Praveen’s murder : ಪ್ರವೀಣ್ ಹತ್ಯೆ- ಎನ್.ಐ.ಎ ತನಿಖೆಯಲ್ಲಿ ಹಲವು ಸ್ಫೋಟಕ ಅಂಶ ಬಹಿರಂಗ

ಮಂಗಳೂರು : Praveen’s murder : ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್.ಐ.ಎ ಗೆ ವಹಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಈ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇದೀಗ ಎನ್.ಐ.ಎ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹಲವು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳು ಪಿ.ಎಫ್.ಐ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎನ್ನುವುದು ಗೊತ್ತಾಗಿದೆ.

ನಿನ್ನೆ ಬೆಳ್ಳಂ ಬೆಳಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದ ಹಾಗೂ ಕೊಡಗು, ಮೈಸೂರು ಜಿಲ್ಲೆಗಳ 33 ಕಡೆ ಏಕಕಾಲದಲ್ಲಿ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಮೂವರು ಪ್ರಮುಖ ಹತ್ಯೆ ಆರೋಪಿಗಳು ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದ್ದು, ಅವರ ಮನೆ ಮತ್ತು ಅವರಿಗೆ ಸಹಕರಿಸಿದವರ ಮನೆ ಮತ್ತು ಕಚೇರಿಗಳಿಗೆ ದಾಳಿ ನಡೆಸಿದ್ದಾರೆ‌. ಈ ದಾಳಿ ವೇಳೆ ಬಳಸಿದ ಮದ್ದುಗುಂಡು, ಸುಧಾರಿತ ಶಸ್ತ್ರಾಸ್ತ್ರ, ಡಿಜಿಟಲ್ ಸಾಧನಗಳು, ದಾಖಲೆ ಪತ್ರ, ಕರಪತ್ರಗಳು, ನಗದು ಪತ್ತೆಯಾಗಿದೆ.

ಈ ದಾಳಿಯ ಬಗ್ಗೆ ರಾಷ್ಟ್ರೀಯ ತನಿಖಾ ದಳ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಬಂಧಿತ ಆರೋಪಿಗಳು ಪಿ.ಎಫ್.ಐ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಎನ್ನುವುದನ್ನು ಹೇಳಿದೆ‌. ಇದರ ಜೊತೆ ಒಂದು ಸಮುದಾಯದಲ್ಲಿ ಭೀತಿ ಮೂಡಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂಬುದನ್ನು ಸಹ ತಿಳಿಸಲಾಗಿದೆ. ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶದಲ್ಲಿ ಕೊಲೆಗೆ ಷಡ್ಯಂತ್ರ ನಡೆಸಿದ್ದರು ಎಂದು ತನಿಖೆಯಲ್ಲಿ ಕಂಡು ಬಂದಿರುವುದಾಗಿ ಮೆನ್ಸನ್ ಮಾಡಲಾಗಿದೆ.

ಸದ್ಯ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆಯನ್ನು ಎನ್.ಐ.ಎ ಅಧಿಕಾರಿಗಳು ನಡೆಸುತ್ತಿದ್ದಾರೆ‌. ಎನ್.ಐ.ಎ ಅಧಿಕಾರಿಗಳ ತಂಡಕ್ಕೆ ಕರ್ನಾಟಕ ರಾಜ್ಯ ಪೊಲೀಸರು ಸಾಥ್ ನೀಡಿದ್ದಾರೆ. ಒಟ್ಟಿನಲ್ಲಿ ಪ್ರವೀಣ್ ಹತ್ಯೆ ನಡೆದ ಸಂದರ್ಭದಲ್ಲಿಯೇ ಸಂಘಟನೆಯೊಂದರ ಕೈವಾಡವಿರುವ ಮಾತು ಬಲವಾಗಿ ಕೇಳಿಬಂದಿತ್ತು. ಇದೀಗ ಎನ್.ಐ.ಎ ಪ್ರಾಥಮಿಕ ತನಿಖೆಯಲ್ಲಿಯು ಅದು ರುಜುವಾತುವಾಗಿದೆ.

ಇದನ್ನು ಓದಿ : Minister Umesh Katti : ಸಚಿವ ಉಮೇಶ್​ ಕತ್ತಿ ನಿಧನಕ್ಕೆ ಜಗದೀಶ್​ ಶೆಟ್ಟರ್​,ಬಸವರಾಜ ಹೊರಟ್ಟಿ ಸಂತಾಪ

ಇದನ್ನೂ ಓದಿ : Minister Umesh Katti : ಸಚಿವ ಉಮೇಶ್​ ಕತ್ತಿ ನಿಧನಕ್ಕೆ ಜಗದೀಶ್​ ಶೆಟ್ಟರ್​,ಬಸವರಾಜ ಹೊರಟ್ಟಿ ಸಂತಾಪ

Praveen’s murder- Many explosive elements were revealed in the NIA investigation

Comments are closed.