Pramod Muthalik​​ :ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ತಡೆಯೊಡ್ಡಿದ್ದರೆ ಗಣೇಶನ ಶಾಪ ತಟ್ಟುತ್ತೆ : ಪ್ರಮೋದ್​ ಮುತಾಲಿಕ್​​

ಹುಬ್ಬಳ್ಳಿ: Pramod Muthalik​​ :ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕೊನೆಗೂ ಗಣೇಶ ಪ್ರತಿಷ್ಠಾಪನೆಗೆ ನ್ಯಾಯಾಲಯ ಅವಕಾಶ ನೀಡಿದೆ. ಇಂದು ಗಣೇಶನ ಪ್ರತಿಷ್ಟಾಪನೆಯು ಮಾಡಲಾಗಿದೆ‌. ಹೀಗಾಗಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ‌ ಸಿ.ಎಂ ಜಗದೀಶ್ ಶೆಟ್ಟರ್, ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗಣೇಶನ ದರ್ಶನ ಪಡೆದಿದ್ದಾರೆ. ದರ್ಶನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ನಾಯಕರು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ‌.

ಕೋರ್ಟ್ ಗೆ ಹೋಗಿ ಗಣೇಶ ಪ್ರತಿಷ್ಟಾಪನೆಗೆ ತಡೆಯೊಡ್ಡಿದವರಿಗೆ ಖಂಡಿತವಾಗಿಯೂ ಗಣೇಶನ ಶಾಪ ತಟ್ಟುತ್ತೆ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ನೀವು ಯಾವುದೇ ಕೋರ್ಟ್ ಗೆ ಹೋಗಿ,ಆದ್ರೆ ಈಗಾಗಲೇ ಗಣೇಶನ ಪ್ರತಿಷ್ಠಾಪನೆ ಆಗಿದೆ, ಪೂಜೆಯು ಆಗಿದೆ. ಯಾವ ಶಕ್ತಿಯೂ ಇದನ್ನ ತಡೆಯೋಕೆ ಸಾಧ್ಯವಿಲ್ಲ ಎಂದು ಮುತಾಲಿಕ್ ಹೇಳಿದ್ದಾರೆ. ಮೆರವಣಿಗೆ ಮಾಡದೇ ಗಣೇಶ ಪ್ರತಿಷ್ಠಾಪನೆ ಮಾಡುವಂತೆ ಆಗಿರೋದಕ್ಕೆ‌ ಕಾಂಗ್ರೆಸ್ ಕಾರಣ‌ ಎಂದು ಆರೋಪಿಸಿರುವ ಮುತಾಲಿಕ್ ಮುಸ್ಲಿಂ ಕಿಡಿಗೇಡಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಹೇಳಿದ್ದಾರೆ‌. ಉತ್ಸವ ಆರಂಭಿಸಿ 129 ವರ್ಷವಾಗಿದೆ. ಬ್ರಿಟೀಷರು ವಿರೋಧ ಮಾಡಲಿಲ್ಲ.ಆದರೆ ಕಾಂಗ್ರೆಸ್ ನವರು ಕುಮ್ಮಕ್ಕು ಕೊಟ್ಟು ಮುಸ್ಲಿಮರನ್ನು ಕೋರ್ಟ್ ಗೆ ಕಳಿಸುತ್ತಿದ್ದಾರೆ ಎಂದು‌ ಮುತಾಲಿಕ್ ಬೇಸರ ವ್ಯಕ್ತಪಡಿಸಿದರು.

ಇನ್ನು ಈ ವಿಚಾರದ ಕುರಿತಂತೆ ದೇವರ ದರ್ಶನದ ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದ್ದು 30 ವರ್ಷಗಳ ಹಿಂದೆ ರಾಷ್ಟ್ರ ಧ್ವಜ ಹಾರಿಸಲು ಹೋರಾಟ ಆಗಿತ್ತು. ಇದೇ ಮೈದಾನದಲ್ಲಿ ಧ್ವಜ ಹಾರಿಸಲು ವಿರೋಧ ಆಗಿತ್ತು. ನನ್ನೂ ಸೇರಿದಂತೆ ಅನೇಕರಿಗೆ ಲಾಠಿ ಏಟು ಬಿದ್ದಿತ್ತು. ಆದ್ರೆ 2011ರಿಂದ ಮಹಾನಗರ ಪಾಲಿಕೆಯಿಂದ ರಾಷ್ಟ್ರ ಧ್ವಜ ಹಾರಿಸುತ್ತಿದ್ದೇವೆ. ಇದೀಗ 30 ವರ್ಷದ ಬಳಿಕ ಗಣೇಶ ಪ್ರತಿಷ್ಠಾಪನೆ ಮಾಡಿದ್ದೇವೆ, ಇದೊಂದು ಐತಿಹಾಸಿಕ ದಿನ. ಎಲ್ಲರೂ ಸೌಹಾರ್ತೆಯಿಂದ ಹಬ್ಬ ಮಾಡಬೇಕು ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಕಾನೂನು ಪಾಲಿಸಿ ಮೂರು ದಿನ ಗಣೇಶ ಉತ್ಸವ ಮಾಡಬೇಕು. ಇಲ್ಲಿ ಯಾರ ಗೆಲುವು ಸೋಲು ಅಂತಾ ವರ್ತಿಸಬಾರದು‌. ಶಾಂತಿಯುತವಾಗಿ ನಡೆಯುವ ರೀತಿಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಹೇಳಿದರು.


ಇನ್ನು ಈ ವಿಚಾರದಲ್ಲಿಅಂಜುಮನ್ ಸಂಸ್ಥೆ ಸುಪ್ರಿಂಗೆ ಮೊರೆ ಹೋದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಲ್ಹಾದ ಜೋಶಿ ಅಂಜುಮನ್ ಮತ್ತು ಕೆಲವರು ಕೋರ್ಟ್‌ಗೆ ಹೋಗಿದ್ದಾರೆ. ಇದರ ಹಿಂದೆ ರಾಜಕೀಯ ಪಕ್ಷಗಳ ಕುಮ್ಮಕ್ಕಿದೆ. ಕೆಲವು ರಾಜಕೀಯ ಪಕ್ಷಗಳು ದಾರಿ ತಪ್ಪಿಸೋ ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಇದನ್ನು ಓದಿ : Gold price Rise today in India: ಗಣೇಶ ಹಬ್ಬದಂದು ಆಭರಣ ಪ್ರಿಯರಿಗೆ ಒಂದು ಬ್ಯಾಡ್ ನ್ಯೂಸ್, ಕುಸಿತವಾಗಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ಇದನ್ನೂ ಓದಿ : Laxman Savadi car accident: ಮಾಜಿ‌ ಡಿ.ಸಿ.ಎಂ ಲಕ್ಷ್ಮಣ ಸವದಿ‌ ಕಾರು ಅಪಘಾತ: ಕೂದಳೆಲೆ ಅಂತರದರಲ್ಲಿ ಪಾರಾದ ಸವದಿ

Ganesha will be cursed if there is any obstruction to the installation of Ganesha in Idga Maidan: Pramod Muthalik​​

Comments are closed.