ಬೆಂಗಳೂರು : ಹಬ್ಬ ಬಂತಂದ್ರೆ ಸಾಕು ಖಾಸಗಿ ಬಸ್ ಗಳು ಟಿಕೆಟ್ ದರದಲ್ಲಿ (Deepavali bus fares) ಪೈಪೋಟಿಗೆ ಇಳಿಯುತ್ತವೆ. ಈ ಬಾರಿ ದೀಪಾವಳಿಯ ಜೊತೆಗೆ ಸಾಲು ಸಾಲು ರಜೆಯಿಂದಾಗಿ ತಮ್ಮೂರಿಗೆ ಹೊರಟವರು ಇದೀಗ ಖಾಸಗಿ ಬಸ್ ಟಿಕೆಟ್ ದರ ಕೇಳಿ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಬಸ್ ಗಳು ಟಿಕೆಟ್ ಗೆ 5 ಸಾವಿರ ರೂಪಾಯಿ ದರ ನಿಗದಿ ಮಾಡಿದ್ರೆ, ಬೆಂಗಳೂರಿನಿಂದ ಉಡುಪಿ, ಮಂಗಳೂರಿಗೆ ಎರಡು ಸಾವಿರದ ರೂಪಾಯಿ ವಿಧಿಸುತ್ತಿವೆ. ಇದರಿಂದಾಗಿ ಹಬ್ಬ ಆಚರಣೆಗೆ ಊರಿಗೆ ಹೊರಟವರು ಕಂಗಾಲಾಗಿದ್ದಾರೆ.
ವರ್ಷಂಪ್ರತಿ ಯಾವುದೇ ಹಬ್ಬ ಬಂದ್ರೂ ಕೂಡ ಖಾಸಗಿ ಬಸ್ ಗಳು ದರ ಏರಿಸುವುದು ಸರ್ವೆ ಸಾಮಾನ್ಯ. ಆದ್ರೆ ಕಳೆದ ಎರಡು ವರ್ಷಗಳ ಕಾಲ ದೀಪಾವಳಿಗೆ ಕೊರೊನಾ ಕರಿನೆರಳು ಚಾಚಿತ್ತು. ಆದ್ರೆ ಈ ಬಾರಿ ಜನರ ಕೊರೊನಾ ಮರೆತು ಅದ್ದೂರಿಯಾಗಿ ದೀಪಾವಳಿ ಆಚರಿಸೋದಕ್ಕೆ ರೆಡಿ ಆಗಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಗಳು ಹಣಗಳಿಗೆ ಮುಂದಾಗಿವೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ ಖಾಸಗಿ ಬಸ್ ಗಳು ಒಂದು ಸಾವಿರ ರೂಪಾಯಿ ಟಿಕೆಟ್ ಬೆಲೆ ಇದ್ರೆ, ಇದೀಗ ದೀಪಾವಳಿ ಹೊತ್ತಲ್ಲೇ ಬೆಂಗಳೂರಿನಿಂದ ಹುಬ್ಬಳ್ಳಿಗೆ 5 ಸಾವಿರ ರೂಪಾಯಿ ದರ ಫಿಕ್ಸ್ ಮಾಡಿವೆ. ಇದರ ಬೆನ್ನಲ್ಲೇ ಹೆಚ್ಚುವರಿ ಕೆಎಸ್ ಆರ್ ಟಿಸಿ ಬಸ್ ಅಥವಾ ವಿಶೇಷ ರೈಲು ಸೇವೆ ಒದಗಿಸುವಂತೆ ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು – ಹುಬ್ಬಳ್ಳಿಯ ನಡುವೆ ಖಾಸಗಿ ಬಸ್ ಗಳು ದರ ಸಮರಕ್ಕೆ ಇಳಿದಿವೆ ಎನ್ನುವ ಕುರಿತು ಹುಬ್ಬಳ್ಳಿ-ಧಾರವಾಡ ಇನ್‌ಫ್ರಾ ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ ದರಪಟ್ಟಿಯನ್ನು ಪೋಸ್ಟ್ ಮಾಡಿದೆ. ಬಸ್ ಹಾಗೂ ವಿಮಾನ ದರಗಳ ಸ್ಕ್ರೀನ್ ಶಾಟ್ ರಿಲೀಸ್ ಮಾಡಿದ್ದು, ಸಾರಿಗೆ ಸಚಿವ ಶ್ರೀರಾಮುಲು ಅವರಿಗೂ ಕೂಡ ಟ್ಯಾಗ್ ಮಾಡಲಾಗಿದೆ. ಜೊತೆಗೆ ಸಾಕಷ್ಟು ಜನರು ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಕ್ಟೋಬರ್ 21ರಂದು ಟಿಕೆಟ್ ಬೆಲೆಯನ್ನು ದುಪ್ಪಟ್ಟು ಏರಿಸಲಾಗಿದೆ. ಇಂದು ಕೆಎಸ್ ಆರ್ ಟಿಸಿ ಹುಬ್ಬಳ್ಳಿಗೆ 54 ಬಸ್ ಸಂಚಾರ ಮತ್ತು ಧಾರವಾಡಕ್ಕೆ 39 ಬಸ್ ಸೇವೆ ಒದಗಿಸಿದೆ. ಈ ಬಸ್ ಗಳಲ್ಲಿ ಟಿಕೆಟ್ ಖಾಲಿ ಇದ್ದು ಜನರು ಈ ಸೇವೆಯನ್ನು ಪಡೆದುಕೊಳ್ಳಬೇಕು. ಇಲ್ಲಾ ಕಾರ್ ಪೂಲ್ ಮಾಡಿಕೊಂಡು ಪ್ರಯಾಣಿಸುವಂತಹ ಸಲಹೆಗಳನ್ನೂ ನೀಡುತ್ತಿದ್ದಾರೆ. ಇನ್ನು ಬೆಂಗಳೂರಿನಿಂದ ಹುಬ್ಬಳ್ಳಿ ವಿಮಾನದಲ್ಲಿ ಪ್ರಯಾಣಿಸಿದ್ರೂ ಕೂಡ ಟಿಕೆಟ್ ದರ ಏಳು ಸಾವಿರ ರೂಪಾಯಿ ಇದೆ. ಹೀಗಾಗಿ ಬಸ್ ಬದಲು ಹಲವು ವಿಮಾನ ಪ್ರಯಾಣವೇ ಬೆಸ್ಟ್ ಅನ್ನುತ್ತಿದ್ದಾರೆ.
