Fire accident in the forest: ಕಾಡ್ಗಿಚ್ಚಿಗೆ ಬೆಚ್ಚಿಬಿದ್ದ ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ

ಚಿಕ್ಕಮಗಳೂರು: (Fire accident in the forest) ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶಗಳು ವನ್ಯ ಜೀವಿಗಳು ನಾಶವಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಆದರೆ ಕಾಡ್ಗಿಚ್ಚಿಗೆ ನಿಖರ ಕಾರಣಗಳು ಏನೆಂಬುದು ತಿಳಿದುಬಂದಿಲ್ಲ.

ಚಿಕ್ಕಮಗಳೂರು ತಾಲೂಕಿನ ಪವಿತ್ರವನ ಅಮೀಪದ ಚರ್ಚೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ರಾತ್ರಿ ಸರಣ್ಯ ಪ್ರದೇಶ ಹೊತ್ತಿ ಉರಿದಿದೆ. ಕಾಡ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದ್ದು, ಪ್ರಾಣಿ, ಪಕ್ಷಿಗಳು ಬೆಂಕಿಯಲ್ಲಿ ಬೆಂದು ಕರಕಲಾಗಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇತ್ತೀಚೆಗೆ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸಲು ಡ್ರೋನ್‌ ಮೊರೆ ಹೋಗಿದ್ದು, ಕಾಡ್ಗಿಚ್ಚಿಗೆ ಕಾರಣರಾಗುವವರ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಇದರ ಜೊತೆಗೆ ಹಲವು ಯೋಜನೆಗಳನ್ನು ರೂಪಿಸಿದರೂ ಕೂಡ ಬೆಂಕಿ ಅವಘಡಗಳು ಹೆಚ್ಚಿದ್ದವು. ಚಿಕ್ಕಮಗಳೂರಿನ ಸಿಂದಿಗೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ಪ್ರತಿ ಬಾರಿ ಕಿಡಿಗೇಡಿಗಳ ಕೃತ್ಯಕ್ಕೆ ಕಾಡಿಗೆ ಬೆಂಕಿ ಹಾಕುವ ಪ್ರಕರಣಗಳು ಕಂಡು ಬರುತ್ತಿದ್ದವು.

ಭೂಕಂಪದ ಅವಶೇಷದಡಿಯಲ್ಲಿ ಜನಿಸಿ ಪವಾಡ ಸದೃಶ್ಯವಾಗಿ ಬದುಕಿ ಬಂದ ಹಸುಗೂಸು

ಟರ್ಕಿ ಹಾಗೂ ಸಿರಿಯಾದಲ್ಲಿ ಸೋಮವಾರ ಭೂಕಂಪ ಸಂಭವಿಸಿದ್ದು, ಇದರಲ್ಲಿ ಅನೇಕ ಕಟ್ಟಡಗಳು ನೆಲಸಮವಾಗಿವೆ. ಇಪ್ಪತ್ತೊಂದು ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಮಯದಲ್ಲಿ ಭೂಕಂಪದಿಂದಾಗಿ ಕುಸಿದು ಬಿದ್ದ ಮನೆಯ ಅವಶೇಷದಡಿಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಕುಟುಂಬದವರು ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ. ಪವಾಡ ಸದೃಶ್ಯವೆಂಬಂತೆ ಆಗ ತಾನೇ ಹುಟ್ಟಿದ ಮಗು ಬದುಕಿ ಬಂದಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪವಾಡ ಸದೃಶ್ಯವಾಗಿ ಬದುಕಿಬಂದ ಕಂದಮ್ಮನಿಗೆ ಅಯಾ ಎಂದು ಹೆಸರಿಸಲಾಗಿದೆ, ಇದರರ್ಥ ಅರೇಬಿಕ್ ಭಾಷೆಯಲ್ಲಿ ‘ಪವಾಡ’.

ಇದನ್ನೂ ಓದಿ : ಕರ್ನಾಟಕ ಬಜೆಟ್ ಅಧಿವೇಶನ ನಾಳೆಯಿಂದ ಆರಂಭ : ವಿಧಾನಸೌದದ ಸುತ್ತಲೂ ನಿಷೇಧಾಜ್ಞೆ ಜಾರಿ

ಇದನ್ನೂ ಓದಿ : Rape case- principal arrested: ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಪ್ರಕರಣ: ಪ್ರಾಂಶುಪಾಲ ಅರೆಸ್ಟ್

Fire accident in the forest: Chikkamagaluru shaken by forest fire: Fire accident in reserve forest

Comments are closed.