Dhruva Sarja KD Movie : ಕೇಡಿ ಅವತಾರದಲ್ಲಿ ಆಕ್ಷ್ಯನ್ ಪ್ರಿನ್ಸ್ : ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್

ರೌಡಿಸಂ ಚಿತ್ರಗಳಲ್ಲಿ ಹೊಸ ಭಾಷ್ಯ ಬರೆದ ನಿರ್ದೇಶಕ ಪ್ರೇಮ್ ಹಾಗೂ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ ಒಟ್ಟಾಗಿ ಸಿನೆಮಾ ಮಾಡ್ತಿರೋದೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಈಗ ಅಷ್ಟೇ ಕುತೂಹಲಕರ ಟೈಟಲ್ ಜೊತೆ ಚಿತ್ರತಂಡ ಕನ್ನಡಿಗರಿಗೆ ಸಪ್ರೈಸ್ ನೀಡಿದೆ. ಸಖತ್ ಕುತೂಹಲ ಮೂಡಿಸಿದ ಪ್ರೇಮ್ ಹಾಗೂ ಧ್ರುವ ಸರ್ಜಾ ಸಿನಿಮಾದ ಟೈಟಲ್ ಲಾಂಚ್ ಆಗಿದ್ದು ಕೇಡಿ (Dhruva Sarja KD Movie) ಎಂದು ಹೆಸರಿಡಲಾಗಿದೆ. ಜೊತೆಗೆ ದಿ ಡೆವಿಲ್ ಎಂಬ ಅಡಿ ಬರಹವನ್ನು ನೀಡಲಾಗಿದೆ.

ನಗರದ ಮಾಲ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವು ಖ್ಯಾತ ಗಣ್ಯರು ಸಿನಿಮಾ ಟೈಟಲ್ ಲಾಂಚ್ ಮಾಡಿದ್ದಾರೆ. ಕೇವಲ ಟೈಟಲ್ ಅನಾವರಣ ಮಾತ್ರವಲ್ಲ ಟೈಟಲ್ ಜೊತೆಗೆ ಟೈಟಲ್ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಇದರಲ್ಲಿ ರಕ್ತಸಿಕ್ತ ರೂಪದಲ್ಲಿ ಸಖತ್ ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಬಾಯಲ್ಲಿ ಲಾಂಗ್ ಕೊಚ್ಚಿಕೊಂಡು ರೌದ್ರರೂಪದಲ್ಲಿ ಕಾಣಿಸಿಕೊಳ್ಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇದು ಧ್ರುವ ಸರ್ಜಾ ನಟನೆಯ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಚಿತ್ರದ ಕಥೆ 1970 ರ ದಶಕದಲ್ಲಿ ಸಾಗಲಿದೆ ಎನ್ನಲಾಗ್ತಿದೆ. ಈ‌ ಮೊದಲು ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಅದು ಸಿನಿಮಾ 70 ರ ದಶಕದ ಕತೆಯನ್ನು ಹೊಂದಿದೆ ಎಂಬ ಸೂಚನೆ ನೀಡಿತ್ತು. ಈಗ ರಿಲೀಸ್ ಆಗಿರೋ ಪೋಸ್ಟ್ ಆ ನೀರಿಕ್ಷೆಯನ್ನು ಹೆಚ್ಚಿಸುವಂತಿದೆ. ಕೇಡಿ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲ ಹಿಂದಿ,ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಮೂಡಿ ಬರಲಿದೆ. ಕೆವಿಎನ್ ಪ್ರೊಡಕ್ಷನ್ ಈ ಸಿನಿಮಾ ನಿರ್ಮಿಸುತ್ತಿದೆ.

ಇನ್ನು ಸಂಜೆ ರಿಲೀಸ್ ಆಗಿರೋ ಕೇಡಿ ಟೈಟಲ್ ಟೀಸರ್ ಕೇವಲ 15 ನಿಮಿಷದಲ್ಲಿ 40 ಲಕ್ಷ ವೀವ್ಸ್ ಕಂಡಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಸದ್ಯ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಸಿನಿಮಾದ ರಿಲೀಸ್ ಕಾರ್ಯಕ್ರಮಗಳ ಭರಾಟೆ ಮುಗಿದ ಬಳಿಕ ಧ್ರುವ ಸರ್ಜಾ ಕೇಡಿಗಾಗಿ ಬಣ್ಣ ಹಚ್ಚಲಿದ್ದಾರಂತೆ. ಸದ್ಯ ನಟ ಧ್ರುವ್ ಸರ್ಜಾ ತಂದೆಯಾಗಿರೋ ಸಂಭ್ರಮದಲ್ಲಿದ್ದಾರೆ. ಸದ್ಯದಲ್ಲೇ ತಮ್ಮ ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸೋದಾಗಿಯೂ ನಟ ಧ್ರುವ ಸರ್ಜಾ ಭರವಸೆ ನೀಡಿದ್ದಾರೆ.

KD Movie ಟೈಟಲ್‌ ರಿಲೀಸ್‌ ಕಾರ್ಯಕ್ರಮವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

https://www.youtube.com/watch?v=KhwiQYb1R7U

ಇದನ್ನೂ ಓದಿ : Puneeth Parva : “ಪುನೀತ್‌ ಪರ್ವ” “ಗಂಧದಗುಡಿ” ಫ್ರೀ ರೀಲಿಸ್‌ ಕಾರ್ಯಕ್ರಮ : ಅಭಿಮಾನಿಗಳಿಗೆ ಹಬ್ಬ

ಇದನ್ನೂ ಓದಿ : Shivrajkumar Movie: ಶಿವಣ್ಣನ 125ನೇ ಸಿನಿಮಾ ರಿಲೀಸ್‍ಗೆ ಮುಹೂರ್ತ ಫಿಕ್ಸ್..!

Dhruva Sarja new Movie KD Title Launch

Comments are closed.