ಬಿಜೆಪಿಯ ನಿರ್ಲಕ್ಷ್ಯ ಕ್ಕೆ ಬೇಸತ್ತ ದಿ.ಅನಂತಕುಮಾರ್ ಕುಟುಂಬ ಕೈಪಾಳಯ ಸೇರ್ತಾರಾ ತೇಜಸ್ವಿನಿ

ದಿ.ಅನಂತ ಕುಮಾರ್, ಒಂದು ಕಾಲದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶಕ್ತಿ. ಆದರೆ ಅನಂತ ಕುಮಾರ್ ಅನಾರೋಗ್ಯದಿಂದ ನಿಧನರಾದ ಬಳಿಕ ಗೊತ್ತೋ ಗೊತ್ತಿಲ್ಲದೆಯೋ ಬಿಜೆಪಿ ದಿ.ಅನಂತ ಕುಮಾರ್ ಕುಟುಂಬವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಅನಂತ ಕುಮಾರ್ ಪತ್ನಿ ಅದಮ್ಯ ಚೇತನ ಫೌಂಡೇಶನ್‌ ಸಂಸ್ಥಾಪಕಿ (Adamya Chetana Foundation Founder)  ತೇಜಸ್ವಿನಿ ಅನಂತ್‌ ಕುಮಾರ್‌ (Tejaswini Ananthkumar)  ಅವರು  ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು : ರಾಜ್ಯದಲ್ಲಿ ಆಪರೇಶನ್ ಎಂಬ ಶಬ್ದವೇ ಸಾಕಷ್ಟು ಸದ್ದು ಮಾಡ್ತಿದೆ.‌ಆದರೆ ಇದು ವೈದ್ಯಕೀಯ ಕ್ಷೇತ್ರದ ಆಫರೇಶನ್ ಅಲ್ಲ, ಬದಲಾಗಿ ರಾಜಕೀಯ ಇಚ್ಛಾಶಕ್ತಿಗಳ ಪೊರೈಕೆಗಾಗಿ ನಡೆತಿರೋ ಆಫರೇಶನ್ ಕೈ ಮತ್ತು ಕಮಲ. ಈ ಚರ್ಚೆಗಳ ಮಧ್ಯವೇ ಬಿಜೆಪಿಯ ಹಿರಿಯ ನಾಯಕ ದಿ.ಅನಂತ ಕುಮಾರ್ (Ananth Kumar)  ಪತ್ನಿ ಅದಮ್ಯ ಚೇತನ ಫೌಂಡೇಶನ್‌ ಸಂಸ್ಥಾಪಕಿ (Adamya Chetana Foundation Founder)  ತೇಜಸ್ವಿನಿ ಅನಂತ್‌ ಕುಮಾರ್‌ (Tejaswini Ananthkumar)  ಅವರು  ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದೆ.

ದಿ.ಅನಂತ ಕುಮಾರ್, ಒಂದು ಕಾಲದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶಕ್ತಿ. ರಾಜ್ಯ ಮತ್ತು ಕೇಂದ್ರದ ನಡುವೆ ಕೊಂಡಿಯಂತಿದ್ದ ದಿ.ಅನಂತಕುಮಾರ್, ರಾಜ್ಯ ಬಿಜೆಪಿಗಾಗಿ ಹಾಗೂ ಚುನಾವಣೆಗಳ ಗೆಲುವಿಗಾಗಿ ಪಕ್ಷ ಸಂಘಟನೆಯ ಮೂಲಕ ಶ್ರಮಿಸಿದವರು.  ಆದರೆ ಅನಂತ ಕುಮಾರ್ ಅನಾರೋಗ್ಯದಿಂದ ನಿಧನರಾದ ಬಳಿಕ ಗೊತ್ತೋ ಗೊತ್ತಿಲ್ಲದೆಯೋ ಬಿಜೆಪಿ ದಿ.ಅನಂತ ಕುಮಾರ್ ಕುಟುಂಬವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಅನಂತ ಕುಮಾರ್ ಪತ್ನಿ, ತೇಜಸ್ವಿನಿ ಅನಂತ್ ಕುಮಾರ್ ಚುನಾವಣೆಗೆ ಸ್ಪರ್ಧಿಸಲು ಆಸಕ್ತರಾಗಿದ್ದರೂ ಬಿಜೆಪಿ ಅವರಿಗೆ ಟಿಕೇಟ್ ನೀಡುವ ಪ್ರಯತ್ನವನ್ನು ಮಾಡಲಿಲ್ಲ.

