Gandhi Jayanthi 2022 : ದೇಶಾದ್ಯಂತ ಗಾಂಧಿ ಜಯಂತಿ ಆಚರಣೆ : ರಾಷ್ಟ್ರಪಿತನ ಸಮಾಧಿಗೆ ನಮನ ಸಲ್ಲಿಕೆ

ನವದೆಹಲಿ : (Gandhi Jayanthi 2022)ದೇಶಾದ್ಯಂತ ಇಂದು ಮಹಾತ್ಮ ಗಾಂಧಿಜೀಯವರ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಶಾಲಾ – ಕಾಲೇಜುಗಳಲ್ಲಿ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜೀಯವರ ಭಾವಚಿತ್ರವನ್ನು ಇಟ್ಟು ಗೌರವ ಸಲ್ಲಿಸಲಾಗುತ್ತಿದೆ. ರಾಷ್ಟ್ರಪಿತನ ಸಾಧನೆ, ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿ ಹೇಳುವ ಕಾರ್ಯವನ್ನು ಮಾಡಲಾಗುತ್ತಿದೆ. ಅಹಿಂಸೆಯನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧಿ ಅವರ ಜನ್ಮ ದಿನಾಚರಣೆಯ ದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

2007ರಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದಲ್ಲಿ ಅಕ್ಟೋಬರ್‌ 2 ನ್ನು ಅಹಿಂಸಾ ದಿನವನ್ನಾಗಿ ಅಂಗೀಕರಿಸಲಾಯಿತು. ಅಷ್ಟೇ ಅಲ್ಲದೇ ಇಂದು ಮತ್ತೊಬ್ಬ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್‌ ಬಹುದ್ದೂರ್‌ ಶಾಸ್ತ್ರಿ ಜನ್ಮದಿನವು ಹೌದು. ಇವರು ಸ್ವಾತಂತ್ರ್ಯ ಭಾರತದ ಎರಡನೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.

(Gandhi Jayanthi 2022) ಮಹಾತ್ಮ ಗಾಂಧೀಜಿ ಅವರು ಅಕ್ಟೋಬರ್‌ 2, 1869ರಲ್ಲಿ ಭಾರತದ ಗುಜರಾತ್‌ ರಾಜ್ಯದ ಪೋರಬಂದರ್‌ನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಮೋಹನ್‌ ದಾಸ್‌ ಕರಮಚಂದ್‌ ಗಾಂಧಿ, ಇವರು ತಂದೆ ಕರಮಚಂದ್‌ ಗಾಂಧಿ ತಾಯಿ ಪುತಲೀಬಾಯಿ. ಇವರು ತಮ್ಮ 13ನೇಯ ವಯಸ್ಸಿನಲ್ಲೇ ಕಸ್ತೂರಿ ಬಾ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಜನ ಮಕ್ಕಳು ಹರಿಲಾಲ್‌ ಗಾಂಧಿ, ಮಣಿಲಾಲ್‌ ಗಾಂಧಿ, ರಾಮದಾಸ್‌ ಗಾಂಧಿ ಮತ್ತು ದೇವದಾಸ್‌ ಗಾಂಧಿಯವರು ಜನಿಸಿದರು.

ಈ ದಿನ ವಿಶೇಷವಾಗಿ ಶ್ರಮದಾನವನ್ನು ಹಮ್ಮಿಕೊಂಡು ಆಯಾ ಗ್ರಾಮಗಳಲ್ಲಿ ಶ್ರಮದಾನವನ್ನು ಮಾಡುತ್ತಾರೆ. ಶಾಲೆ – ಕಾಲೇಜುಗಳಲ್ಲಿ ಸಹ ಇದ್ದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಶಾಲಾ ಸುತ್ತಮುತ್ತಲ್ಲಿನ ಪ್ರದೇಶದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳುತ್ತಾರೆ. ಗಾಂಧಿಜೀಯವರು ತಮ್ಮ ಜೀವನದಲ್ಲಿ ಸತ್ಯ ಹಾಗೂ ಅಹಿಂಸೆ ತತ್ವವನ್ನು ಅಳವಡಿಸಿಕೊಂಡು ಅನೇಕ ಚಳುವಳಿಗಳನ್ನು ಮಾಡಿದ್ದಾರೆ. ಹಾಗೆ ಇವರು ಸಸ್ಯಾಹಾರಿಗಳಾಗಿದ್ದು, ಹಾಗೆ ಲಂಡನ್‌ನಲ್ಲಿ ಓದುತ್ತಿರುವಾಗ ಸಸ್ಯಾಹಾರದ ಬಗ್ಗೆ ಪುಸ್ತಕಗಳನ್ನೂ ಕೂಡ ಬರೆದಿದ್ದಾರೆ. ಇವರು ಸರಳ ವಸ್ತ್ರಧಾರಿಗಳಾಗಿದ್ದು ತಮ್ಮ ಮನೆಯಲ್ಲಿಯೇ ಚರಕದ ಮೂಲಕ ನೇಯ್ದ ಖಾದಿ ಬಟ್ಟೆಗಳನ್ನು ಗಾಂಧಿಜೀಯವರು ಧರಿಸುತ್ತಿದ್ದರು. ನಂತರದ ದಿನಗಳಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಬಾವುಟದಲ್ಲಿಯೂ ಸೇರಿಕೊಂಡಿತು.

ದೇಶಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದು ಪ್ರಧಾನಿ ಮೋದಿಯವರು ಟ್ವೀಟ್‌ ಮಾಡುವ ಮೂಲಕ ಮಹಾತ್ಮಾ ಗಾಂಧಿಯವರಿಗೆ ಶುಭಾಶಯವನ್ನು ಕೋರಿದರು. ಈ ವರ್ಷ ಭಾರತವು ಸ್ವಾತಂತ್ರ್ಯದ ಅಮೃತಮಹೋತ್ಸವನ್ನು ಆಚರಿಸುತ್ತಿರುವುದರಿಂದ ಈ ಸಲದ ಗಾಂಧಿ ಜಯಂತಿ ಬಹಳ ವಿಶೇಷವಾಗಿದೆ ಎಂದು ಹೇಳಿದ್ದಾರೆ. ದೇಶದ ಖಾದಿ ಹಾಗೂ ಕರಕುಶಲ ಉತ್ಪನ್ನಗಳನ್ನು ಖರೀದಿಸುವುದಕ್ಕೆ ಪ್ರೋತ್ಸಾಹವನ್ನು ನೀಡುವುದರ ಮೂಲಕ ಬಾಪೂರವರಿಗೆ ಗೌರವನ್ನು ಸಲ್ಲಿಸೋಣ ಎಂದಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಗಾಂಧಿಜೀಯವರನ್ನು ನೆನೆದಿದ್ದಾರೆ. ತಮ್ಮ ಟ್ವೀಟರ್‌ ಖಾತೆಯಲ್ಲಿ ಪತ್ರವೊಂದನ್ನು ಟ್ವೀಟ್‌ ಮಾಡಿ ಅದರಲ್ಲಿ ” ಇಂದು ಮಹಾತ್ಮಾ ಗಾಂಧಿ ಅವರ 153ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ನಾನು ಎಲ್ಲಾ ನಾಗರಿಕರ ಪರವಾಗಿ ರಾಷ್ಟ್ರಪಿತನಿಗೆ ಗೌರವನ್ನು ಸಲ್ಲಿಸುತ್ತೇನೆ. ಗಾಂಧಿಜೀಯವರ ಸ್ಪೂರ್ತಿದಾಯಕ ಜೀವನದ ಮೌಲ್ಯಗಳಾದ ಶಂತಿ, ಸಮಾನತೆ ಹಾಗೂ ಕೋಮು ಸೌಹಾರ್ದತೆಯನ್ನು ನಾವು ಅಳವಡಿಸಿಕೊಳ್ಳೋಣ” ಎಂದು ಹೇಳಿದ್ದಾರೆ.

ಇನ್ನೂ ವಿದೇಶದಿಂದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ರವರು ಕೂಡ ಅಂತರರಾಷ್ಟ್ರೀಯ ಅಹಿಂಸಾ ದಿನವನ್ನು ಸ್ಮರಿಸಿ, ಗಾಂಧಿಯವರ ಸಂದೇಶಗಳನ್ನು ಸ್ಮರಿಸಿ ಟ್ವೀಟ್‌ ಮಾಡಿದ್ದಾರೆ. ಟ್ವೀಟ್‌ನಲ್ಲಿ “ಮಹತ್ಮಾ ಗಾಂಧಿ ಜನ್ಮದಿನದ ಅಂಗವಾಗಿ ವಿಶ್ವ ಅಹಿಂಸಾ ದಿನ ಆಚರಿಸಲಾಗುತ್ತದೆ. ಶಾಂತಿ, ಗೌರವ ಮತ್ತು ಘನತೆಯ ಬದುಕು ಎಲ್ಲರಿಗೂ ಸಿಗಬೇಕಿದೆ. ಇಂದು ಜಗತ್ತಿನ ಎದುರು ಇರುವ ಹಲವು ಸವಾಲುಗಳನ್ನು ಗಾಂಧಿ ಅವರ ಸಂದೇಶದ ಮೂಲಕ ಮಣಿಸಬಹುದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಗೆ ಜನರು ಬರ್ತಾ ಇಲ್ಲ, ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ: ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪ

ಇದನ್ನೂ ಓದಿ : ಪಿಎಫ್ಐ ಕಾಂಗ್ರೆಸ್ ನವರ ಬ್ರದರ್ಸ್ ಇದ್ದಂತೆ: ಸಂಸದ ತೇಜಸ್ವಿ ಸೂರ್ಯ

ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಮತ್ತೆ ಒತ್ತುವರಿ ತೆರವು : ಜೆಸಿಬಿ ಜೊತೆ ಸಜ್ಜಾಗ್ತಿದೆ ಬಿಬಿಎಂಪಿ

ಹಾಗೆ ರಾಜಘಾಟ್‌ನಲ್ಲಿರುವ ಗಾಂಧಿಜೀಯವರ ಸಮಾಧಿಗೆ ಪ್ರಧಾನಿ ಮೋದಿ ಸೇರಿದಂತೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯವರು ಪುಷ್ಪವನ್ನು ಹಾಕುವುದರ ಮೂಲಕ ನಮನವನ್ನು ಸಲ್ಲಿಸಿದರು.

Gandhi Jayanti celebrations across the country pay homage to the father of the nation’s mausoleum

Comments are closed.