ಭಾನುವಾರ, ಏಪ್ರಿಲ್ 27, 2025
Homekarnatakaಚಿಕ್ಕಮಗಳೂರಿನ ಬಾಬಾಬುಡ್‌ ಗಿರಿಯಲ್ಲಿ ದತ್ತ ಜಯಂತಿ : ಅರ್ಚರಿಗೆ ಅಂಗರಕ್ಷಕರ ನೇಮಕ

ಚಿಕ್ಕಮಗಳೂರಿನ ಬಾಬಾಬುಡ್‌ ಗಿರಿಯಲ್ಲಿ ದತ್ತ ಜಯಂತಿ : ಅರ್ಚರಿಗೆ ಅಂಗರಕ್ಷಕರ ನೇಮಕ

- Advertisement -

ಚಿಕ್ಕಮಗಳೂರು : ದತ್ತಜಯಂತಿಗಾಗಿ (Datta Jayanti ) ಕಾಫಿನಾಡು ಚಿಕ್ಕಮಗಳೂರು ಸಜ್ಜಾಗುತ್ತಿದೆ. ಹಿಂದೂ – ಮುಸ್ಲೀಂಮರ ಧಾರ್ಮಿಕ, ಭಾವೈಕ್ಯತಾ ಕೇಂದ್ರ ಎನಿಸಿಕೊಂಡಿರುವ ಚಿಕ್ಕಮಗಳೂರಿನ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್‌ ಸ್ವಾಮಿ ದರ್ಗಾದಲ್ಲಿ(Baba budan swami Dargha) ದತ್ತಜಯಂತಿಗಾಘಿ ಸಿದ್ದತೆ ಜೋರಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರು ಅರ್ಚಕರಿಗೆ ಚಿಕ್ಕಮಗಳೂರು ಎಸ್‌ಪಿ ಅಂಗರಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳದ ವತಿಯಿಂದ ಬಾಬಾಬುಡನ್‌ಗಿರಿಯಲ್ಲಿ ದತ್ತಜಯಂತಿ ನಡೆಯಲಿದೆ. ಡಿಸೆಂಬರ್‌ 17 ರಿಂದಲೇ ದತ್ತಜಯಂತಿಗೆ ಚಾಲನೆ ದೊರೆತಿದೆ. 10 ದಿನಗಳ ಕಾಲ ದತ್ತಜಯಂತಿ ಆಚರಣೆ ನಡೆಯಲಿದ್ದು, ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ದತ್ತಜಯಂತಿಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

Datta Jayanti at Baba budan swami Dargha December 26 Chikkamagaluru Police Appoint Bodyguards including preist
Image Credit to Original Source

ಡಿಸೆಂಬರ್‌ 26ರಂದು ದತ್ತಪೀಠದಲ್ಲಿ ದತ್ತಪಾದುಕೆಯ ದರ್ಶನ ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಸುಮಾರು 30,000 ಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಲಿದ್ದಾರೆ. ಬಾಬಾಬುಡನ್‌ ಗಿರಿಯಲ್ಲಿ ದತ್ತಪಾದುಕೆ ದರ್ಶಕ ಹಾಗೂ ಹೋಮ ಹವನ ನೆರವೇರಲಿದೆ. ದತ್ತಜಯಂತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬೃಹತ್‌ ಶೋಭಾಯಾತ್ರೆ ನಡೆಯಲಿದೆ.

ಇದನ್ನೂ ಓದಿ : ಭಾರತದಲ್ಲಿ ಕೊರೊನಾ ಭೀತಿ, ಜಾರಿಯಾಗುತ್ತಾ ಲಾಕ್‌ಡೌನ್‌ ? ಸರಕಾರ ಮಾರ್ಗಸೂಚಿಯಲ್ಲೇನಿದೆ ?

ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿನ ಇಬ್ಬರು ಅರ್ಚಕರಾದ ಶ್ರೀಧರ ಪೂಜಾರ್‌, ಶಿವರಾಂ ಅವರಿಗೆ ಅಂಗರಕ್ಷಕರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಮುಜಾವರ್‌ಗಳಾದ ಸೈಯದ್‌ ಅಖಿಲ್‌ ಪಾಷಾ ಹಾಗೂ ವ್ಯವಸ್ಥಾಪನಾ ಸಮಿತಿಯ ಮುಸ್ಲೀಂ ಸದಸ್ಯ ಭಾಷಾ ಅವರಿಗೂ ಕೂಡ ಅಂಗರಕ್ಷಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ : ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ? ಹಣ ವರ್ಗಾವಣೆಗೆ ಜಾರಿಯಾಯ್ತು ಹೊಸ ರೂಲ್ಸ್‌

ಈ ಐವರಿಗೆ ದಿನದ 24 ಗಂಟೆಗಳ ಕಾಲ ಭದ್ರತೆಯನ್ನು ಒದಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಅರ್ಚಕರ ವಿಳಾಸ ಹಂಚಿಕೊಳ್ಳದಂತೆ ಚಿಕ್ಕಮಗಳೂರಿನ ನಿವಾಸಿಗಳಿಗೆ ಪೊಲೀಸ್‌ ಇಲಾಖೆ ಮನವಿಯನ್ನು ಮಾಡಿಕೊಂಡಿದೆ. ಈ ಬಾರಿಯ ದತ್ತ ಜಯಂತಿಯಂದು ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಸುಮಾರು 4 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮಾಲಾಧಾರಣೆ ಮಾಡಲಿದ್ದಾರೆ.

Datta Jayanti at Baba budan swami Dargha December 26 Chikkamagaluru Police Appoint Bodyguards including preist
Image Credit to Original Source

ಇದನ್ನೂ ಓದಿ : ಕರ್ನಾಟಕದಲ್ಲಿ ಮತ್ತೆ ಕೋವಿಡ್‌ ಆತಂಕ : 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ

ದತ್ತಪೀಠದಲ್ಲಿ ನಡೆಯುವ ದತ್ತಜಯಂತಿಗಾಗಿ ಚಿಕ್ಕಮಗಳೂರು ನಗರ ಸಂಪೂರ್ಣವಾಗಿ ಕೇಸರಿಮಯವಾಗಲಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ದತ್ತಪೀಠ ವಿವಾದಿತ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ದತ್ತಜಯಂತಿಯ ದಿನದಂದು ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗುತ್ತದೆ.

Datta Jayanti at Baba budan swami Dargha December 26 Chikkamagaluru Police Appoint Bodyguards including preist

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular