Naveen father : ದುಬಾರಿ ಡೊನೇಷನ್ ಹಾಗೂ ಮೀಸಲಾತಿ ವ್ಯವಸ್ಥೆ ಇನ್ನಾದರೂ ಬದಲಾಗಲಿ : ನವೀನ್ ತಂದೆ ಆಕ್ರೋಶ

ಹಾವೇರಿ : ಕೇವಲ ವಿದ್ಯಾಭ್ಯಾಸಕ್ಕಾಗಿ ದೂರದ ಉಕ್ರೇನ್ ಗೆ ಮಗನನ್ನು ಕಳುಹಿಸಿ ಯುದ್ಧದಲ್ಲಿ(Russia strike Ukraine) ಕಳೆದುಕೊಂಡ ನವೀನ್ ನ್ಯಾಮ್ ಗೌಡರ್ (Naveen father) ತಂದೆ ಶೇಖರ್ ಗೌಡರ್ ಮಗನ ಕಳೆದುಕೊಂಡ ನೋವಿನಲ್ಲೇ ದೇಶದ ಶಿಕ್ಷಣ ವ್ಯವಸ್ಥೆ ಹಾಗೂ ಮೀಸಲಾತಿ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ನನ್ನ ಮಗನನ್ನು ಕಳೆದುಕೊಂಡಿದ್ದಕ್ಕೇ ಈ ದೇಶದ ವ್ಯವಸ್ಥೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗ ನವೀನ್ ನ್ಯಾಮ್ ಗೌಡರ್ ಎಸ್ ಎಸ್ ಎಲ್ ಸಿಯಲ್ಲಿ 95 ಪರ್ಸೆಂಟ್ ಅಂಕ ಪಡೆದಿದ್ದ, ದ್ವಿತೀಯ ಪಿಯಸಿಯಲ್ಲಿ 97 ಶೇಕಡಾ ಅಂಕ ಗಳಿಸಿದ್ದ. ಎಸ್ ಎಸ್ ಎಲ್ ಸಿ ಯಲ್ಲಿ ದ್ದಾಗಲೇ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಉತ್ಸಾಹ ನವೀನ್ ಗಿತ್ತು. ಆದರೆ ಇದೇ ಶಿಕ್ಷಣವನ್ನು ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಪಡೆಯಬೇಕೆಂದರೇ ಅಂದಾಜು ಎರಡು ಕೋಟಿ ಬೇಕು. ಇದೇ ಕಾರಣಕ್ಕೆ ನವೀನ್ ಉಕ್ರೇನ್ ಗೆ ತೆರಳಿದ್ದ. ಅಲ್ಲಿ ಇದೇ ವೈದ್ಯಕೀಯ ಶಿಕ್ಷಣ ಇನ್ನೂ ಉತ್ತಮವಾದ ಪ್ರ್ಯಾಕ್ಟಿಕಲ್ ವ್ಯವಸ್ಥೆಯೊಂದಿಗೆ ಸಿಗುತ್ತದೆ. ‌ಇದೇ ಕಾರಣಕ್ಕೆ ನಾನು‌ಮಗನನ್ನು ಅವನಾಸೆಯಂತೆ ಕಳುಹಿಸಿದ್ದೆ.

