ದೀಪಾವಳಿಗೆ ಭರ್ಜರಿ ಗಿಫ್ಟ್‌ : ಪ್ರತೀ ಕುಟುಂಬಕ್ಕೂ ತಲಾ 2000ರೂ. ಘೋಷಣೆ

ಕರ್ನಾಟಕದಲ್ಲಿ ಸದ್ಯ ಗೃಹಲಕ್ಷ್ಮೀ (Gruha Lakshmi Scheme), ಅನ್ನಭಾಗ್ಯ ಯೋಜನೆಯ (Anna Bhagya Scheme) ಮೂಲಕ ಮಹಿಳೆಯರ ಬ್ಯಾಂಕ್‌ ಖಾತೆಗೆ (Bank Account) ಪ್ರತೀ ತಿಂಗಳು ಹಣ ವರ್ಗಾವಣೆ ಆಗುತ್ತಿದೆ. ಈ ನಡುವಲ್ಲೇ ದೀಪಾವಳಿಗೆ ( Diwali Gift) ಪ್ರತೀ ಕುಟುಂಬಕ್ಕೆ ತಲಾ 2000 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ.

ಬೆಂಗಳೂರು : ಕರ್ನಾಟಕದಲ್ಲಿ ಸದ್ಯ ಗೃಹಲಕ್ಷ್ಮೀ (Gruha Lakshmi Scheme), ಅನ್ನಭಾಗ್ಯ ಯೋಜನೆಯ (Anna Bhagya Scheme) ಮೂಲಕ ಮಹಿಳೆಯರ ಬ್ಯಾಂಕ್‌ ಖಾತೆಗೆ (Bank Account) ಪ್ರತೀ ತಿಂಗಳು ಹಣ ವರ್ಗಾವಣೆ ಆಗುತ್ತಿದೆ. ಈ ನಡುವಲ್ಲೇ ದೀಪಾವಳಿಗೆ ಭರ್ಜರಿ ಗಿಫ್ಟ್‌ ( Deepavali Gift) ಘೋಷಣೆಯಾಗಿದ್ದು, ಪ್ರತೀ ಕುಟುಂಬಕ್ಕೆ ತಲಾ 2000 ರೂಪಾಯಿ ಹೆಚ್ಚುವರಿಯಾಗಿ ಸಿಗಲಿದೆ.

ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal)ಇಂತಹದ್ದೊಂದು ಘೋಷಣೆ ಮಾಡಿದ್ದಾರೆ. ದೀಪಾವಳಿಯ ಆಚರಣೆ (Diwali Gift) ಗಾಗಿ ವಿಜಯಪುರ ನಗರ ಕ್ಷೇತ್ರ (Bijapur City Assembly Constituency ) ವ್ಯಾಪ್ತಿಯಲ್ಲಿನ ಸುಮಾರು 11 ಸಾವಿರ ಕುಟುಂಬಗಳಿಗೆ ತಲಾ 2000 ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

Diwali Bumper Gift Per People Rs 2000 for Each Family
Image Credit : twitter

ಈ ಹಿಂದೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕ್ಷೇತ್ರ ಎಲಾ ಕುಟುಂಬಗಳಿಗೆ ತಲಾ 5000 ರೂ. ಹಣವನ್ನು ನೀಡಿದ್ದರು. ಹಿಂದೂಗಳು ಸಂಭ್ರಮದಿಂದ ಆಚರಿಸುವ ದೀಪಾವಳಿಯನ್ನು ಎಲ್ಲಾ ಕುಟುಂಬಗಳು ಸಂಭ್ರಮದಿಂದಲೇ ಆಚರಿಸಬೇಕು ಅನ್ನೋದು ಶಾಸಕ ಉದ್ದೇಶ. ಈ ಹಿನ್ನೆಲೆಯಲ್ಲಿಯೇ ಇಂತಹದ್ದೊಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : ಹೊಸ ಪಡಿತರ ಚೀಟಿ : ಸರಕಾರದಿಂದ ಗುಡ್‌ನ್ಯೂಸ್‌

ಇತ್ತೀಚಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಯಲ್ಲಿಯೇ ಈ ಘೋಷಣೆ ಮಾಡಿದ್ದಾರೆ. ಎಲ್ಲರೂ ಚುನಾವಣೆಯ ಸಂದರ್ಭದಲ್ಲಿ ಹಣ ಹಂಚಿಕೆ ಮಾಡಿದ್ದಾರೆ. ಆದರೆ ನಾನು ದೀಪಾವಳಿಯ ಸಂದರ್ಭದಲ್ಲಿ ಕ್ಷೇತ್ರದ 11000 ಕುಟುಂಬಗಳಿಗೆ ತಲಾ 2000 ರೂ ನೀಡಲು ನಿರ್ಧರಿಸಿದ್ದೇನೆ ಎಂದಿದ್ದಾರೆ.

