IMD Recruitment 2022 : ಭಾರತೀಯ ಹವಾಮಾನ ಇಲಾಖೆಯಲ್ಲಿದೆ ಸುವರ್ಣಾವಕಾಶ : 160 ಕ್ಕೂ ಹೆಚ್ಚು ಸೈಂಟಿಸ್ಟ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ಹವಾಮಾನ ಇಲಾಖೆ (IMD Recruitment 2022) ಯು ಪ್ರಾಜೆಕ್ಟ್‌ ಸೈಂಟಿಸ್ಟ್‌ I, ಪ್ರಾಜೆಕ್ಟ್‌ ಸೈಂಟಿಸ್ಟ್‌ II, ಪ್ರಾಜೆಕ್ಟ್‌ ಸೈಂಟಿಸ್ಟ್‌ III, ರಿಸರ್ಚ್‌ ಅಸೋಸಿಯೇಟ್‌, ಜೂನಿಯರ್‌ ರಿಸರ್ಚ್‌ ಫೆಲೋ/ ಸೀನಿಯರ್‌ ರಿಸರ್ಚ್‌ ಫೆಲೋ, ಮತ್ತು ಇತರೆ ಸೇರಿದಂತೆ 160 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭೂ ವಿಜ್ಞಾನ ಸಚಿವಾಲಯದ ನೇಮಕಾತಿ 2022 ಗೆ ಅಕ್ಟೋಬರ್‌ 9, 2022 ರಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ.

ಭಾರತೀಯ ಹವಾಮಾನ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಗತ್ಯ ವಿದ್ಯಾರ್ಹತೆಗಳನ್ನು ಹೊಂದಿರಬೇಕು. ಇಲ್ಲವಾದಲ್ಲಿ ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದೆ.

ಹುದ್ದೆ ಮತ್ರು ಅರ್ಹತೆ :

ಪ್ರಾಜೆಕ್ಟ್‌ ಸೈಂಟಿಸ್ಟ್‌ I (ಗ್ರಾಮೀಣ ಕೃಷಿ ಮೌಸಮ್‌ ಸೇವೆ)– ಕನಿಷ್ಟ 60 ಪ್ರತಿಶತ ಅಂಕದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Sc. ಕೃಷಿ ಹವಾಮಾನ / ಕೃಷಿ ಭೌತಶಾಸ್ತ್ರ / ರಿಮೋಟ್ ಸೆನ್ಸಿಂಗ್ ಮತ್ತು GIS ಅಥವಾ ಸಮಾನ / ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ. ಅಥವಾ ಕನಿಷ್ಟ 60 ಪ್ರತಿಶತ ಅಂಕದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೇಲೆ ಹೇಳಿರುವ ವಿಷಯಗಳಲ್ಲಿ ಬಿ.ಟೆಕ್‌/ಬಿ.ಇ. ಪದವಿ.

ಇದನ್ನೂ ಓದಿ:Vivo V25 : 64 ಮೆಗಾಪಿಕ್ಸೆಲ್‌ ನೈಟ್‌ ಕ್ಯಾಮೆರಾದೊಂದಿಗೆ ಬಿಡುಗಡೆಗೆ ಸಿದ್ಧವಾದ ವಿವೊ V25 ಸ್ಮಾರ್ಟ್‌ಫೋನ್‌

ಪ್ರಾಜೆಕ್ಟ್‌ ಸೈಂಟಿಸ್ಟ್‌ II (ಗ್ರಾಮೀಣ ಕೃಷಿ ಮೌಸಮ್‌ ಸೇವೆ)– ಕನಿಷ್ಟ 60 ಪ್ರತಿಶತ ಅಂಕದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Sc. ಕೃಷಿ ಹವಾಮಾನ / ಕೃಷಿ ಭೌತಶಾಸ್ತ್ರ / ರಿಮೋಟ್ ಸೆನ್ಸಿಂಗ್ ಮತ್ತು GIS ಅಥವಾ ಸಮಾನ / ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ. ಅಥವಾ ಕನಿಷ್ಟ 60 ಪ್ರತಿಶತ ಅಂಕದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೇಲೆ ಹೇಳಿರುವ ವಿಷಯಗಳಲ್ಲಿ ಬಿ.ಟೆಕ್‌/ಬಿ.ಇ. ಪದವಿ.

