ಸೋಮವಾರ, ಏಪ್ರಿಲ್ 28, 2025
HomeCrimeಕೋಟದಲ್ಲಿ ಮೀನುಗಾರಿಕಾ ದೋಣಿ ದುರಂತ : ಓರ್ವ ಸಮುದ್ರಪಾಲು

ಕೋಟದಲ್ಲಿ ಮೀನುಗಾರಿಕಾ ದೋಣಿ ದುರಂತ : ಓರ್ವ ಸಮುದ್ರಪಾಲು

- Advertisement -

ಕೋಟ : ಸಮುದ್ರಕ್ಕೆ ಮೀನು ಹಿಡಿಯಲು ತೆರಳಿದ್ದ ದೋಣಿಯೊಂದು ಮಗುಚಿ (fishing boat disaster) ಓರ್ವ ಸಾವನ್ನಪ್ಪಿದ್ದು, ಇಬ್ಬರು ಪಾರಾಗಿರುವ ದುರಂತ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಪಾರಂಪಳ್ಳಿಯಲ್ಲಿ ನಡೆದಿದೆ.

ಕೋಟ ಸಮೀಪದ ಪಾರಂಪಳ್ಳಿ ಪಡುಕೆರೆಯ ಭಾಸ್ಕರ್ ಮೊಗವೀರ ಅವರ ಪುತ್ರ ಸುಮಂತ್ (20 ವರ್ಷ ) ಎಂಬವರೇ ಸಾವನ್ನಪ್ಪಿದವರು. ಶುಕ್ರವಾರದಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸುಮಂತ್‌ ಸಂದೀಪ್‌ ಹಾಗೂ ಪ್ರಜ್ವಲ್‌ ಎಂಬವರ ಜೊತೆಗೆ ದೋಣಿಯಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿದ್ದರು. ಆದರೆ ಭಾರೀ ಗಾಳಿಯ ಹೊಡೆತಕ್ಕೆ ದೈತ್ಯ ಅಲೆಗಳ ಸುಳಿಗೆ ಸಿಲುಕಿದ ದೋಣಿ ಸಮುದ್ರದಲ್ಲಿ ಮಗುಚಿದೆ.

ಸಮುದ್ರದ ಅಲೆಗೆ ಸಿಲುಕಿ ದೋಣಿ ಮಗುಚುತ್ತಿದ್ದಂತೆಯೇ ಸುಮಂತ್‌ ಸಮುದ್ರದ ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಆದರೆ ಅದೃಷ್ಟವಶಾತ್ ದೋಣಿಯಲ್ಲಿದ್ದ ಸಂದೀಪ್‌ ಹಾಗೂ ಪ್ರಜ್ವಲ್‌ ಈಜಿ ದಡ ಸೇರಿದ್ದಾರೆ. ಸ್ಥಳೀಯ ಮೀನುಗಾರರು ಸುಮಂತ್‌ನನ್ನು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರಲ್ಲಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಶಾಲಾ ಬಾಲಕಿ ಸಾವು

ಬೈಂದೂರು : ಮಕ್ಕಳನ್ನು ಸಮಾಧಾನ ಮಾಡಲು ಪೋಷಕರು ಚಾಕಲೇಟ್‌ ನೀಡುವುದು ಮಾಮೂಲು. ಆದ್ರೆ ಇನ್ಮುಂದೆ ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಪೋಷಕರು ಎಚ್ಚರವಾಗಿರಬೇಕು. ಯಾಕೆಂದ್ರೆ ಶಾಲೆಗೆ ತೆರಳುವ ವೇಳೆಯಲ್ಲಿ ಮನೆಯವರು ನೀಡಿದ್ದ ಚಾಕಲೇಟ್‌ ನುಂಗಿ ಶಾಲಾ ಬಾಲಕಿಯೋರ್ವಳು ಉಸಿರುಗಟ್ಟಿ ಸಾವನ್ನಪ್ಪಿರುವ ದುರಂತರ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ಶಮಿತ್ – ಸಮನ್ವಿ ನಿಲಯದ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ (6 ವರ್ಷ) ದುರಂತ ಸಾವನ್ನಪ್ಪಿದ್ದ ಬಾಲಕಿ. ಸಮನ್ವಿ ಉಪ್ಪುಂದದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳು. ಎಂದಿನಂತೆಯೇ ಬೆಳಗ್ಗೆ ಸಮವಸ್ತ್ರ ಧರಿಸಿ ಶಾಲೆಗೆ ಹೊರಡುವ ವೇಳೆಯಲ್ಲಿ ಬಾಲಕಿ ಶಾಲೆಗೆ ತೆರಳುವುದಿಲ್ಲ ಎಂದಿದ್ದಾಳೆ.

ಆದರೆ ಮನೆಯವರು ಬಾಲಕಿಯ ಕೈಗೊಂದು ಚಾಕಲೇಟ್‌ ನೀಡಿ ಪುಸಲಾಯಿಸಿ ಶಾಲೆಗೆ ಕಳುಹಿಸಿದ್ದರು. ಶಾಲಾ ಬಸ್‌ ಬರುತ್ತಿದ್ದಂತೆಯೇ ಕೈಯಲ್ಲಿದ್ದ ಚಾಕಲೇಟ್‌ನ್ನು ಪ್ಲಾಸ್ಟಿಕ್‌ ಸಮೇತ ಬಾಯಲ್ಲಿ ಹಾಕಿಕೊಂಡು ಬಸ್ಸಿನ ಬಳಿಗೆ ಓಡಿದ್ದಾಳೆ. ಈ ವೇಳೆಯಲ್ಲಿ ಬಾಲಕಿಗೆ ಉಸಿರುಗಟ್ಟಿ ಶಾಲಾ ವಾಹನದ ಬಳಿಯಲ್ಲಿಯೇ ಸಾವನ್ನಪ್ಪಿದ್ದಾಳೆ. ಕೂಡಲೇ ಬಸ್ಸಿನ ಚಾಲಕ ಹಾಗೂ ಸ್ಥಳೀಯರು ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಅಲ್ಲದೇ ಬಾಲಕಿಯನ್ನು ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್‌ ಬಾರದ ಲೋಕಕ್ಕೆ ಪಯಣಿಸಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಹುಷಾರ್‌ : ಬೈಂದೂರಲ್ಲಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಶಾಲಾ ಬಾಲಕಿ ಸಾವು

ಇದನ್ನೂ ಓದಿ : Ambulance hits Shiroor toll : ಶಿರೂರು ಟೋಲ್‌ ಕಂಬಕ್ಕೆ ಅಂಬ್ಯುಲೆನ್ಸ್‌ ಢಿಕ್ಕಿ : ಸಿಸಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

fishing boat disaster, fisherman death Kota Parmapalli near udupi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular