ರಾಯಚೂರು : Bharat Jodo Yatra : ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಆಂಧ್ರ ಪ್ರದೇಶದಿಂದ ಶುಕ್ರವಾರ ರಾಯಚೂರನ್ನು ತಲುಪಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯಲ್ಲಿ ಹಲವಾರು ಜನರೊಂದಿಗೆ ಸಂಸದ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದಾರೆ. ಈ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಯಲ್ಲಿ ಮತ್ತೊಬ್ಬ ವ್ಯಕ್ತಿ ಹೈಲೈಟ್ ಆಗ್ತಿದ್ದಾರೆ. ಅಂದಹಾಗೆ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ಈ ವ್ಯಕ್ತಿ ಇದೀಗ ಟಾಕ್ ಆಫ್ ದಿ ಟೌನ್ ಆಗಲು ಮುಖ್ಯ ಕಾರಣ ಇವರ ಗಡ್ಡ..!
ಹೌದು..! ಕೇರಳದ ಕೊಚ್ಚಿ ನಿವಾಸಿಯಾಗಿರುವ ಪ್ರವೀಣ್ ಪರಮೇಶ್ವರ್ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. 38 ವರ್ಷ ಪ್ರಾಯದ ಪ್ರವೀಣ್ ಪರಮೇಶ್ವರ್ ಭಾರತದಲ್ಲಿಯೇ ಅತೀ ಉದ್ದದ ಗಡ್ಡವನ್ನು ಹೊಂದಿರುವ ವ್ಯಕ್ತಿ ಎಂಬ ಕೀರ್ತಿಯನ್ನು ಗಳಿಸಿದ್ದಾರೆ. ಇವರ ಗಡ್ಡ ಬರೋಬ್ಬರಿ ನಲವತ್ತು ಇಂಚು ಉದ್ದವಿದೆ. ಕಳೆದ ಎಂಟು ವರ್ಷಗಳಿಂದ ಗಡ್ಡ ಬೆಳೆಸುವ ಕಾರ್ಯ ಮಾಡುತ್ತಿರುವ ಪ್ರವೀಣ್ ಪರಮೇಶ್ವರ್ ಭಾರತ್ ಜೋಡೋ ಯಾತ್ರೆಯಲ್ಲಿ ಸಖತ್ ಹೈಲೈಟ್ ಆಗ್ತಿದ್ದಾರೆ.
ನಲವತ್ತು ಇಂಚು ಗಡ್ಡದ ಮೂಲಕ ದೇಶದಲ್ಲಿಯೇ ಅತೀ ಉದ್ದದ ಗಡ್ಡವನ್ನು ಹೊಂದಿರುವ ವ್ಯಕ್ತಿ ಎನಿಸಿರುವ ಪ್ರವೀಣ್ ಪರಮೇಶ್ವರ್ ವಿಶ್ವದಲ್ಲಿ ಅತೀ ಉದ್ದದ ಗಡ್ಡವನ್ನು ಹೊಂದಿರುವ ಎರಡನೇ ವ್ಯಕ್ತಿ ಎನಿಸಿದ್ದಾರೆ. ಮೂಲತಃ ಟೆಕ್ಕಿಯಾಗಿದ್ದ ಪ್ರವೀಣ್ ಪರಮೇಶ್ವರ್ ಕಾಲ ಕ್ರಮೇಣ ಸಿನಿಮಾ ಕ್ಷೇತ್ರದತ್ತ ವಾಲಿದರು. ತಮಿಳು ಹಾಗೂ ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿರುವ ಪ್ರವೀಣ್ ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ಮಾಡ್ತಿದ್ದಾರೆ.
ಇನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಗಡ್ಡಧಾರಿ ಪ್ರವೀಣ್ ಪರಮೇಶ್ವರ್, ನಾನು ರಾಹುಲ್ ಗಾಂಧಿ ಅಭಿಮಾನಿಯಾಗಿದ್ದೇನೆ. ಭಾರತದಲ್ಲಿ ಪ್ರಸ್ತುತ ಭಾರತ್ ಜೋಡೋ ಯಾತ್ರೆಯ ಮಹತ್ವ ಏನಿದೆ ಎಂಬುದನ್ನು ಅರಿತುಕೊಂಡು ನಾನು ಈ ಯಾತ್ರೆಗೆ ಸಾಥ್ ನೀಡಿದ್ದೇನೆ. ಭಾರತ್ ಜೋಡೋ ಯಾತ್ರೆಯಲ್ಲಿ ಕಾಶ್ಮೀರದವರೆಗೂ ನಾನು ತೆರಳುತ್ತೇನೆ. ಈ ಮೂಲಕ ನನ್ನ ದೇಶವನ್ನು ಅರ್ಥ ಮಾಡಿಕೊಳ್ಳುತ್ತೇನೆ. ಈ ಪಾದಯಾತ್ರೆಯಲ್ಲಿ ಭಾಗಿಯಾದರೆ ದೇಶದ ಎಲ್ಲಾ ಸಂಸ್ಕೃತಿಗಳನ್ನು ನೋಡೋಕೆ ಸಾಧ್ಯವಾಗುತ್ತೆ ಎಂದು ಹೇಳಿದ್ದಾರೆ.
ಇದನ್ನು ಓದಿ : ಕಾಂತಾರ ಸಿನಿಮಾ ಮೆಚ್ಚಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ : ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ
ಇದನ್ನೂ ಓದಿ : Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!
Do you know who is this bearded man who is involved in Bharat Jodo Yatra?