Diwali Bumper Gift Per People Rs 2000 for Each Family
Image Credit to Original Source

ದೇಶದಲ್ಲಿ ಹಿಂದೂ ಧರ್ಮವನ್ನು ಅವಮಾನಿಸುವುದು ಫ್ಯಾಷನ್.‌ ಸನಾತನ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಸಾಕಷ್ಟು ಜನರು ಬಂದು ಹೋದರೂ ಕೂಡ ಏನು ಮಾಡಲು ಸಾಧ್ಯವಾಗಿಲ್ಲ. ನಮ್ಮ ಸನಾತನ ಧರ್ಮ ದೇವರಿಂದ ಹುಟ್ಟಿಕೊಂಡಿದೆ. ಬ್ರಹ್ಮ, ವಿಷ್ಣು, ಮಹೇಶ್ವರರು ನಮ್ಮ ಧರ್ಮದ ಸ್ಥಾಪಕರು ಎಂದಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಆದರೆ ನಾನು ಮಾಡಿರುವ ಅಭಿವೃದ್ದಿ ಕಾರ್ಯಗಳಿಂದಲೇ ಕ್ಷೇತ್ರದ ಜನರು ನನ್ನನ್ನು ಕೈಬಿಡುವುದಿಲ್ಲ ಅನ್ನೋದು ತಿಳಿದಿದೆ. ನಮ್ಮನ್ನು ನೀವು ಎಂದಿಗೂ ಸೋಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಈ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮೀ ಯೋಜನೆಯ 2ನೇ ಕಂತಿನ 2000 ರೂ.

ಸಾಮಾನ್ಯವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕ್ಷೇತ್ರವನ್ನೇ ಮರೆತು ಬಿಡುವ ರಾಜಕಾರಣಿಗಳ ನಡುವಲ್ಲಿ ಬಸನಗೌಡ ಪಾಟೀಲ ಯತ್ನಾಳ್‌ ವಿಶಿಷ್ಟವಾಗಿ ಕಾಣುತ್ತಾರೆ. ಸರಕಾರಗಳೇ ದೀಪಾವಳಿ ಗಿಫ್ಟ್‌ ನೀಡದ ಹೊತ್ತಲ್ಲಿ ಶಾಸಕರಾಗಿ ತಮ್ಮ ಸ್ವತಃ ಸಂಪಾದನೆಯಲ್ಲಿ ಪ್ರತೀ ಕುಟುಂಬಕ್ಕೂ ಆರ್ಥಿಕ ಸಹಕಾರ ನೀಡುವುದು ನಿಜಕ್ಕೂ ಶ್ಲಾಘನೀಯ.

Diwali Bumper Gift Per People Rs 2000 for Each Family
Image Credit to Original Source

ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜ್ಯ ಕಂಡ ವಿಭಿನ್ನ ರಾಜಕಾರಣಿ. ತಮ್ಮ ಮಾತುಗಾರಿಕೆಯಿಂದಲೇ ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸ್ವಪಕ್ಷೀಯರ ನಡೆಯನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ಖಂಡಿಸಿದ್ದಾರೆ. ಸದ್ಯ ವಿಜಯಪುರ ನಗರ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದ ಹೆಗ್ಗಳಿಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಸಲ್ಲುತ್ತದೆ. ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಿಕಾಂ ಪದವಿಧರರಾಗಿದ್ದು, 1994 ರಲ್ಲಿ ಮೊದಲ ಬಾರಿಗೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು

ನಂತರ 1999  ಮತ್ತು 2004 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸರಕಾರ ರಾಜ್ಯ ಜವಳಿ ಖಾತೆ ಹಾಗೂ ರಾಜ್ಯ ರೈಲ್ವೆ ಖಾತೆಯ ಸಚಿವರಾಗಿ, ಕಾರ್ಮಿಕ ಸಂಸತ್ತು ಸಮಿತಿಯ ಸದಸ್ಯರಾಗಿ. ಪಾರ್ಲಿಮೆಂಟ್‌ ಹೌಸ್‌ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

Diwali Bumper Gift Per People Rs 2000 for Each Family
Image Credit to Original Source

ಇದನ್ನೂ ಓದಿ : ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳಿಗೆ ರಜೆ !

ಇನ್ನು 2008 ರಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಆದರೆ ಬಿಜೆಪಿ ವಿರುದ್ದ ಮುನಿಸಿಕೊಂಡು ಜೆಡಿಎಸ್‌ ಸೇರಿದ್ದ ಯತ್ನಾಳ್‌, 2013 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದರು.

ಆದರೆ 2018 ರಲ್ಲಿ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು. ಅಲ್ಲದೇ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸದ್ಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Diwali Bumper Gift Per People Rs 2000 for Each Family

Comments are closed.