ಮಂಗಳವಾರ, ಏಪ್ರಿಲ್ 29, 2025
HomekarnatakaJagadish Shettar:‘ರಾಹುಲ್​ ಗಾಂಧಿ ಎಷ್ಟೇ ಪಾದಯಾತ್ರೆ ಮಾಡಿದ್ರೂ ಕಾಂಗ್ರೆಸ್​ ಉದ್ಧಾರವಾಗಲ್ಲ’ : ಜಗದೀಶ್​ ಶೆಟ್ಟರ್​ ವ್ಯಂಗ್ಯ

Jagadish Shettar:‘ರಾಹುಲ್​ ಗಾಂಧಿ ಎಷ್ಟೇ ಪಾದಯಾತ್ರೆ ಮಾಡಿದ್ರೂ ಕಾಂಗ್ರೆಸ್​ ಉದ್ಧಾರವಾಗಲ್ಲ’ : ಜಗದೀಶ್​ ಶೆಟ್ಟರ್​ ವ್ಯಂಗ್ಯ

- Advertisement -

ಧಾರವಾಡ : Jagadish Shettar Congress : ಕಾಂಗ್ರೆಸ್​ ದೇಶದಲ್ಲಿ ಎಷ್ಟೇ ಜಿಗಿದಾಡಿ ಪಾದಯಾತ್ರೆ ಮಾಡಿದರೂ ಆ ಪಕ್ಷ ಮಾತ್ರ ಉದ್ಧಾರ ಆಗಲ್ಲ ಅಂತಾ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ವ್ಯಂಗ್ಯವಾಡಿದ್ದಾರೆ. ಧಾರವಾಡದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್​ ಪಕ್ಷ ಈಗಾಗಲೇ ಅಲುಗಾಡುತ್ತಿದೆ. ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್​ ತನ್ನ ಅಸ್ತಿತ್ವವನ್ನು ಕಳೆದುಕೊಳ್ತಿದೆ. ರಾಹುಲ್​ ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಾರೋ ಅಲ್ಲೆಲ್ಲ ಕಾಂಗ್ರೆಸ್​ ಪಕ್ಷ ಮನೆಗೆ ಹೋಗುತ್ತೆ ಅಂತಾ ಭವಿಷ್ಯ ನುಡಿದಿದ್ದಾರೆ .

ರಾಹುಲ್​ ಗಾಂಧಿ ಈಗ ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದಾರೆ. ರಾಹುಲ್​ ಕರ್ನಾಟಕವನ್ನು ದಾಟಿ ಮುಂದೆ ಹೋಗ್ತಿದ್ದಂತೆಯೇ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ನಾನೊಂದು ದಿಕ್ಕು, ನೀನೊಂದು ದಿಕ್ಕು ಅಂತಾ ದೂರವಾಗಲಿದ್ದಾರೆ. ಸಿದ್ದುವಿನಿಂದಾಗಿ ಪಂಜಾಬ್​ನಲ್ಲಿ ಕಾಂಗ್ರೆಸ್​ ಪಕ್ಷ ಸೋಲನ್ನು ಕಂಡಿದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯರಿಂದಾಗಿ ಕಾಂಗ್ರೆಸ್​ ಮತ್ತೆ ಸೋಲುತ್ತದೆ ಎಂದು ಹೇಳಿದರು.

ಇದೇ ವೇಳೆ ನವಲಗುಂದ ವಿಧಾನಸಭಾ ಚುನಾವಣೆ ವಿಚಾರವಾಗಿಯೂ ಮಾತನಾಡಿದ ಶೆಟ್ಟರ್​, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತಲೆ ಎತ್ತೋಕೆ ಮುಖ್ಯ ಕಾರಣ ಶಂಕರ್​ಪಾಟೀಲ್ ಮುನೇನಕೊಪ್ಪ. ಸಹೋದರರನ್ನು ಕಳೆದುಕೊಂಡ ನೋವಿನ ನಡುವೆಯೂ ಅವರು ಕ್ಷೇತ್ರದ ಜನತೆಯ ಹಿತಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬಂಡಾಯದ ನಾಡು ನವಲಗುಂದದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೆಲ್ಲ ಕಳಸ ಬಂಡೂರಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಹೀಗಾಗಿ ಇಲ್ಲಿನ ರೈತರಿಗೆ ಬಿಜೆಪಿ ಮೇಲೆ ಗೌರವವಿದೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂದು ಹೇಳಿದರು.

ಇದನ್ನು ಓದಿ : ಹಿಜಾಬ್ ಧರಿಸಲು ಶಾಲೆ, ಕಾಲೇಜುಗಳಲ್ಲಿ ಅವಕಾಶವಿಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಇದನ್ನೂ ಓದಿ : Olavina Nildana:ತಾರಿಣಿಯ ಕಡೆ ವಾಲುತ್ತಿದ್ದಾನೆ ಸಿದ್ದಾಂತ್, ಕುತೂಹಲ ಹುಟ್ಟಿಸಿದ ಒಲವಿನ ನಿಲ್ದಾಣ

Former CM Jagadish Shettar’s sarcasm against the Congress party

RELATED ARTICLES

Most Popular