ಪ್ರಾಜೆಕ್ಟ್‌ ಸೈಂಟಿಸ್ಟ್‌ III (ಗ್ರಾಮೀಣ ಕೃಷಿ ಮೌಸಮ್‌ ಸೇವೆ)– ಕನಿಷ್ಟ 60 ಪ್ರತಿಶತ ಅಂಕದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Sc. ಕೃಷಿ ಹವಾಮಾನ / ಕೃಷಿ ಭೌತಶಾಸ್ತ್ರ ದಲ್ಲಿ ಪದವಿ. ಅಥವಾ ಕನಿಷ್ಟ 60 ಪ್ರತಿಶತ ಅಂಕದೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೇಲೆ ಹೇಳಿರುವ ವಿಷಯಗಳಲ್ಲಿ ಬಿ.ಟೆಕ್‌/ಬಿ.ಇ. ಪದವಿ.

ರಿಸರ್ಚ್ ಅಸೋಸಿಯೇಟ್ (ಗ್ರಾಮೀಣ ಕೃಷಿ ಮೌಸಮ್ ಸೇವಾ) – ಪಿಎಚ್‌ಡಿ. / M. S. ಅಥವಾ ಕೃಷಿ ಪವನಶಾಸ್ತ್ರ/ಕೃಷಿ ಭೌತಶಾಸ್ತ್ರ/ ಕೃಷಿ ಅಂಕಿಅಂಶಗಳಲ್ಲಿ ತತ್ಸಮಾನ ಪದವಿ. ಅಥವಾ ವಿಜ್ಞಾನ ಉಲ್ಲೇಖ ಸೂಚ್ಯಂಕ (SCI) ಜರ್ನಲ್‌ನಲ್ಲಿ ಕನಿಷ್ಠ 1 ಸಂಶೋಧನಾ ಪ್ರಬಂಧದೊಂದಿಗೆ M.Sc./ ME/ M. ಟೆಕ್ ನಂತರ ಮೂರು ವರ್ಷಗಳ ಸಂಶೋಧನೆ, ಬೋಧನೆ ಮತ್ತು ವಿನ್ಯಾಸ ಮತ್ತು ಅಭಿವೃದ್ಧಿ ಅನುಭವವನ್ನು ಹೊಂದಿರಬೇಕು.

ಜೂನಿಯರ್‌ ರಿಸರ್ಚ್‌ ಫೆಲೋ/ ಸೀನಿಯರ್‌ ರಿಸರ್ಚ್‌ ಫೆಲೋ –ಜೂನಿಯರ್ ರಿಸರ್ಚ್ ಫೆಲೋ (JRF) M.Sc. ಕೃಷಿ ಪವನಶಾಸ್ತ್ರ/ಕೃಷಿ ಭೌತಶಾಸ್ತ್ರ/ಕೃಷಿ ಅಂಕಿಅಂಶಗಳಲ್ಲಿ, M.Sc. ಹವಾಮಾನಶಾಸ್ತ್ರದಲ್ಲಿ/ ಅಥವಾ M.Tech. NET ಅರ್ಹತೆಯೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಟ್ಮಾಸ್ಫಿಯರಿಕ್ ಸೈನ್ಸ್‌/ ಅಟ್ಮಾಸ್ಫಿಯರಿಕ್ ಫಿಸಿಕ್ಸ್ / ಮೆಟಿಯರಾಲಜಿ / ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ / ಕಂಪ್ಯೂಟರ್ ಸೈನ್ಸ್ ಆಗಿರಬೇಕು.

ಹೆಚ್ಚಿನ ವಿವಿರಗಳಿಗೆ ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.

ಅರ್ಜಿ ಸಲ್ಲಿಸುವುದು ಹೇಗೆ?
ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್‌ 9, 2022 ರವರೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಸ್ವಯಂ ಧೃಢೀಕರಿಸಿದ ಪ್ರಮಾಣ ಪತ್ರ ಸಲ್ಲಿಸಬೇಕು.

ಇದನ್ನೂ ಓದಿ: Karnataka Dasara Holidays 2022 : ಸೆಪ್ಟೆಂಬರ್‌ 26 ರಿಂದ ದಸರಾ ರಜೆ ಘೋಷಣೆ : ಸಚಿವರಿಂದ ಮಹತ್ವದ ಆದೇಶ

(IMD Recruitment 2022 apply various posts in India Meteorological Department)

Comments are closed.