ಭಾನುವಾರ, ಏಪ್ರಿಲ್ 27, 2025
HomekarnatakaBasavaraj Bommai : ಶಿಗ್ಗಾವಿಯಲ್ಲಿ ಸೋಲಿನ ಭೀತಿ : ತಂದೆ ಕ್ಷೇತ್ರ ಕುಂದಗೋಳದತ್ತ ಮುಖಮಾಡಿದ ಸಿಎಂ...

Basavaraj Bommai : ಶಿಗ್ಗಾವಿಯಲ್ಲಿ ಸೋಲಿನ ಭೀತಿ : ತಂದೆ ಕ್ಷೇತ್ರ ಕುಂದಗೋಳದತ್ತ ಮುಖಮಾಡಿದ ಸಿಎಂ ಬಸವರಾಜ್‌ ಬೊಮ್ಮಾಯಿ

- Advertisement -

ಬೆಂಗಳೂರು : ಕೇವಲ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ (Basavaraj Bommai) ಅಚಾನಕ್ ಒಲಿದು ಬಂದ ಅದೃಷ್ಟದಾಟದಲ್ಲಿ ಸಿಎಂ ಸ್ಥಾನಕ್ಕೆ ಏರಿದರು. ಈಗ ಸಿಎಂ ಸ್ಥಾನದ ಸವಿ ಉಂಡಿರೋ ಬೊಮ್ಮಾಯಿ ಮತ್ತೊಮ್ಮೆ ಚುನಾವಣೆ ಗೆದ್ದು, ಪಕ್ಷ ಅಧಿಕಾರಕ್ಕೆ ತಂದು ಸಿಎಂ ಸ್ಥಾನಕ್ಕೇರೋ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಬೊಮ್ಮಾಯಿ ಕೂಡ ಗೆಲ್ಲೋ ಎರಡೆರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೌದು, ಅಧಿಕಾರಕ್ಕಾಗಿಯಾದರೂ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಇರುವ ಸಿಎಂ ಬಸವರಾಜ ಬೊಮ್ಮಾಯಿ ಈಗ ತಮ್ಮ ಹಾಲಿ ಕ್ಷೇತ್ರದ ಜೊತೆ ಮತ್ತೊಂದು ಕ್ಷೇತ್ರದತ್ತ ಮುಖಮಾಡಲು ಸಿದ್ಧವಾಗಿದ್ದಾರೆ.

ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದವರಾದ ಬೊಮ್ಮಾಯಿ (Basavaraj Bommai) ಈಗ ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಕುಂದಗೋಳ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಗೆಲುವಿನ ಲೆಕ್ಕಾಚಾರದಲ್ಲಿ ತವರೂರಿನತ್ತ ಚಿತ್ತ ಹರಿಸಿದ್ದಾರೆ. ಸಿಎಂ ಬೊಮ್ಮಾಯಿಯವರನ್ನು ತವರಿನಲ್ಲೇ ಕಟ್ಟಿ ಹಾಕಲು ಪ್ಲ್ಯಾನ್ ಮಾಡಿರೋ ಕಾಂಗ್ರೆಸ್, ಶಿಗ್ಗಾಂವಿಯಲ್ಲಿ ಪ್ರಬಲ ಅಭ್ಯರ್ಥಿ ಹಾಕಲು ಮುಂದಾಗಿದೆ. ವಿನಯ ಕುಲಕರ್ಣಿ ಅಥವಾ ಬೇರೊಬ್ಬರನ್ನು ನಿಲ್ಲಿಸಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಬೊಮ್ಮಾಯಿ ಸುಲಭವಾಗಿ ಗೆಲ್ಲೋ ಕ್ಷೇತ್ರದ ತಲಾಷ್ ನಲ್ಲಿದ್ದಾರಂತೆ.

ತಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಸ್ಪರ್ಧಿಸಿ ಗೆದ್ದಿದ್ದ ಕುಂದಗೋಳದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸೋಕೆ ಚಿಂತನೆ ನಡೆಸಿದ್ದಾರೆ. ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದಲ್ಲಿ ಬೊಮ್ಮಾಯಿ ಕಣಕ್ಕಿಳಿಯೋದು ಬಹುತೇಕ ಖಚಿತ ಎನ್ನಲಾಗ್ತಿದೆ.ಕೆಲ‌ದಿನಗಳ ಹಿಂದೆಯಷ್ಟೇ, ಕಮಡೊಳ್ಳಿಗೆ ಭೇಟಿ ನೀಡಿದ್ದ ಸಿಎಂ, ತಮ್ಮ ಮನೆ, ಊರವರನ್ನು ಕಂಡು ಕಣ್ಣೀರು ಹಾಕಿದ್ದರು. ದಿಢೀರ್ ಭೇಟಿಗೆ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದರು. ಇದರ ಬೆನ್ನ ಹಿಂದೆಯೇ ಕುಂದಗೋಳ ದಿಂದ ಸ್ಪರ್ಧಿಸ್ತಾರೆ ಎಂಬ ಸುದ್ದಿಗೆ ರೆಕ್ಕೆಪುಕ್ಕ ಬಂದಿದೆ. ಬೊಮ್ಮಾಯಿ ಕುಂದಗೋಳದಿಂದ ಸ್ಪರ್ಧಿಸಿದರೂ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಇದನ್ನೂ ಓದಿ : BJP ticket announcement: ಜೆಡಿಎಸ್, ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲ್ಯಾನ್: ಸದ್ಯಕ್ಕಿಲ್ಲ ಟಿಕೆಟ್ ಘೋಷಣೆ

ಬಸವರಾಜ್‌ ಬೊಮ್ಮಾಯಿ ಯಾವ ಕ್ಷೇತ್ರದಿಂದ ಬೇಕಾದರೂ ಸ್ಪರ್ಧಿಸಬಹುದು. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸೋಕೆ ಅವರು ಸರ್ವ ಸ್ವತಂತ್ರರು. ಶಿಗ್ಗಾಂವಿ ಅಥವಾ ಕುಂದಗೋಳ ಎಲ್ಲಿಂದ ಸ್ಪರ್ಧಿಸಿದರೂ ಗೆಲ್ಲಿಸಿ ಕಳುಹಿಸ್ತೇವೆ ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಮತ್ತಿತರರಿಂದ ಕುಂದಗೋಳದಲ್ಲಿ ರೋಡ್ ಶೋ ನಡೆದಿತ್ತು. ಕುಂದಗೋಳದಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಕಮಲ ಪಡೆ ಪಣತೊಟ್ಟಿದೆ. ಬೊಮ್ಮಾಯಿ ಅವರನ್ನೇ ಅಖಾಡಕ್ಕಿಳಿಸಿ ಗೆಲ್ಲಿಸಿಕೊಂಡು ಬರಲು ಚಿಂತನೆ ನಡೆಸಿದೆ. ಕುಂದಗೋಳ ಶಿಗ್ಗಾಂವಿಯ ಪಕ್ಕದ ಕ್ಷೇತ್ರವೇ ಆಗಿದೆ. ಎಲ್ಲಿಯೇ ಸ್ಪರ್ಧಿಸಿದರೂ ಒಂದೇ ಕಡೆ ಸ್ಪರ್ಧಿಸಬೇಕೆಂದು ಹೈಕಮಾಂಡ್ ಷರತ್ತು ಹಾಕಿದೆ. ಇದನ್ನೂ ಓದಿ : ಮತ್ತೆ ಕಾಂಗ್ರೆಸ್ ಗೆ ಹೊರಟ್ರಾ ವಲಸಿಗರು: ಮನವೊಲಿಕೆಗೆ ಬಿಜೆಪಿ ಸೂಚನೆ

ಹೀಗಾಗಿ ಬೊಮ್ಮಾಯಿ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಬೊಮ್ಮಾಯಿ ನಡೆ ತೀವ್ರ ಕುತೂಹಲ ಕೆರಳಿಸಿದೆ. ಬೊಮ್ಮಾಯಿ ಸ್ಪರ್ಧಿಸಿದರೆ ಹೃತ್ಪೂರ್ವಕವಾಗಿ ಸ್ವಾಗತಿಸಲು ಕಮಲ ಪಡೆ ಸಜ್ಜಾಗಿದೆ. ಆದರೆ ಬೊಮ್ಮಾಯಿ ಮಾತ್ರ ಅಳೆದು ಸುರಿದು ತೂಗಿ ಕ್ಷೇತ್ರ ಆಯ್ಕೆಗೆ ಮುಂದಾಗಿದ್ದು, ಬೊಮ್ಮಾಯಿ ಕೂಡ ಸಿದ್ದು ಹಾಗೂ ಎಚ್ಡಿಕೆ ಮಾದರಿಯಲ್ಲಿ ಎರಡೂ ಕ್ಷೇತ್ರದಲ್ಲಿ ಕಣಕ್ಕಿಳಿಯೋದು ಬಹತೇಕ ಖಚಿತ ಎನ್ನಲಾಗ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular