ಎಪ್ರಿಲ್‌ 8ಕ್ಕೆ ಬಿಜೆಪಿ ಮೊದಲ ಪಟ್ಟಿ ಪ್ರಕಟ : ಇಂದು ಮಹತ್ವದ ಕೋರ್‌ ಕಮಿಟಿ ಸಭೆ

ಬೆಂಗಳೂರು : ಬಿಜೆಪಿ ಯಿಂದ ವಿಧಾನಸಭೆ ಚುನಾವಣೆಗೆ (Karnataka Elections 2023) ಟಿಕೆಟ್ ಆಯ್ಕೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮುಂದಾಗಿದೆ. ಹೀಗಾಗಿ ಟಿಕೇಟ್ ಘೋಷಣೆಗೂ ಮುನ್ನವೇ ಜಿಲ್ಲಾ ಮಟ್ಟದಿಂದ ಆರಂಭಿಸಿ ರಾಜ್ಯಮಟ್ಟದವರೆಗೂ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಎಲ್ಲರ ಅಭಿಪ್ರಾಯ ಪಡೆದ ಬಳಿಕ ಏಪ್ರಿಲ್ 8 ರ ವೇಳೆಗೆ ಟಿಕೇಟ್ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ .

ಹೌದು, (Karnataka Elections 2023) ಬಿಜೆಪಿ ಬಂಡಾಯವನ್ನು ಗಮನದಲ್ಲಿಟ್ಟುಕೊಂಡು ಟಿಕೇಟ್ ಘೋಷಣೆಗೆ ಮುನ್ನವೇ ಕಾರ್ಯಕರ್ತರು, ನಾಯಕರ ಅಭಿಪ್ರಾಯಕ್ಕೆ ಸಂಗ್ರಹಕ್ಕೆ ಮುಂದಾಗಿದೆ. ಶುಕ್ರವಾರದಿಂದ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಲಿರುವ ಬಿಜೆಪಿ ನಂತರ ರಾಜ್ಯ ಕೋರ್ ಕಮಿಟಿ ಯಲ್ಲಿ ಚರ್ಚಿಸಿ ಲಿಸ್ಟ್ ಫೈನಲ್ ಮಾಡಲಿದೆ. ಇದಾದ ಬಳಿಕ ಏಪ್ರಿಲ್ 1ಮತ್ತು 2 ರಂದು ಬೆಂಗಳೂರಲ್ಲಿ ಸಭೆ ನಡೆಯಲಿದ್ದು, ರಾಜ್ಯ ಕೋರ್ ಕಮಿಟಿ ಜೊತೆ ಜಿಲ್ಲಾ ಕೋರ್ ಕಮಿಟಿ ಮೀಟಿಂಗ್,ಬಿಜೆಪಿಯ 36 ಸಂಘಟನಾತ್ಮಕ ಜಿಲ್ಲೆಗಳ ಕೋರ್ ಕಮಿಟಿ ಜೊತೆ ಸಭೆ ಇದಾಗಿದೆ.

ಪ್ರತಿ ಜಿಲ್ಲೆಯ ಕೋರ್ ಕಮಿಟಿ ಸದಸ್ಯರಿಂದ ಹತ್ತು ಹದಿನೈದು ನಿಮಿಷ ಅಭಿಪ್ರಾಯ ಪಡೆಯುವ ರಾಜ್ಯ ಕೋರ್ ಕಮಿಟಿ. ಏಪ್ರಿಲ್ 4 ಅಥವಾ 5 ರಂದು ಮತ್ತೊಮ್ಮೆ ರಾಜ್ಯ ಕೋರ್ ಕಮಿಟಿ ಸಭೆ ನಡೆಸಲಿದೆ. ಇದಾದ ಬಳಿಕ ಜಿಲ್ಲಾ ಕಮಿಟಿಯ ಹೆಸರು ಗಳನ್ನು ಶಾರ್ಟ್ ಲಿಸ್ಟ್ ಮಾಡಲಿರುವ ರಾಜ್ಯ ಕೋರ್ ಕಮಿಟಿ ಬಳಿಕ ಶಾರ್ಟ್ ಲಿಸ್ಟ್ ಪಟ್ಟಿಯನ್ನು ಕೇಂದ್ರಕ್ಕೆ ರವಾನಿಸಲಿದೆ.ಇನ್ನು ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಕೇಂದ್ರಕ್ಕೆ ರವಾನೆಯಾದ ಹೆಸರನು ಕೇಂದ್ರಿಯ ಚುನಾವಣಾ ಸಮಿತಿ ಪರಿಶೀಲನೆಯಲ್ಲಿ ಮತ್ತೊಮ್ಮೆ ಪರಾಮರ್ಶೆ ಮಾಡಿದ ಬಳಿಕ ಏಪ್ರಿಲ್ 6 ಅಥವಾ 7 ರಂದು ಕೇಂದ್ರೀಯ ಚುನಾವಣಾ ಸಮಿತಿ ಸಭೆ ಮಾಡಲಿದೆ. ಇದನ್ನೂ ಓದಿ : ಮತ್ತೆ ಕಾಂಗ್ರೆಸ್ ಗೆ ಹೊರಟ್ರಾ ವಲಸಿಗರು: ಮನವೊಲಿಕೆಗೆ ಬಿಜೆಪಿ ಸೂಚನೆ

ಇದೆಲ್ಲದರ ಬಳಿಕ ಎಪ್ರಿಲ್ 8 ನಂತರ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗ್ತಿದೆ. ಬಿಜೆಪಿ ಎರಡು ಅಥವಾ ಮೂರು ಹಂತದಲ್ಲಿ ಟಿಕೇಟ್ ಘೋಷಣೆ ಮಾಡಲಿದ್ದು, ಹಿರಿಯರಿಗೆ ಟಿಕೇಟ್ ನೀಡಬೇಕಾ ಬೇಡವಾ ? ಹಾಲಿ ಶಾಸಕರಿಗೆ ಯಾರಿಗೆ ಟಿಕೇಟ್ ನೀಡಬೇಕು ಈ ಎರಡು ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಹೈಕಮಾಂಡ್ ಗೆ ಬಿಡಲು ರಾಜ್ಯ ಬಿಜೆಪಿ ತೀರ್ಮಾನಿಸಿದೆಯಂತೆ. ಇದನ್ನೂ ಓದಿ : Duplicate bond allotment; ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿದ ಸುಪ್ರೀಂ ಕೋರ್ಟ್‌

Comments are closed.