್ಚು ವ್ಯಯಿಸಲಾಗಿದೆ. ಪ್ರತಿ ಗಣರಾಜೋತ್ಸವ ಸಂದರ್ಭದಲ್ಲಿ 2500 ಜನರಿಗೆ ರಾಜ್ಯಭವನದಲ್ಲಿ ಭೋಜನಕ್ಕಾಗಿ 54 ಲಕ್ಷದ 97 ಸಾವಿರದ 820ರೂ ಖರ್ಚು ಮಾಡಲಾಗಿದೆ. ರಾಜ್ಯ ಶಿಷ್ಟಾಚಾರ ಇಲಾಖೆಯ‌ ನಿರ್ದೇಶನದ ಮೇರೆಗೆ ಈ ರೀತಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಸರ್ಕಾರದಲ್ಲಿನ ಈ ದುಂದುವೆಚ್ಚದ ಬಗ್ಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪೋಲು ತಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಹ ಮಾಡಿದ್ದಾರೆ. ಒಟ್ಟಿನಲ್ಲಿ ಇನ್ನಾದರೂ ಆಡಳಿತ ನಡೆಸುವ ಸರ್ಕಾರಗಳು ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡದಂತೆ ಕ್ರಮ ವಹಿಸಲಿ.

ಇದನ್ನು ಓದಿ : Asad Rauf died : ಮಾಜಿ ಐಸಿಸಿ ಅಂಪೈರ್, ಪಾಕಿಸ್ತಾನದ ಅಸಾದ್ ರೌಫ್ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : Bellary Vims Hospital: ವೆಂಟಿಲೇಟರ್‌ ಸ್ಥಗಿತ ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ 3 ರೋಗಿಗಳ ಸಾವು

Crores of crores spent on various hospitality programs including Chief Minister’s swearing-in program

Comments are closed.