Women’s Asia Cup : ಮಹಿಳಾ ಏಷ್ಯಾ ಕಪ್ : ದಾಖಲೆಯ 8ನೇ ಬಾರಿ ಫೈನಲ್ ತಲುಪಿದ ಭಾರತದ ವನಿತೆಯರು

ಸಿಲ್ಹೆಟ್ : ಮಹಿಳಾ ಏಷ್ಯಾ ಕಪ್ (Women’s Asia Cup)ಕ್ರಿಕೆಟ್ ಟೂರ್ನಿ ಭಾರತದ ವನಿತೆಯರು (Asia Cup Indian women) ದಾಖಲೆಯ 8ನೇ ಬಾರಿ ಫೈನಲ್ ತಲುಪಿದ್ದಾರೆ. ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್’ಪ್ರೀತ್ ಕೌರ್ ಸಾರಥ್ಯದ ಭಾರತ ತಂಡ, ಇದೇ ಮೊದಲ ಬಾರಿ ಏಷ್ಯಾ ಕಪ್ ಸೆಮಿಫೈನಲ್ ತಲುಪಿದ್ದ ಕ್ರಿಕೆಟ್ ಶಿಶು ಥಾಯ್ಲೆಂಡ್ ತಂಡವನ್ನು 74 ರನ್’ಗಳಿಂದ ಸುಲಭವಾಗಿ ಮಣಿಸಿ ಫೈನಲ್ ತಲುಪಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕಿತು. ಭಾರತ ಪರ ಉಪನಾಯಕಿ ಸ್ಮೃತಿ ಮಂಧನ 13 ರನ್ ಗಳಿಸಿ ಔಟಾದ್ರೂ, ಮತ್ತೊಬ್ಬ ಓಪನಿಂಗ್ ಬ್ಯಾಟರ್ ಶೆಫಾಲಿ ವರ್ಮಾ 28 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಒಳಗೊಂಡ 42 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗ್ಸ್ 27 ಮತ್ತು ನಾಯಕಿ ಹರ್ಮನ್’ಪ್ರೀತ್ ಕೌರ್ 36 ರನ್’ಗಳ ಕೊಡುಗೆ ನೀಡಿದರು.

ನಂತರ ಗುರಿ ಬೆನ್ನಟ್ಟಿದ ಥಾಯ್ಲೆಂಡ್ ನಿಗದಿತ 20 ಓವರ್’ಗಳಲ್ಲಿ 9 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಲಷ್ಟೇ ಶಕ್ತವಾಗಿ ಭಾರತಕ್ಕೆ ಶರಣಾಯಿತು. ಭಾರತ ಪರ ಆಲ್ರೌಂಡರ್ ದೀಪ್ತಿ ಶರ್ಮಾ 7 ರನ್ನಿಗೆ 3 ವಿಕೆಟ್ ಉರುಳಿಸಿದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 10 ರನ್ನಿಗೆ 2 ವಿಕೆಟ್ ಪಡೆದರು.

ಇದರೊಂದಿಗೆ ಮಹಿಳಾ ಏಷ್ಯಾ ಕಪ್(Women’s Asia Cup)ನಲ್ಲಿ ಭಾರತ ತಂಡ ಇಲ್ಲಿಯವರೆಗೆ 8 ಬಾರಿ ಬಾರಿ ಫೈನಲ್ ತಲುಪಿದಂತಾಗಿದ್ದು, 6 ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 2004ರಲ್ಲಿ ಆರಂಭವಾದ ವನಿತೆಯರ ಏಷ್ಯಾ ಕಪ್’ನಲ್ಲಿ ಭಾರತ ಪ್ರತೀ ಟೂರ್ನಿಯಲ್ಲೂ ಫೈನಲ್ ತಲುಪಿದ ಸಾಧನೆ ಮಾಡಿದೆ. ಈ ಪೈಕಿ 2004ರಿಂದ 2016ರವರೆಗೆ ಭಾರತ ತಂಡ ಸತತ ಆರು ಬಾರಿ ಚಾಂಪಿಯನ್ ಆಗಿತ್ತು. 2018ರ ಫೈನಲ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿತ್ತು. ಈ ಬಾರಿ ಮತ್ತೆ ಫೈನಲ್ ತಲುಪಿರುವ ಭಾರತ 7ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ : Sourav Ganguly snubs by BCCI : ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಬಯಸಿದ್ದ ಗಂಗೂಲಿಗೆ “ಶಾ” ಶಾಕ್!

ಇದನ್ನೂ ಓದಿ : Sourav Ganguly: ಅವತ್ತು ದ್ರಾವಿಡ್, ಇವತ್ತು ಬಿನ್ನಿ.. ಸೌರವ್ ಗಂಗೂಲಿ ಪಟ್ಟಕ್ಕೆ ಲಗ್ಗೆ ಇಟ್ಟ ಕನ್ನಡಿಗರು

ಇದನ್ನೂ ಓದಿ : Suryakumar Yadav: ಟಿ20 ವಿಶ್ವಕಪ್ : ಪತಿಯ ಯಶಸ್ಸಿಗೆ ದೇವರ ಮೊರೆ ಹೋದ ಸೂರ್ಯನ ಪತ್ನಿ, ಕರಾವಳಿಯಲ್ಲಿ ದೇವಿಶಾ ಶೆಟ್ಟಿ ತೀರ್ಥಯಾತ್ರೆ

ಮಹಿಳಾ ಏಷ್ಯಾ ಕಪ್’ನಲ್ಲಿ ಭಾರತದ ವನಿತೆಯರ ಸಾಧನೆ:

  • 2004: ಚಾಂಪಿಯನ್ (ಏಕದಿನ)
  • 2005: ಚಾಂಪಿಯನ್ (ಏಕದಿನ)
  • 2006: ಚಾಂಪಿಯನ್ (ಏಕದಿನ)
  • 2008: ಚಾಂಪಿಯನ್ (ಏಕದಿನ)
  • 2012: ಚಾಂಪಿಯನ್ (ಟಿ20)
  • 2016: ಚಾಂಪಿಯನ್ (ಟಿ20)
  • 2018: ರನ್ನರ್ಸ್ ಅಪ್ (ಟಿ20)
  • 2022: ಫೈನಲ್ (ಟಿ20) (ಅಕ್ಟೋಬರ್ 15ಕ್ಕ ಫೈನಲ್)

Women’s Asia Cup: Indian women reached the final for a record 8th time

Comments are closed.