ಬೆಂಗಳೂರು : ರಾಜ್ಯದಲ್ಲಿ ಪಠ್ಯದಲ್ಲಿ ಕೇಸರೀಕರಣ ನಡೆಯುತ್ತಿದೆ ಎಂಬ ಅರೋಪ ಹಾಗೂ ಕೇಸರೀಕರಣ ಆರೋಪದ ವಿರುದ್ಧ ಸರ್ಕಾರ ಹಾಗೂ ಶಿಕ್ಷಣ ಸಚಿವರಿಂದ ಕಾಂಗ್ರೆಸ್ ಮೇಲೆ ಪ್ರತ್ಯಾರೋಪ ಜೋರಾಗಿಯೇ ನಡೆದಿದೆ. ಈ ಮಧ್ಯೆ ಪಠ್ಯದಲ್ಲಿ ಕೇಸರೀಕರಣದ ಬಗ್ಗೆ ಸಾಹಿತಿ ದೇವನೂರು ಮಹಾದೇವ (Devanur Mahadeva) ಅವರು ಅಸಮಧಾನ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ಪತ್ರ ಸಂಚಲನ ಮೂಡಿಸಿದೆ. ಪಠ್ಯದಲ್ಲಿ ಕೇಸರೀಕರಣ ನಡೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ವಿಚಾರ ಸರ್ಕಾರದ ಮಟ್ಟದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವಾಗಿರುವಾಗಲೇ ಈ ಬಗ್ಗೆ ಸಾಹಿತಿ ದೇವನೂರು ಮಹಾದೇವ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಕಥೆಯನ್ನೂ ಪಠ್ಯದಿಂದ ಕೈ ಬಿಡುವಂತೆ ಸರ್ಕಾರಕ್ಕೆ ದೇವನೂರು ಮಹಾದೇವ (Devanur Mahadeva) ಪತ್ರ ಬರೆದಿದ್ದು, ಈಗ ಪಠ್ಯ ಪರಿಷ್ಕರಣೆ ಬಗ್ಗೆ ವಾದ ವಿವಾದಗಳನ್ನು ನಾನು ಗಮನಿಸುತ್ತಿದ್ದೇನೆ. ಹತ್ತನೆ ತರಗತಿಯ ಪಠ್ಯದಲ್ಲಿ ನನ್ನದೂ ಒಂದು ಪತ್ರವಿದೆ ಎಂದು ಗಮನಕ್ಕೆ ಬಂದಿದೆ. ಪರಿಷ್ಕರಣೆಯಲ್ಲಿ ಇಲ್ಲ ಅಂತ, ಉಂಟು ಅಂತ ಗಳಿಗೆಗೊಂದು ಬದಲಾವಣೆ ಆಗುತ್ತಿದೆ. ಹೀಗಾಗಿ ಈ ಪಠ್ಯದಲ್ಲಿ ನನ್ನ ಕಥೆ ಸೇರಿಸದಿದ್ದರೆ ನನಗೆ ಸಂತೋಷವಾಗುತ್ತದೆ. ಈ ಹಿಂದೆ ತಾನು ನೀಡಿದ ಅನುಮತಿಯನ್ನು ವಾಪಾಸ್ ಪಡೆದಿರುವುದಾಗಿಯೂ ಪತ್ರದಲ್ಲಿ ದೇವನೂರು ಮಹಾದೇವ ಉಲ್ಲೇಖಿಸಿದ್ದಾರೆ.
ತಮ್ಮ ಪಠ್ಯವನ್ನು ಯಾಕೆ ಕೈಬಿಡಬೇಕು ಎಂಬುದನ್ನು ವಿವರಿಸಿರುವ ಸಾಹಿತಿ ದೇವನೂರ ಮಹಾದೇವ (Devanur Mahadeva) ಅವರು, ಎಲ್ ಬಸವಾರಾಜು, ಎ.ಎನ್ ಮೂರ್ತಿ ರಾವ್, ಪಿ ಲಂಕೇಶ್, ಸಾರಾ ಅಬೂಬಕ್ಕರ್ ಮುಂತಾವದರವ ಬರಹಗಳನ್ನು ಪಠ್ಯದಿಂದ ಕೈ ಬಿಡಲಾಗಿದೆ. ಇವರ ಪಠ್ಯ ಕೈಬಿಟ್ಟವರಿಗೆ ಕನ್ನಡ, ನಾಡು, ನುಡಿ, ಸಂಸ್ಕೃತಿ ಬಗ್ಗೆ ಏನೇನು ತಿಳಿದಿಲ್ಲಾ ಎಂದೇ ಅರ್ಥ ಎಂದಿದ್ದಾರೆ. ಅಷ್ಟೇ ಅಲ್ಲ ಪ್ರಸ್ತುತ ಸರ್ಕಾರದಿಂದ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿರೋ ರೋಹಿತ್ ಚಕ್ರತೀರ್ಥ ವಿರುದ್ಧವೂ ಮಹಾದೇವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಹಿತ್ ಚಕ್ರತೀರ್ಥ ನಾನು ಲೇಖಕರ ಜಾತಿ ಹುಡುಕಲು ಹೋಗಿಲ್ಲ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವನೂರ, ಭಾರತದಂಥಾ ಸಂಕೀರ್ಣವಾದ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಸಹಜವಾಗಿ ಅಲ್ಲಿ 90% ರಷ್ಟು ಅವರದ್ದೇ ಜಾತಿಯವರು ತುಂಬಿಕೊಳ್ಳುತ್ತಾರೆ ಎಂದಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೆ ಪಠ್ಯ ಪುಸ್ತಕ ವಿವಾದ ತಾರಕಕ್ಕೇರಿದ್ದು, ಸರ್ಕಾರ ಕೇಸರಿಕರಣ ಮಾಡುತ್ತಿದೆ ಎಂಬ ಆರೋಪಕ್ಕೆ ತುತ್ತಾಗಿದೆ. ಆದರೆ ಸರ್ಕಾರ ಎಡಪಂಥಿಯರು ಕೈಬಿಟ್ಟ ಪಾಠಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.
ಇದನ್ನೂ ಓದಿ : PUC exams evaluation : ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ: 19 ಸಾವಿರ ಉಪನ್ಯಾಸಕರ ನೇಮಕ
ಇದನ್ನೂ ಓದಿ : Kerala dowry death: ಕೇರಳ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಜೈಲು, 12.55 ಲಕ್ಷ ರೂ ದಂಡ
Devanur Mahadeva letter to the government