Praveen Nettaru’s murder : ವಿದೇಶದಲ್ಲಿ ನಡೆದಿತ್ತಾ ಪ್ರವೀಣ್​ ಹತ್ಯೆಗೆ ಪ್ಲಾನ್​ : ಪ್ರವೀಣ್​ ಅಂಗಡಿಯಲ್ಲಿ ಕೆಲಸಕ್ಕಿದವನ ಪುತ್ರನಿಂದಲೇ ಸ್ಕೆಚ್​​

ಮಂಗಳೂರು : Praveen Nettaru’s murder : ಹಿಂದೂ ಯುವಕ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಸಾವು ಇಡೀ ಹಿಂದೂ ಸಮುದಾಯವನ್ನೇ ಬೆಚ್ಚಿ ಬೀಳಿಸಿದೆ. ಧರ್ಮದ ಹೆಸರಿನಲ್ಲಿ ಹಿಂದೂ ಯುವಕರು ಬೀದಿ ಹೆಣವಾಗುತ್ತಿರುವುದನ್ನು ನೋಡುತ್ತಿದ್ದರೆ ಮನೆಯಲ್ಲಿ ಪೋಷಕರು ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಪಾಠ ಮಾಡೋದಕ್ಕೂ ಹೆದರುವಂತಹ ಪರಿಸ್ಥಿತಿ ಎದುರಾಗಿದೆ. ಪ್ರವೀಣ್​ ನೆಟ್ಟಾರು ಪ್ರಕರಣದಲ್ಲಿ ಆರೋಪಿಗಳನ್ನು ಹೆಡೆ ಮುರಿ ಕಟ್ಟಲು ಎಲ್ಲಾ ರೀತಿಯಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಶಫೀಕ್​ ಹಾಗೂ ಜಾಕೀರ್​ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪೊಲೀಸರು 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೇರಳಕ್ಕೂ ರಾಜ್ಯ ಪೊಲೀಸರು ಎಂಟ್ರಿ ಕೊಟ್ಟಿದ್ದು ಅಲ್ಲಿಯೂ ಕೂಡ ತನಿಖೆಯನ್ನು ನಡೆಸಲಾಗುತ್ತಿದೆ. ಪೊಲೀಸರು ಈವರೆಗೆ ವಶಕ್ಕೆ ಪಡೆದಿರುವ ಶಂಕಿತ ಆರೋಪಿಗಳಲ್ಲಿ ಇಬ್ಬರ ವಿರುದ್ಧ ಸಾಕ್ಷ್ಯಾಧಾರಗಳು ದೊರೆತ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್​ ಶಫೀಕ್​ ಹಾಗೂ ಜಾಕೀರ್​ ಎಂದು ಗುರುತಿಸಲಾಗಿದೆ.


ವಿದೇಶದಲ್ಲಿ ನಡೆದಿತ್ತಾ ಹತ್ಯೆಗೆ ಪ್ಲಾನ್​ ?
ಬಂಧಿತ ಮೊಹಮ್ಮದ್​ ಶಫೀಕ್​ ತಂದೆ ಇಬ್ರಾಹಿಂ ಮೂರು ತಿಂಗಳುಗಳ ಕಾಲ ಇದೇ ಪ್ರವೀಣ್​ ನೆಟ್ಟಾರು ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿದ್ದರಂತೆ. ಮೂರು ತಿಂಗಳ ಬಳಿಕ ಇಬ್ರಾಹಿಂ ಈ ಅಂಗಡಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದರು. ಇಬ್ರಾಹಿಂ ಪುತ್ರನಾದ ಮೊಹಮ್ಮದ್​ ಶಫೀಕ್​ನನ್ನು ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಈತ ಟೆಲಿಗ್ರಾಂ ಮೂಲಕ ವಿದೇಶಿ ವ್ಯಕ್ತಿಗಳ ಜೊತೆ ಮಾತನಾಡಿರುವ ವಿಚಾರ ಬೆಳಕಿಗೆ ಬಂದಿದೆ.


ಶಫೀಕ್​ ಟೆಲಿಗ್ರಾಂ ಮೂಲಕ ದುಬೈನಲ್ಲಿರುವ ವ್ಯಕ್ತಿಗಳ ಜೊತೆ ಮಾತನಾಡಿದ್ದು ಪ್ರವೀಣ್​ ಚಲನವಲನಗಳ ಬಗ್ಗೆ ಮಾಹಿತಿ ನೀಡಿರುವ ಸಾಧ್ಯತೆಯಿದೆ.ಹೀಗಾಗಿ ಪ್ರವೀಣ್​ ನೆಟ್ಟಾರು ಕೊಲೆಗೆ ವಿದೇಶದಲ್ಲಿ ಸ್ಕೆಚ್​ ಹಾಕಲಾಗಿತ್ತಾ ಎಂಬ ಗುಮಾನಿ ಆರಂಭಗೊಂಡಿದೆ. ಆದರೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಶಫೀಕ್​ ತಂದೆ ಇಬ್ರಾಹಿಂ ನಮ್ಮ ಮಗ ಶಫೀಕ್​ ಯಾವುದೇ ಕೊಲೆ ಮಾಡಿಲ್ಲ. ಪ್ರವೀಣ್​ ಕೊಲೆಯಾಗುವ ಸಂದರ್ಭದಲ್ಲಿಯೂ ಈತ ಮನೆಯಲ್ಲಿಯೇ ಇದ್ದ, ಇದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದು ಹೇಳಿದ್ದೆ.


ಪ್ರವೀಣ್​ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಜಾಕೀರ್​..!
ಇನ್ನು ಪೊಲೀಸರ ವಿಚಾರಣೆ ವೇಳೆ ಬಂಧನಕ್ಕೊಳಗಾಗಿರುವ ಜಾಕೀರ್​​ ಪ್ರವೀಣ್​ ಕೊಲೆಯಾಗುವ ಕೆಲವೇ ನಿಮಿಷಗಳ ಮುನ್ನ ಅಕ್ಷಯ ಕೋಳಿ ಅಂಗಡಿ ಎದುರು ಚಲನ ವಲನ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ ಈತ ಕೊಲೆ ಮಾಡಲು ಬಂದಿದ್ದ ಆರೋಪಿಗಳಿಗೆ ಪ್ರವೀಣ್​ ಚಲನವಲನಗಳ ಬಗ್ಗೆ ಮಾಹಿತಿ ನೀಡಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇದನ್ನು ಓದಿ : Bommai press conference : ಆತ್ಮಸಾಕ್ಷಿಗೆ ಅನುಗುಣವಾಗಿ ಜನೋತ್ಸವ ರದ್ದು; ಪ್ರವೀಣ್​ ಹಂತಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ – ಸಿಎಂ ಬೊಮ್ಮಾಯಿ ಅಭಯ

ಇದನ್ನೂ ಓದಿ : CM Basavaraja Bommai : ಪ್ರವೀಣ್​ ನೆಟ್ಟಾರು ನಿವಾಸಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

Explosive information was revealed during the investigation about Praveen Nettaru’s murder accused

Comments are closed.