ದಕ್ಷಿಣ ಕನ್ನಡ, ಮೈಸೂರಲ್ಲಿ ತಗ್ಗುತ್ತಿಲ್ಲ ಕೊರೊನಾ ಅಬ್ಬರ : ಸೋಂಕು, ಸಾವು ಹೆಚ್ಚಳ, ಮುಂದುವರಿಯುತ್ತಾ ಲಾಕ್ ಡೌನ್ ..!!!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ಆದ್ರೆ ರಾಜ್ಯ 8 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಅದ್ರಲ್ಲೂ ಕರಾವಳಿಯ ಬಂದರು ನಗರಿ ದಕ್ಷಿಣ ಕನ್ನಡ, ಅರಮನೆ ನಗರ ಮೈಸೂರು ಕೊರೊನಾ ಡೇಂಜರ್ ಸಿಟಿಯಾಗಿ ಮಾರ್ಪಟ್ಟಿದೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದೆ. ರಾಜ್ಯದಲ್ಲಿ 11 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಪ್ರಕ್ರಿಯೆ ಜಾರಿ ಮಾಡಲಾಗಿದೆ. ಆದರೆ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಹೇರಿಕೆ ಮಾಡಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿಲ್ಲ. ಈ ಜಿಲ್ಲೆಗಳಲ್ಲಿ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತಲೂ ಹೆಚ್ಚಿದ್ದು, ಅಪಾಯಕಾರಿಯಾಗಿ ಮಾರ್ಪಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿರೇಟ್ ಶೇ.10.07ರಷ್ಟಿದ್ದು ಜಿಲ್ಲೆಯಲ್ಲಿ 6.931 ಸಕ್ರೀಯ ಪ್ರಕರಣಗಳಿವೆ. ಇನ್ನು ಮೈಸೂರಿ ನಲ್ಲಿ ಶೇ.10ರಷ್ಟು ಪಾಸಿಟಿವಿ ರೇಟ್ ಇದ್ದರೆ, 8,346 ಸಕ್ರೀಯ ಪ್ರಕರಣಗಳಿವೆ. ಉಳಿದಂತೆ ಹಾಸನ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.7.44 ಇದ್ದು, 5,733 ಸಕ್ರೀಯ ಪ್ರಕರಣಗಳಿವೆ. ಮಂಡ್ಯ ಜಿಲ್ಲೆಯಲ್ಲಿ ಶೇ.6.34ರಷ್ಟು ಪಾಸಿಟಿವಿಟಿ ರೇಟ್ ಇದ್ದರೆ, 2,989 ಕೊರೊನಾ ಪ್ರಕರಣಗಳಿವೆ. ಅತೀ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ್ದ ಚಿಕ್ಕಮಗಳೂರಲ್ಲಿ ಕೊಂಚ ಮಟ್ಟಿಗೆ ಕಡಿಮೆ ಯಾಗಿದ್ರೂ ಕೂಡ ಜಿಲ್ಲೆಯಲ್ಲಿ ಶೇ.6 ಪಾಸಿಟಿವಿಟಿ ರೇಟ್ ಇದ್ದು, 2,926 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶೇ 5.5 ಪಾಸಿಟಿವಿಟಿ ರೇಟ್, 1,451 ಸಕ್ರೀಯ ಪ್ರಕರಣವಿದೆ. ದಾವಣಗೆರೆಯಲ್ಲಿ ಶೇ.5.31 ಪಾಸಿಟಿವಿಟಿ ರೇಟ್ 2,584 ಸಕ್ರೀಯ ಪ್ರಕರಣಗಳಿದ್ದರೆ, ಚಾಮರಾಜನಗರದಲ್ಲಿ ಶೇ.5.32ರಷ್ಟು ಪಾಸಿಟಿವಿಟಿ ರೇಟ್ ಹಾಗೂ 2,584 ಸಕ್ರೀಯ ಪ್ರಕರಣಗಳಿವೆ.

ಅತೀ ಹೆಚ್ಚು ಸಕ್ರೀಯ ಪ್ರಕರಣ ಹಾಗೂ ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ, ಮೈಸೂರು ಹಾಗೂ ಹಾಸನ ಜಿಲ್ಲೆಗಳು ಕೊರೊನಾ ಹಾಟ್ ಸ್ಪಾಟ್ ಆಗಿ ಮಾರ್ಪಡುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದಲೂ ಕಠಿಣ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ರೆ, ಮೈಸೂರಲ್ಲಿ 500ರ ಗಡಿಯಲ್ಲಿದೆ. ಒಂದೊಮ್ಮೆ ಅನ್ ಲಾಕ್ ಜಾರಿ ಮಾಡಿದ್ರೆ ಸೋಂಕು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಚಿಂತನೆ ನಡೆಸುತ್ತಿದೆ.

Comments are closed.