PUC exams evaluation : ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭ: 19 ಸಾವಿರ ಉಪನ್ಯಾಸಕರ ನೇಮಕ

ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಮುಕ್ತಾಯಗೊಂಡ ಬೆನ್ನಲ್ಲೇ ಈಗ ಪಿಯುಸಿ ಮೌಲ್ಯಮಾಪನ ( PUC exams evaluation ) ಆರಂಭಗೊಂಡಿದೆ. ಮೇ 24 ರಿಂದ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ( Evaluation) ನಡೆಯಲಿದ್ದು ಸಾವಿರಾರು ಉಪನ್ಯಾಸಕರು ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಿ ದ್ದಾರೆ. ಏಪ್ರಿಲ್ 22 ರಿಂದ ಮೇ 18 ರವರೆಗೆ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, 6,84,255 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈಗ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಪಿಯು ಬೋರ್ಡ್ ಅಂದಾಜು 19 ಸಾವಿರ ಉಪನ್ಯಾಸಕರನ್ನು ನೇಮಕ ಮಾಡಿದೆ.

ದ್ವಿತೀಯ ಪಿಯುಸಿ ಮೌಲ್ಯಮಾಪನ (PUC exams evaluation) ಜೂನ್ 15 ರ ವೇಳೆಗೆ ಅಂತ್ಯಗೊಳ್ಳಲಿದ್ದು ಜೂನ್ ಮೂರನೇ ವಾರದಲ್ಲಿ ಫಲಿತಾಂಶ ಹೊರಬೀಳಲಿದೆ ಎಂದು ಶಿಕ್ಷಣ ಸಚಿವರು ಈ ಹಿಂದೆ ಮಾಹಿತಿ ನೀಡಿದ್ದರು. ರಾಜ್ಯದ ಒಟ್ಟು 83 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಆರಂಭಗೊಂಡಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಬಾಧೆಯಿಂದಾಗಿ ಶಾಲಾ ಕಾಲೇಜುಗಳು ಸಮರ್ಪಕವಾಗಿ ನಡೆದಿರಲಿಲ್ಲ. ಆದರೆ ಈ ವರ್ಷ ವಿದ್ಯಾರ್ಥಿಗಳಿಗೆ ಆನ್ ಲೈನ್ ಜೊತೆಗೆ ಒಂದಷ್ಟು ಕಾಲ ಆಫ್ ಲೈನ್ ತರಗತಿಗಳನ್ನು ಅಟೆಂಡ್ ಮಾಡಲು ಅವಕಾಶ ಸಿಕ್ಕಿದೆ.

ಅದರೆ ಪರೀಕ್ಷಾ ಸಮಯ ಸಮೀಪಿಸುತ್ತಿರುವಾಗಲೇ, ರಾಜ್ಯದಲ್ಲಿ ಹಿಜಾಬ್ ವಿವಾದ ತಲೆ ದೋರಿದ್ದರಿಂದ ಕೆಲ ದಿನಗಳ ಕಾಲ ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಅಲ್ಲದೇ ಪ್ರತಿಭಟನೆ,‌ಹೋರಾಟದ ಕಾರಣಕ್ಕೆ ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತು ಪಾಠ ಕೇಳೋದಿಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಯಲ್ಲಿ ಹೈಕೋರ್ಟ್ ಶಾಲಾ ಕಾಲೇಜುಗಳ ಆವರಣದಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ ಎಂದ ಬಳಿಕ ತರಗತಿಗಳನ್ನು ಮತ್ತೆ ಆರಂಭಿಸಲಾಗಿತ್ತು.

ಇನ್ನು ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ವೇಳೆ ಮತ್ತೆ ಹಿಜಾಬ್ ವಿವಾದ ತಲೆದೋರುವ ಭಯ ಇದ್ದಿದ್ದರಿಂದ ಸರ್ಕಾರ ಹಾಗೂ ಪಿಯು ಮಂಡಳಿ ಪರೀಕ್ಷಾ ಕೇಂದ್ರಗಳಿಗೆ ಹಿಜಾಬ್ ಗೆ ಅವಕಾಶವಿಲ್ಲ ಎಂದು ಮೊದಲೇ ಆದೇಶ ಹೊರಡಿಸಿದ್ದಲ್ಲದೇ ಅಗತ್ಯ ಪೊಲೀಸ್ ಭದ್ರತೆ ಕೂಡ ಕಲ್ಪಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಒಟ್ಟು ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 800 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗಿದ್ದು, ಹಿಜಾಬ್ ವಿಚಾರಕ್ಕಾಗಿಯೇ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಅಂದಾಜಿಸಲಾಗಿದೆ.

ಈ ಎಲ್ಲ ವಿವಾದಗಳ ಬಳಿಕವೂ ದ್ವಿತೀಯ ಪಿಯುಸಿ ಪರೀಕ್ಷೆ ಶಾಂತವಾಗಿ ಅಂತ್ಯಗೊಂಡಿದ್ದು ಈಗ ವಿದ್ಯಾರ್ಥಿಗಳ ಭವಿಷ್ಯ ಎಕ್ಸಾಂ ಪೇಪರ್ ನಲ್ಲಿ ಅಡಗಿದೆ. ಇನ್ನೂ ಎಸ್ ಎಸ್ ಎಲ್ ಸಿ ಮೌಲ್ಯಮಾಪನಕ್ಕೆ ಸಾಕಷ್ಟು ಶಿಕ್ಷಕರು ಗೈರಾಗಿದ್ದರಿಂದ ಫಲಿತಾಂಶ ವಿಳಂಬಗೊಂಡಿತ್ತು. ಹೀಗಾಗಿ ದ್ವಿತೀಯ ಪಿಯುಸಿ ಮೌಲ್ಯಮಾಪನದ (PUC exams evaluation) ವೇಳೆ ಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಯಾರೂ ಗೈರಾಗದಂತೆ ಮೊದಲೇ ಸೂಚನೆ ನೀಡಲಾಗಿದೆ ಎಂದು ಪಿಯು ಬೋರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Parenting Tips : ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾರೆಯೇ ?

ಇದನ್ನೂ ಓದಿ : Karnataka 2nd PUC results : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

Karnataka II PUC exams evaluation Start 19000 Lectures Attend

Comments are closed.