ಬೆಂಗಳೂರು : ಈಗಾಗಲೇ ರಾಜ್ಯ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ದೊಡ್ಡ ಪ್ರಮಾಣದಲ್ಲಿ ಕೇಳಿ ಬರುತ್ತಿದೆ. 40% ಕಮೀಷನ್ ಆರೋಪವಂತೂ ಇಲ್ಲಿಂದ ದಿಲ್ಲಿಯ ತನಕ ಸದ್ದು ಮಾಡಿದೆ. ಮುಂದಿನ ಚುನಾವಣೆ ಗೆ ಕಾಂಗ್ರೆಸ್ ಪಾಲಿಗೆ ಬಿಜೆಪಿ ಭ್ರಷ್ಟಾಚಾರವೇ ದೊಡ್ಡ ಅಸ್ತ್ರ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆಯೇ ಬಿಜೆಪಿ ಸರ್ಕಾರದ ವಿರುದ್ಧ ಇನ್ನೊಂದು ಭ್ರಷ್ಟಾಚಾರದ (Corruption in Transport Department) ಆರೋಪ ಕೇಳಿಬಂದಿದ್ದು, ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಗಾಗಿ ಭರ್ಜರಿ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪ ಈಗ ಸರ್ಕಾರದ ಮುಖ್ಯಕಾರ್ಯದರ್ಶಿ ಅಂಗಳಕ್ಕೆ ತಲುಪಿದೆ.
ಹೌದು ರಾಜ್ಯದ ವಿವಿಧ ಸಾರಿಗೆ ಇಲಾಖೆಗಳು ನಷ್ಟದಲ್ಲಿವೆ ಎಂಬ ಮಾತು ಕೇಳಿಬಂದಿದೆ. ಇದರ ಮಧ್ಯೆಯೇ ಈಗ ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಗೆ ರೇಟ್ ಕಾರ್ಡ್ ಫಿಕ್ಸ್ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮೊದಲು ಸಾರಿಗೆ ಇಲಾಖೆಯ ವರ್ಗಾವಣೆಯನ್ನು ಎಂಡಿಗಳು ಮಾಡುತ್ತಿದ್ದರು.ನಿಯಮಬದ್ಧವಾಗಿ ನಡೆಯುತ್ತಿತ್ತು. ಆದರೆ ಈಗ ಇದಕ್ಕೆ ಸ್ವತಃ ಸಚಿವರೇ ನಿಂತಿದ್ದಾರೆ. ಕಂಡಕ್ಟರ್ ,ಡ್ರೈವರ್, ಟೆಕ್ನಿಕಲ್ ಸ್ಟಾಫ್ ಹೀಗೆ ಸಿಬ್ಬಂದಿಗಳ ಡೆಶಿಗ್ನೇಶನ್ ಆಧರಿಸಿ ವರ್ಗಾವಣೆ ದರ ನಿಗದಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾರಿಗೆ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಅನಂತ ಸುಬ್ಬರಾವ್ ವಿಸ್ಕೃತವಾದ ಪತ್ರ ಬರೆದಿದ್ದು ಅದರಲ್ಲಿ ಭ್ರಷ್ಟಾಚಾರದ ವಿವರಗಳನ್ನು ಉಲ್ಲೇಖಿಸಿದ್ದಾರೆ.

ಶ್ರೀರಾಮುಲು ಸಾರಿಗೆ ಮಂತ್ರಿಯಾದ ಬಳಿಕ ಸಾರಿಗೆ ಇಲಾಖೆಯಲ್ಲಿ 714 ಟ್ರಾನ್ಸ್ ಫರ್ ಆಗಿದೆ. ಈ ಹಿಂದೆ ಟ್ರಾನ್ಸ್ಫರ್ ಮಾಡ್ತಿದ್ದವರು ಎಂಡಿಗಳು. ಆಗ ಟ್ರಾನ್ಸ್ ಫರ್ ವಿಚಾರಕ್ಕೆ ಸಚಿವರಾಗ್ಲೀ, ಸಚಿವರ ಕಚೇರಿಯಾಗ್ಲಿ ಮಧ್ಯಪ್ರವೇಶ ಮಾಡುತ್ತಿರಲಿಲ್ಲ.ಆದರೆ ಈಗ ಈಗ ಎಲ್ಲಾ ಟ್ರಾನ್ಸ್ಫರ್ ಸಚಿವರ ಕಚೇರಿಯಿಂದಲೇ ನಡೆಯುತ್ತಿದೆ ಎಂದು ಸುಬ್ಬರಾವ್ ಆರೋಪಿಸಿದ್ದಾರೆ.

ಸಚಿವರ ಕಚೇರಿಯಲ್ಲಿ ವರ್ಗಾವಣೆ ದಂಧೆಗಾಗಿಯೇ ಏಜೆಂಟ್ ರಿದ್ದಾರೆ. ಸಚಿವರ ಕಚೇರಿಯಲ್ಲಿರೋ ಏಜೆಂಟ್ ಗಳಿಂದ ಈ ಕೆಲಸ ನಡೆಯುತ್ತಿದೆ. ಡ್ರೈವರ್ ಕಂಡೆಕ್ಟರ್ ಟ್ರಾನ್ಸ್ಫರ್ ಗೆ ಒಂದು ರೇಟ್, ಟೆಕ್ನಿಕಲ್ ಸ್ಟಾಫ್, ಹಾಗೂ ಅಧಿಕಾರಿಗಳ ಟ್ರಾನ್ಸ್ಫರ್ ಗೆ ಒಂದು ದರ ನಿಗದಿಯಾಗಿದೆ. ಹೀಗೆ ಸಚಿವರ ಕಚೇರಿಯಲ್ಲಿ ದೊಡ್ಡ ಭಷ್ಟಾಚಾರ ನಡೆಯುತ್ತಿದೆ ಎಂದು ನೇರಾನೇರ ಆರೋಪ ಮಾಡಿದ್ದಾರೆ. ಈ ಹಿಂದೆಯೂ ಸಾರಿಗೆ ಇಲಾಖೆ ವಿರುದ್ಧ ವರ್ಗಾವಣೆ ದಂಧೆ ಆರೋಪ ಕೇಳಿಬಂದಿತ್ತು.ಈಗ ಸ್ವತಃ ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳೇ ಈ ಬಗ್ಗೆ ಆರೋಪಿಸಿದ್ದಾರೆ.
ಇದನ್ನೂ ಓದಿ : Reliance Jio 5G Network:ಭಾರತದಾದ್ಯಂತ ಅತ್ಯಾಧುನಿಕ 5ಜಿ ನೆಟ್‌ವರ್ಕ್ ಹೊರತರಲು ಸಿದ್ಧವಾದ ರಿಲಯನ್ಸ್ ಜಿಯೋ
ಇದನ್ನೂ ಓದಿ : Heavy rain in Kukke Subramanya : ಕುಕ್ಕೆಯ ಆದಿ ಸುಬ್ರಹ್ಮಣ್ಯ ಜಲಾವೃತ : ನಾಗರ ಪಂಚಮಿಯಂದು ಭಕ್ತರಿಗಿಲ್ಲ ಕುಕ್ಕೆ ದರ್ಶನ
Driver Conductor Technical Staff Transfer Gay Rate Fix Corruption in Transport Department