ಇದುವರೆಗೂ ಒಂದು 30 ಲಕ್ಷ‌ರೂಪಾಯಿ ಅವನ ಶಿಕ್ಷಣಕ್ಕಾಗಿ ವ್ಯಯಿಸಿದ್ದೇನೆ.‌ನಾನು ಸ್ಥಿತಿವಂತನಲ್ಲ. ಆದರೂ ನನ್ನ ಪಿಎಫ್ ಹಣ ಸ್ನೇಹಿತರಿಂದ ಸಾಲ‌ಪಡೆದು ಮಗನನ್ನು ಓದಿಸುತ್ತಿದ್ದೇ. ನನ್ನ ಸ್ನೇಹಿತರು, ಸಂಬಂಧಿಗಳು ನನ್ನ ಮಗ ವೈದ್ಯನಾಗಲಿ ಎಂದು ಸಹಕಾರ ನೀಡಿದ್ದರು. ಆದರೆ ಈಗ ಎಲ್ಲವನ್ನು ಕಳೆದುಕೊಂಡಿದ್ದೇನೆ. ಕರ್ನಾಟಕದಲ್ಲಿ, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಖಾಸಗಿ ಸಂಸ್ಥೆಗಳ ಕಪಿಮುಷ್ಠಿಯಲ್ಲಿದೆ. ರಾಜಕಾರಣಿಗಳು ಅವರ ಕೈಯಲ್ಲಿದ್ದಾರೆ. ಹೀಗಾಗಿ ಈ ದೇಶದ ಯುವ ಪ್ರತಿಭೆಗಳು ಓದಿಗಾಗಿ ಉಕ್ರೇನ್ ಗೆ ಹೋಗುವಂತ ಸ್ಥಿತಿ ಇದೆ. ನಾನಂತೂ ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಇನ್ನಾದರೂ ಈ ನೆಲದ ಶಿಕ್ಷಣ ವ್ಯವಸ್ಥೆ ಹಾಗೂ ಮೀಸಲಾತಿ ವ್ಯವಸ್ಥೆ ಬದಲಾಗಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಉಕ್ರೇನ್ ಖಾರ್ಖಿವ್ ದಲ್ಲಿ ಅಧ್ಯಯನ ಮಾಡುತ್ತಿದ್ದ ನವೀನ್ ಯುದ್ಧ (Russia strike Ukraine) ಶುರುವಾಗುವ ಹಿಂದಿನ ದಿನವಷ್ಟೇ ಮಾತನಾಡಿದ್ದ. ನಾವು ವಾಪಸ್ ಬರುವಂತೆ ಹೇಳಿದ್ದೇವು. ಆಗ ಕಾಲೇಜ್ ರಜೆ ಘೋಷಿಸಿಲ್ಲ. ರಜೆ ಘೋಷಿಸದೇ ಬರುವಂತಿಲ್ಲ ಎಂದಿದ್ದ. ನಾವು ಭಾರತೀಯ ವಿದೇಶಾಂಗ ಸಚಿವಾಲಯದಿಂದ ಹೇಳಿಸಿ ಕಾಲೇಜ್ ಗೆ ರಜೆ ನೀಡುವಂತೆ ಒತ್ತಡ ಹೇರಲು ಪ್ರಯತ್ನಿಸಿದ್ದೇವು. ಆದರೆ ಕಾಲೇಜು ಆಡಳಿತ ಮಂಡಳಿಯವರು ಯುದ್ಧವಾಗೋದಿಲ್ಲ. ಮಾತುಕತೆ ಮೂಲಕ ಬಗೆಹರಿಯಲಿದೆ ಎಂದು ಹೇಳುತ್ತಲೇ ಬಂದಿದ್ದರು.

ಆದರೆ ಈಗ ಯುದ್ಧದಲ್ಲಿ ನನ್ನ‌ ಮಗನನ್ನು ಕಳೆದುಕೊಂಡಿದ್ದೇನೆ. ಇಂದು ಎಲ್ಲರಿಗಿಂತ ನನ್ನ ಮಗ ಮೊದಲೇ ಎದ್ದಿದ್ದನಂತೆ.‌ ಶಾಪ್ ಗಳು ಮುಚ್ಚುತ್ತವೇ ಎಂಬ ಕಾರಣಕ್ಕೆ ಎಲ್ಲರಿಗೂ ತಿಂಡಿಪದಾರ್ಥಗಳನ್ನು ತರಲು ಹೋಗಿದ್ದಾನೆ. ಅಲ್ಲೇ ನಿಧನನಾಗಿದ್ದಾನೆ ಎಂದು ಶೇಖರ್ ಗೌಡರ್ (Naveen father) ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ : ನವೀನ್ ಮೃತದೇಹ ಹುಟ್ಟೂರಿಗೆ ತರಲು ತುರ್ತುಕ್ರಮ : ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್‌ ತಂದೆಗೆ ಕರೆ ಮಾಡಿ ಸಾಂತ್ವನ ಹೇಳಿದ ಪಿಎಂ ನರೇಂದ್ರ ಮೋದಿ

( expensive donation and reservation system change, Russia strike Ukraine dead Naveen father is outraged)

Comments are closed.