Earthquake Vijayapura: ವಿಜಯಪುರದಲ್ಲಿ ಮತ್ತೆ ಭೂಕಂಪನ : ಬಾರೀ ಸದ್ದಿಗೆ ಬೆಚ್ಚಿಬಿದ್ದ ಜನರು

ವಿಜಯಪುರ : (Earthquake vijayapura) ಒಂದೆಡೆ ಮಳೆಯ ಆರ್ಭಟಕ್ಕೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜಿಲ್ಲೆಗಳು ತತ್ತರಿಸಿವೆ. ಈ ನಡುವಲ್ಲೇ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿದೆ. ಇಂದೂ ಕೂಡ ವಿಜಯಪುರ ತಾಲೂಕಿನ ಅಲಿಯಾಬಾದ್‌ ಗ್ರಾಮದಲ್ಲಿ ಭೂಕಂಪನ ಉಂಟಾಗಿದ್ದು, ಭಾರೀ ಸದ್ದಿಗೆ ಜನರು ತತ್ತರಿಸಿ ಹೋಗದ್ದಾರೆ.

ವಿಜಯಪುರ ಜಿಲ್ಲೆಯ ಅಲಿಯಾಬಾದ್‌ ಗ್ರಾಮದಲ್ಲಿದ್ದು, ಏಕಾಏಕಿಯಾಗಿ ಭೂಮಿ ನಲುಗಿದ್ದು, ಬಾರೀ ಸದ್ದು ಕೇಳಿಬಂದಿತ್ತು. ಇದರಿಂದಾಗಿ ಮನೆಯಲ್ಲಿದ್ದ ಜನರು ಹೊರಗೆ ಓಡಿ ಬಂದಿದ್ದಾರೆ. ಬಾರೀ ಸದ್ದಿನ ಬೆನ್ನಲ್ಲೇ ವಿಜಯಪುರದಲ್ಲಿ ನಡೆದಿರುವ ಭೂಕಂಪಲದ ತೀವ್ರ ರಿಕ್ಟರ್‌ ಮಾಪನದಲ್ಲಿ 2.5 ತೀವ್ರತೆ ದಾಖಲಾಗಿದೆ ಎಂದು ಭೂಕಂಪನ ಕೇಂದ್ರ ದೃಢಪಡಿಸಿದೆ.

ಭೂಕಂಪನ ಸಂಭವಿಸಿರುವುದು ಖಚಿತವಾಗುತ್ತಿದ್ದಂತೆಯೇ ವಿಜಯಪುರ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. 2021ರಿಂದಲೂ ವಿಜಯಪುರದಲ್ಲಿ ಮೇಲಿಂದ ಮೇಲೆ ಭೂಕಂಪನ ಸಂಭವಿಸುತ್ತಲೇ ಇದೆ. ವಿಜಯಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪದೇ ಪದೇ ಭೂಕಂಪನ ಉಂಟಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ವಿಜಯಪುರ ಜಿಲ್ಲಾಡಳಿತ ಪದೇ ಪದೇ ಭೂಕಂಪನ ಸಂಭವಿಸಿದ್ದರೂ ಕೂಡ ಯಾವುದೇ ಪ್ರಾಣಹಾನಿ ಸಂಭವಿಸುವುದಿಲ್ಲ ಎಂದು ಜನರಿಗೆ ಈಗಾಗಲೇ ಮಾಹಿತಿಯನ್ನು ನೀಡಿದೆ. ಇನ್ನೊಂದೆಡೆಯಲ್ಲಿ ಭೂಕಂಪನಕ್ಕೆ ಕಾರಣವೇನು ಅನ್ನುವ ಕುರಿತು ಸಂಶೋಧನೆಯು ನಡೆಯುತ್ತಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಜಯಪುರ, ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ.

ಬೆಳಗಾವಿ, ಕಲಬುರಗಿಯಲ್ಲೂ ಕಂಪಿಸಿದ್ದ ಭೂಮಿ

ವಿಜಯಪುರ ಮಾತ್ರವಲ್ಲದೇ ಕಳೆದ ಕೆಲವೇ ಕೆಲವು ತಿಂಗಳ ಹಿಂದೆಯಷ್ಟೇ ಬೆಳಗಾವಿ, ಕಲಬುರಗಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿತ್ತು. ಬೆಳಗಾವಿ ಜಿಲ್ಲೆಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲಗೇರಾ ಮತ್ತು ಗಡಿಗೇಶ್ವರ ಗ್ರಾಮಗಳಲ್ಲಿ ರಾತ್ರಿಯ ವೇಳೆಯಲ್ಲಿ ಭೂಕಂಪನ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿತ್ತು. ಉತ್ತರ ಕರ್ನಾಟಕ ಭಾಗದ ಹಲವು ಗ್ರಾಮಗಳಲ್ಲಿ ನಿರಂತರವಾಗ ಭೂಮಿ ಕಂಪಿಸುತ್ತಿದ್ದು, ಜನರು ಆತಂಕದಲ್ಲಿದ್ದಾರೆ. ಭೂಮಿ ಕಂಪನಕ್ಕೆ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲನೆಯನ್ನು ನಡೆಸುತ್ತಿದೆ. ಭಾರೀ ಸದ್ದು ಕೇಳಿಬಂದು ಭೂಮಿ ಕಂಪಿಸಿದ ಹಿನ್ನೆಲೆಯಲ್ಲೀಗ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ.

ಇದನ್ನೂ ಓದಿ : 26 Killed Kanpur : ಕೆರೆಗೆ ಉರುಳಿದ ಟ್ರ್ಯಾಕ್ಟರ್‌ : 26 ಮಂದಿ ಯಾತ್ರಾರ್ಥಿಗ: ದುರ್ಮರಣ, ಪ್ರಧಾನಿ ಮೋದಿ ಸಂತಾಪ

ಇದನ್ನೂ ಓದಿ : BBMP : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಒತ್ತುವರಿ ತೆರವು : ಜೆಸಿಬಿ ಜೊತೆ ಸಜ್ಜಾಗ್ತಿದೆ ಬಿಬಿಎಂಪಿ

Earthquake again in vijayapura People fear by the sound again

Comments are closed.