Bus fares in between Bengaluru and Hubballi giving tough competition to flights😐
— Hubballi-Dharwad Infra (@Hubballi_Infra) October 19, 2022
And @SWRRLY is yet to notify special trains for Deepavali@sriramulubjp sir for your information!#Hubballi #Bengaluru #Deepavali #DeepavaliSpecial pic.twitter.com/YUnQrSJlQv
Deepavali bus fares : ಪುಣ್ಯಕ್ಷೇತ್ರಗಳ ದರ್ಶನಕ್ಕೂ ದುಪ್ಪಟ್ಟು ಬೆಲೆ
ದೀಪಾವಳಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಸುಮಾರು 1,500 ವಿಶೇಷ ಬಸ್ ಸೇವೆಯನ್ನು ಒದಗಿಸಿದೆ. ಹಲವರು ತಿಂಗಳು ಮೊದಲೇ ರೈಲು, ಬಸ್ ಟಿಕೆಟ್ ಬುಕ್ ಮಾಡಿಕೊಂಡು ತಮ್ಮೂರಿಗೆ ಅಥವಾ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡಲು ರೆಡಿ ಆಗಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿ, ಗೋಕರ್ಣಕ್ಕೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಜೊತೆಗೆ ಕುಂದಾಪುರ, ಉಡುಪಿ, ಮಂಗಳೂರು, ಧಾರವಾಡ, ದಾವಣಗೆರೆ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ವಿಜಯಪುರ, ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ.
ಖಾಸಗಿ ಬಸ್ ಗಳಿಗೆ ದಂಡ ವಿಧಿಸಿದ ಆರ್ ಟಿಓ
ದೀಪಾವಳಿ ನೆಪದಲ್ಲಿ ಪ್ರಾಯಾಣಿಕರಿಂದ ಸುಲಿಗೆಗೆ ಮುಂದಾಗಿರುವ ಖಾಸಗಿ ಬಸ್ ಗಳಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಈಗಾಗಲೇ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವ ಖಾಸಗಿ ಬಸ್ ಗಳನ್ನು ಅಡ್ಡಗಟ್ಟಿ ಟಿಕೆಟ್ ಪರಿಶೀಲನೆಯ ಕಾರ್ಯವನ್ನು ಆರ್ ಟಿಓ ಅಧಿಕಾರಿಗಳು ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದಲೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ದುಪ್ಪಟ್ಟು ಟಿಕೆಟ್ ದರ ವಿಧಿಸದಂತೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ಇದನ್ನೂ ಓದಿ : BBMP Target teachers : ಶಿಕ್ಷಕರಿಗೆ ಬಿಬಿಎಂಪಿ ಶಾಕ್ : ರಿಸಲ್ಟ್ ಹೆಚ್ಚಿಸದಿದ್ದರೇ ಕೆಲಸಕ್ಕೆ ಬೀಳಲಿದೆ ಕತ್ತರಿ
ಇದನ್ನೂ ಓದಿ : 108 employees warn strike : ದಸರಾ ಆಯ್ತು ದೀಪಾವಳಿ ಬಂದ್ರೂ ಸಂಬಳವಿಲ್ಲ: ಮುಷ್ಕರದ ಎಚ್ಚರಿಕೆ ಕೊಟ್ಟ 108 ಸಿಬ್ಬಂದಿ
Deepavali Bengaluru-Hubballi bus fares 5000 rupees bus tough competition between flights