ಬೆಳಗಾವಿ : Laxman Savadi car accident :ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾರು ಅಪಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಲಕ್ಷ್ಮಣ್ ಸವದಿ ಪಾರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಹಾರುಗೇರಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಅಥಣಿಯಿಂದ ಗೋಕಾಕ ಕಡೆಗೆ ಹೋಗುವಾಗ ಈ ಕಾರು ಅಪಘಾತ ನಡೆದಿದೆ. ಲಕ್ಷ್ಮಣ ಸವದಿ ಅವರ ಜತೆಗೆ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು.
ಕಿಯಾ ಕಂಪನಿಯ ಕಾರ್ನಿವಾಲ್ ಲಿಮೋಸಿನ್ ಹೆಸರಿನ ಐಶಾರಾಮಿ ಕಾರು ಇದಾಗಿದ್ದು ಏರ್ ಬ್ಯಾಗ್ ಇದ್ದ ಕಾರಣ ಭಾರಿ ಅನಾಹುತ ತಪ್ಪಿದೆ. ಅಪಘಾತಗೊಂಡು ಕಾರು ಪಲ್ಟಿಯಾದ ಬಳಿಕ ಸನ್ ರೂಪ್ ಮೂಲಕ ಲಕ್ಷ್ಮಣ ಸವದಿ ಹೊರ ಬಂದಿದ್ದಾರೆ. ವಾಹನದಲ್ಲಿ ಇದ್ದ ಲಕ್ಷ್ಮಣ ಸವದಿ,ಆಪ್ತ ಸಹಾಯಕ ಮತ್ತು ಚಾಲಕ ಸೇರಿದಂತೆ ಮೂರು ಜನ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಅಪಘಾತದ ಬಳಕ ಲಕ್ಷ್ಮಣ ಸವದಿ ಅವರನ್ನು ಹಾರೂಗೇರಿ ಪಟ್ಟಣದ ಮಲ್ಲಿಕಾರ್ಜುನ ನಾರಗೊಂಡ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅಪಘಾತದಲ್ಲಿ ಎದೆ ಭಾಗಕ್ಕೆ ಪೆಟ್ಟು ಬಿದ್ದ ಸಂಶಯದ ಹಿನ್ನಲೆಯಲ್ಲಿ ಎಕ್ಸ್ ರೇ ಪರೀಕ್ಷೆ ನಡೆಸಲಾಯಿತು. ಆ ಬಳಿಮ ಲಕ್ಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದ್ದು ತಂದೆಯವರಿಗೆ ಹಾರೂಗೇರಿ ಬಳಿ ಕಾರ್ ಅಪಘಾತವಾಗಿದೆ. ದೇವರ ದಯದಿಂದ ಲಕ್ಷ್ಮಣ ಸವದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಅಪಘಾತದ ಬಳಿಕ ಚಿಕಿತ್ಸೆ ಪಡೆದು ಲಕ್ಷ್ಮಣ ಸವದಿ ಅಥಣಿ ಪಟ್ಟಣದಲ್ಲಿರುವ ತಮ್ಮ ಮನೆಗೆ ಆಗಮಿಸಿದರು. ಮನೆ ಬಳಿ ಅಭಿಮಾನಿಗಳ ಪ್ರೀತಿ ಕಂಡು ಗದ್ಗತಿತರಾದರು. ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಲಕ್ಷ್ಮಣ ಸವದಿ ಅಭಿಮಾನಿಗಳತ್ತ ಕೈ ಬೀಸಿ ಬಾಗಿ ನಮಸ್ಕರಿಸಿ ಮನೆಯ ಒಳಗೆ ಹೋದರು.
ಇದನ್ನು ಓದಿ : Hindu awareness letter : ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ ಹಿಂದೂ ಜಾಗೃತಿ ಸಂದೇಶ
Former DCM Laxman Savadi car accident: Savadi narrowly escaped