ಲಾಕ್ ಡೌನ್ ಮಾಡದಿದ್ರೆ ಗಂಡಾಂತರವೆಂದ ತಜ್ಞರು : ತಿಂಗಳಲ್ಲೇ 32 ಲಕ್ಷ ಮಂದಿಗೆ ಸೋಂಕು ಸಾಧ್ಯತೆ…!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಹೆಚ್ಚುತ್ತಲೇ ಇದೆ. ಆದರೆ ರಾಜ್ಯ ಸರಕಾರ ಲಾಕ್ ಡೌನ್ ಹೇರಿಕೆ ಮಾಡಲು ಮೀನಾಮೇಷ ಎಣಿಸುತ್ತಿದೆ. ಒಂದೊಮ್ಮೆ ರಾಜ್ಯದಲ್ಲಿ ಕನಿಷ್ಠ 15 ದಿನಗಳ ಕಾಲ ಲಾಕ್ ಡೌನ್ ಹೇರಿಕೆಯಾಗದೇ ಇದ್ರೆ ತಿಂಗಳಲ್ಲಿ ಬರೋಬ್ಬರಿ 32 ಲಕ್ಷ ಮಂದಿಗೆ ಸೋಂಕು ದಾಖಲಾಗೋ ಸಾಧ್ಯತೆ ಯಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ದಿನ ನಿತ್ಯ ಅರ್ಧ ಲಕ್ಷದಷ್ಟು ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇನ್ನು ಸಾವನ್ನಪ್ಪುವವರ ಸಂಖ್ಯೆಯೂ ಕೂಡ ಏರಿಕೆಯನ್ನು ಕಾಣುತ್ತಲೇ ಇದೆ. ಆರಂಭದಲ್ಲಿ ಬೆಂಗಳೂರಲ್ಲಿ ಆರ್ಭಟಿಸುತ್ತಿದ್ದ ಕೊರೊನಾ ವೈರಸ್ ಸೋಂಕು ಇದೀಗ ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದೆ. ಇದೇ ರೀತಿ ಪರಿಸ್ಥಿತಿ ಮುಂದುವರಿದ್ರೆ ನಿತ್ಯವೂ ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ತೀವ್ರತೆಗೆ ಕೊಂಚ ಕಡಿವಾಣ ಹಾಕಬೇಕಾದ್ರೆ ಕನಿಷ್ಠ 15 ದಿನಗಳ ಕಾಲವಾದ್ರೂ ಲಾಕ್ ಡೌನ್ ಜಾರಿ ಮಾಡಲೇ ಬೇಕಾಗಿದೆ. ಒಂದೊಮ್ಮೆ 15 ದಿನಗಳ ಕಾಲ ಲಾಕ್ ಡೌನ್ ಜಾರಿ ಮಾಡದಿದ್ರೆ ರಾಜ್ಯದಲ್ಲಿ 32 ಲಕ್ಷ ಮಂದಿಗೆ ಸೋಂಕು ತಗುಲಿದೆ. ಒಂದೊಮ್ಮೆ ಲಾಕ್ ಡೌನ್ ಜಾರಿ ಮಾಡಿದ್ರೆ 15 ಲಕ್ಷ ಮಂದಿ ಒಂದೇ ತಿಂಗಳಲ್ಲಿ ಸೋಂಕಿಗೆ ತುತ್ತಾಗಲಿದ್ದಾರೆ. ಅಷ್ಟೇ ಅಲ್ಲಾ ಮೇ ಮಧ್ಯ ಭಾಗದಲ್ಲಿ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚಳ ವಾಗುವ ಸಾಧ್ಯತೆಯಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 5 ಲಕ್ಷ ಮೀರುವ ಸಾಧ್ಯತೆಯಿದ್ದು, ಜೂನ್ ಆರಂಭದಲ್ಲಿ ಸೋಂಕಿನ ಹೆಚ್ಚಳದ ಪ್ರಮಾಣ ಶೇ.80ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

ಕರುನಾಡಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಯೇ 3.32 ಲಕ್ಷ ಸಕ್ರೀಯ ಪ್ರಕರಣಗಳಿವೆ. ಕೊರೊನಾ ಸೋಂಕಿನ ಹರಡುವಿಕೆಯ ಪ್ರಮಾಣಕ್ಕೆ ಬ್ರೇಕ್ ಹಾಕದೇ ಇದ್ರೆ ನಿಯಂತ್ರಣಕ್ಕೆ ತರುವುದು ಕಷ್ಟಸಾಧ್ಯ. ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆಯೇ ಮಹಾರಾಷ್ಟ್ರ ಸಂಪೂರ್ಣವಾಗಿ ಲಾಕ್ ಡೌನ್ ಹೇರಿಕೆ ಮಾಡಿದೆ. ಇನ್ನು ಸೋಂಕು ಕಡಿಮೆಯಿದ್ದರೂ ಕೂಡ ಕೇರಳದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದರೆ ರಾಜ್ಯ ಸರಕಾರ ಮಾತ್ರ ಲಾಕ್ ಡೌನ್ ಹೇರಿಕೆ ಮಾಡಲು ಮೀನಾಮೇಷ ಎಣಿಸುತ್ತಿದೆ.

ಕೊರೊನಾ ನಿಯಂತ್ರಣಕ್ಕೆ ಜನತಾ ಕರ್ಪ್ಯೂ ಜಾರಿಗೆ ತಂದಿದೆ. ಆದರೆ ಇದರಿಂದ ಕೊರೊನಾ ಕಂಟ್ರೋಲ್ ಅಸಾಧ್ಯ ಅನ್ನೋದನ್ನ ಖುದ್ದು ಆರೋಗ್ಯ ಸಚಿವರೇ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ತಜ್ಞರು ಯಾವುದೇ ಅಭಿಪ್ರಾಯವನ್ನು ನೀಡಿದ್ರೂ ರಾಜ್ಯ ಸರಕಾರ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿರುವುದು ಮಾತ್ರ ದುರಂತವೇ ಸರಿ.

Comments are closed.