Ex BJP Leader Aanath Kumar Wife adamya chetana Foundation founder Tejaswini Ananthkumar may be Join Congress
Image Credit : The News Minute

2019 ರಲ್ಲಿ ತೇಜಸ್ವಿನಿ ಅನಂತ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೇಟ್ ಆಕಾಂಕ್ಷಿಯಾಗಿದ್ದರು. ಒಂದು ಹಂತದವರೆಗೂ ತೇಜಸ್ವಿನಿಯವರಿಗೆ ಟಿಕೇಟ್ ನೀಡಲಾಗುತ್ತೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ತನ್ನ ನಿರ್ಧಾರ ಬದಲಾಯಿಸಿತ್ತು. ಅನಂತ ಕುಮಾರ್ ಬೆಳೆಸಿದ್ದ ಹುಡುಗ ತೇಜಸ್ವಿ ಸೂರ್ಯ ಗೆ ಬಿಜೆಪಿ ಟಿಕೇಟ್ ನೀಡಿತ್ತು. ಈ ವಿಚಾರ ತೇಜಸ್ವಿನಿಯವರ ಅಸಮಧಾನಕ್ಕೆ ಕಾರಣವಾಗಿತ್ತು.‌ಹೀಗಾಗಿ ತೇಜಸ್ವಿನಿಯವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡೇ ಬಂದಿದ್ದರು.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ಈ ಹಿಂದೆ ಬೆಳಗಾವಿಯಲ್ಲಿ ಸಂಸದ ಹಾಗೂ ಸಚಿವ ಸುರೇಶ್ ಅಂಗಡಿಯವರು ನಿಧನರಾದಾಗ ಅವರ ಪತ್ನಿ ಮಂಗಳ ಅಂಗಡಿಗೆ ಅನುಕಂಪದ ಆಧಾರದ ಮೇಲೆ ಟಿಕೇಟ್ ನೀಡಲಾಗಿತ್ತು. ಆದರೆ ಅನಂತ ಕುಮಾರ್ ವಿಚಾರದಲ್ಲಿ ಮಾತ್ರ ಈ ನಿರ್ಧಾರ ಕೈಗೊಳ್ಳುವಲ್ಲಿ ಬಿಜೆಪಿ ಹೈಕಮಾಂಡ್ ವಿಫಲವಾಗಿತ್ತು.
ಲಿಂಗಾಯತ್ ರು ಎಂಬ ಕಾರಣಕ್ಕೆ ಸುರೇಶ್ ಅಂಗಡಿಯವರ ಕುಟುಂಬಕ್ಕೆ ಟಿಕೇಟ್ ನೀಡಲಾಯಿತು. ಆದರೆ ಅನಂತ ಕುಮಾರ್ ಬ್ರಾಹ್ಮಣರಾಗಿದ್ದು ಅವರ ಪರ ಯಾರೂ ಲಾಭಿ ಮಾಡದ್ದರಿಂದ ಅವರ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ.‌ರಾಜಕೀಯ ಪ್ರಾಧಾನ್ಯತೆಯೂ ಲಭ್ಯವಾಗಲಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿಯೇ ಕೇಳಿಬಂದಿತ್ತು.

