Gujarath Traffic rules: ಈ ರಾಜ್ಯದಲ್ಲಿ 7 ದಿನ ಟ್ರಾಫಿಕ್ ರೂಲ್ಸ್ ಇರಲ್ವಂತೆ.. ವಾಹನ ಸವಾರರಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್..!

ಗುಜರಾತ್: (Gujarath Traffic Rules) ದೀಪಾವಳಿ ಹಬ್ಬ ಅಂದ್ರೆ ಬೆಳಕಿನ ಹಬ್ಬ.. ಒಬ್ಬರಿಂದೊಬ್ಬರು ಉಡುಗೊರೆಗಳನ್ನು ನೀಡಿ ಸಂಭ್ರಮಿಸುವ ಹಬ್ಬ ದೀಪಾವಳಿ. ಮನೆಮಂದಿಗೋ, ಸ್ನೇಹಿತರಿಗೋ, ಸಂಗಾತಿಗೋ ಹೀಗೆ ಗಿಫ್ಟ್ ಖರೀದಿಸಿ ನೀಡೋ ಖುಷಿನೇ ಬೇರೆ. ಇನ್ನು ಕೆಲ ದೊಡ್ಡ ದೊಡ್ಡ ಕಂಪೆನಿಗಳು ಅಲ್ಲಿನ ನೌಕರರಿಗೆ ಸಂಸ್ಥೆ ಕಡೆಯಿಂದ ಉಡುಗೊರೆಗಳನ್ನು ನೀಡುತ್ತವೆ. ಆದರೆ ಗುಜರಾತ್ ಸರ್ಕಾರ ಮಾತ್ರ ಈ ಬಾರಿ ವಾಹನ ಸವಾರರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ.

ದೀಪಾವಳಿ ಹಬ್ಬದ ಹಿನ್ನೆಲೆ ಒಂದು ವಾರಗಳ ಕಾಲ ಗುಜರಾತ್‍ನಲ್ಲಿ ಟ್ರಾಫಿಕ್ ರೂಲ್ಸ್ ತೆಗೆದು ಹಾಕಲಾಗಿದೆಯಂತೆ. ‘ಅಕ್ಟೋಬರ್ 21ರಿಂದ ಅ.27ರವರೆಗೆ ರಾಜ್ಯದಲ್ಲಿ ಸಂಚಾರಿ ನಿಯಮ ಇರಲ್ಲ. ಯಾರೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೂ ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲ್ಲ. ದಂಡ ವಿಧಿಸಲ್ಲ’ ಎಂದು ಅಲ್ಲಿನ ಗೃಹ ಇಲಾಖೆ ಸಹಾಯಕ ಸಚಿವ ಹರ್ಷ ಸಾಂಘ್ವಿ ಘೋಷಣೆ ಮಾಡಿದ್ದಾರೆ. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರ ಜನಪರ ನಿರ್ಧಾರವಿದು ಎಂದು ಅವರು ಹೇಳಿದ್ದಾರೆ.

‘ದೀಪಾವಳಿ ನಿಮಿತ್ತ 7 ದಿನ ವಾಹನ ಸವಾರರು ಸಂಚಾರಿ ನಿಯಮ (traffic rules) ಉಲ್ಲಂಘಿಸಿದರೂ ಅವರ ಮೇಲೆ ಯಾವುದೇ ಕ್ರಮ ಜರುಗಿಸಲ್ಲ. ಬದಲಾಗಿ ನಿಯಮ ಉಲ್ಲಂಘಿಸಿದವರಿಗೆ ಹೂವನ್ನು ನೀಡಿ ಸಂಚಾರಿ ನಿಯಮದ ಬಗ್ಗೆ ತಿಳಿಹೇಳಲಾಗುವುದು. ಮತ್ತೆ ಈ ತಪ್ಪು ಮಾಡದಂತೆ ಮನವೊಲಿಸಲಾಗುವುದು. ಹಾಗಂತ ಯಾರು ಕೂಡಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಬೇಡಿ. ದಂಡ ಇಲ್ಲವೆಂದು ನಿಯಮ ಉಲ್ಲಂಘಿಸದಿರಿ’ ಎಂದು ಸಚಿವರು ಹೇಳಿದ್ದಾರೆ.

ಸದ್ಯ ಗುಜರಾತ್ ಸರ್ಕಾರದ ಈ ನಿರ್ಧಾರದಿಂದ ಅಲ್ಲಿನ ಜನರು ಖುಷಿಯಾಗಿದ್ದಾರೆ. ಆದರೆ ಈ ಕ್ರಮದ ಬಗ್ಗೆ ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ಈ ಕ್ರಮದಿಂದ ವಾಹನ ಸವಾರರಿಗೆ ಸ್ವ ಇಚ್ಛೆಯಿಂದಲೇ ಸಂಚಾರಿ ನಿಯಮ ಪಾಲಿಸುವಂತೆ ಪ್ರೇರೇಪಿಸಿದಂತಾಗಿದೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಕೆಲವರು ಅಭಿಪ್ರಾಯಪಟ್ಟರೆ ಇನ್ನು ಕೆಲವರು ಯಾರೂ ಅಷ್ಟೊಂದು ಪ್ರಾಮಾಣಿಕರೂ, ತಿಳುವಳಿಕೆ ಹೊಂದಿರುವವರಿಲ್ಲ. ವಾಹನ ನಿಯಮ ಮುಕ್ತಗೊಳಿಸಿದ್ದರಿಂದ ಈ 7 ದಿನಗಳಲ್ಲಿ ಅಪಘಾತ ಪ್ರಕರಣಗಳೂ ಇನ್ನೂ ಹೆಚ್ಚಾಗಬಹುದು ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Flight turbulence: ಅಡ್ಡಾ ದಿಡ್ಡಿ ಹಾರಿದ ವಿಮಾನ.. ಪ್ರಯಾಣಿಕರ ಪಾಡು ಏನಾಗಿದೆ ನೋಡಿ

ಇದನ್ನೂ ಓದಿ: Appu Ambulance : ಪುನೀತ್ ರಾಜ್ ಕುಮಾರ್ ನೆನಪು ಅಮರವಾಗಿಸಲು ಮುಂದಾದ ನಟ ಯಶ್ : ರಾಜ್ಯದ ಪ್ರತಿ ಜಿಲ್ಲೆಗೂ ಅಪ್ಪು ಅಂಬುಲೆನ್ಸ್

deepavali gift for gujarath people : no fine for traffic rules violation for 7 days

Comments are closed.