ಈ ಎಲ್ಲ ಬೆಳವಣಿಗೆಗಳ ಬಳಿಕ ದಿ.ಅನಂತಕುಮಾರ್ ಪುತ್ರಿ ಸಾರ್ವಜನಿಕವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಅನಂತ ಕುಮಾರ್ ಪಕ್ಷಕ್ಕಾಗಿ ಮಾಡಿದ ಎಲ್ಲ ತ್ಯಾಗವನ್ನು,ಕೆಲಸವನ್ನು ಬಿಜೆಪಿಮರೆತಿದೆ ಎಂದು ಕುಟುಕಿದ್ದರು. ಈ ವೇಳೆಯೂ ತೇಜಸ್ವಿನಿ ಹಾಗೂ ಅವರ ಪುತ್ರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ತೇಜಸ್ವಿನಿಯವರು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ತೇಜಸ್ವಿನಿಯವರು ಖುದ್ದು ಡಿಕೆಶಿಯವರನ್ನು ಭೇಟಿ ಮಾಡಿರೋದರಿಂದ ದಿ.ಅನಂತಕುಮಾರ್ ಪತ್ನಿ ಕೈಪಾಳಯ ಸೇರ್ತಾರಾ ಅನ್ನೋ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ಮೂಲಗಳ‌ಮಾಹಿತಿ ಪ್ರಕಾರ ಡಿಸಿಎಂ ಡಿ.ಕೆ.ಶಿವಕುಮಾರ್ ಶತಾಯ ಗತಾಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ. ಹೀಗಾಗಿ ಗೆಲ್ಲುವಂತ ಅಭ್ಯರ್ಥಿಗಳ ಆಯ್ಕೆಯಲ್ಲಿದ್ದಾರೆ. ಹಿಂದಿನ ಭಾರಿ ತೇಜಸ್ವಿ ಸೂರ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಸ್ಪರ್ಧಿಸಿದ್ದರು. ಆದರೆ ಹೀನಾಯವಾಗಿ ಸೋಲನ್ನಪ್ಪಿದ್ದರು. ಈ ಭಾರಿ ತೇಜಸ್ವಿ ಸೂರ್ಯ ಗೆ ಸೆ ಹೊಡೆಯಬಲ್ಲ ಹಾಗೂ ಬಿಜೆಪಿಯ ಮತಗಳನ್ನು ಒಡೆಯಬಲ್ಲ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರಂತೆ. ಹೇಗಾದ್ರೂ ಕಾಂಗ್ರೆಸ್ ನ ಎಂಪಿಗಳ ಸಂಖ್ಯೆ ಹೆಚ್ಚಿಸುವುದು ಡಿಕೆಶಿ ಗುರಿ.

Ex BJP Leader Aanath Kumar Wife adamya chetana Foundation founder Tejaswini Ananthkumar may be Join Congress
Image Credit To Original Source

ಇದೇ ಕಾರಣಕ್ಕೆ ಡಿಕೆಶಿ ತೇಜಸ್ವಿನಿಯವರ ಬಳಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆಯೂ ಕಾಂಗ್ರೆಸ್ ಹಾಗೂ ತೇಜಸ್ವಿನಿಯವರ ನಡುವೆ ಒಂದು ಬಾಂಧವ್ಯ ಬೆಳೆದಿದ್ದು, ಕಾಂಗ್ರೆಸ್ ನ ಮಹತ್ವದ ಯೋಜನೆ ಇಂದಿರಾಕ್ಯಾಂಟಿನ್ ಗೆ ಊಟ ಪೊರೈಸುವ ಅವಕಾಶ ಕೂಡ ತೇಜಸ್ವಿನಿಯವರ ಮಾಲಿಕತ್ವದ ಅದಮ್ಯ ಚೇತನ ಸಂಸ್ಥೆಗೆ ಸಿಕ್ಕಿದೆ. ಸದ್ಯಕ್ಕೆ ತೇಜಸ್ವಿನಿ ಅಥವಾ ಡಿಕೆಶಿಯವರಾಗಲಿ ಈ ಭೇಟಿಯ ಅಸಲಿ ಸಂಗತಿಗಳನ್ನು ಬಹಿರಂಗಪಡಿಸಿಲ್ಲ.‌ಆದರೆ ಮೂಲಗಳು ತೇಜಸ್ವಿನಿಯವರನ್ನು ಕೈ ಪಾಳಯಕ್ಕೆ ಸೆಳೆಯುವ ಪ್ರಯತ್ನ ಆರಂಭವಾಗಿದೆ ಎಂಬ ಸಂಗತಿ ಯನ್ನು ಖಚಿತಪಡಿಸಿವೆ.

Comments are closed.