ಸೋಮವಾರ, ಏಪ್ರಿಲ್ 28, 2025
Homekarnatakaವಯಸ್ಸಿನ ಕಾರಣಕ್ಕೆ ನಿವೃತ್ತಿ: ಸರಕಾರದ ವಿರುದ್ದ ಸಿಡಿದೆದ್ದ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ

ವಯಸ್ಸಿನ ಕಾರಣಕ್ಕೆ ನಿವೃತ್ತಿ: ಸರಕಾರದ ವಿರುದ್ದ ಸಿಡಿದೆದ್ದ ಬಿಸಿಯೂಟ ಕಾರ್ಯಕರ್ತೆಯರಿಂದ ಪ್ರತಿಭಟನೆ

- Advertisement -

ಬೆಂಗಳೂರು : (free Midday Meal Employees Protest) ಒಂದೆಡೆ ಬೆಲೆ ಏರಿಕೆ ನಿರುದ್ಯೋಗದ ಕಾರಣಕ್ಕೆ ಸರ್ಕಾರದ ವಿರುದ್ಧ ಜನ ಕಿಡಿಕಾರುತ್ತಿರುವಾಗಲೇ ರಾಜ್ಯ ಸರಕಾರಕ್ಕೆ ಮತ್ತೊಂದು ಸವಾಲು ಎದುರಾಗಿದೆ. ತಮ್ಮನ್ನು ಕೆಲಸದಿಂದ ವಜಾ ಮಾಡಿರುವುದನ್ನು ವಿರೋಧಿಸಿ ರಾಜ್ಯದ ಬಿಸಿಯೂಟ ನೌಕರರು ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ.

ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಆರಂಭಗೊಂಡಿದ್ದು, ತಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯಕರ್ತೆ ಯರು ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದ ಸಾವಿರಾರು ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನ ಪೌಷ್ಠಿಕಾಂಶಯುಕ್ತ ಅಡುಗೆ ಉಣಬಡಿಸುವ ಉದ್ದೇಶದಿಂದ 2001 ರಲ್ಲಿ ಬಿಸಿಯೂಟ ಯೋಜನೆ ಆರಂಭಿಸಿತ್ತು.

2001 ರಲ್ಲಿ ಪ್ರಾರಂಭವಾದ ಬಿಸಿಯೂಟ ಯೋಜನೆಯಲ್ಲಿ ಅಂದಾಜು 1 ಲಕ್ಷದ 19 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಪ್ರತಿನಿತ್ಯ 50 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕೊಡಲಾಗುತ್ತದೆ. ಇದುವರೆಗೂ ಈ ಬಿಸಿಯೂಟ ಕಾರ್ಯಕರ್ತೆಯರಿಗೆ 2500 ಸಾವಿರ ರೂಪಾಯಿ ಗೌರವಧನ ನೀಡುತ್ತ ಬರಲಾಗಿದೆ. ಸರ್ಕಾರಗಳು ಬದಲಾದರೂ ಬಿಸಿಯೂಟ‌ ಕಾರ್ಯಕರ್ತೆಯರ ಸ್ಥಿತಿಗತಿ ಬದಲಾಗಿಲ್ಲ.

ಈಗ ಸರ್ಕಾರ ನಿಯಮಗಳ ನೆಪವೊಡ್ಡಿ 60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ನೌಕರರನ್ನ ವಜಾ ಮಾಡಿದೆ. ಆದರೆ ಹೀಗೆ ವಜಾಮಾಡುವ ವೇಳೆ ಸರ್ಕಾರ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಪರಿಹಾರ ನೀಡಿಲ್ಲ. ೧೯ ವರ್ಷಗಳಿಂದ ರಾಜ್ಯದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ರುಚಿಯಾಗಿ,ಶುಚಿಯಾಗಿ ಅಡುಗೆ ಮಾಡಿ ಬಡಿಸಿದ ನಮಗೆ ಸರ್ಕಾರ ಹೀಗೆ ನಡು ನೀರಿನಲ್ಲಿ ಕೈಬಿಟ್ಟಿದೆ. ಹೀಗಾಗಿ ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಬಿಸಿಯೂಟ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಕಾಏಕಿ ಕೆಲಸದಿಂದ ತೆಗೆದಿರುವ ನೌಕರರಿಗೆ ಪರಿಹಾರ ಕೊಡಬೇಕು ಎಂದು ಕಾರ್ಯಕರ್ತೆಯರು ಶಿಕ್ಷಣ ಸಚಿವ ಬಿಸಿ ನಾಗೇಶ್ ಬಳಿ ಮನವಿ ಮಾಡಿದ್ದಾರೆ. ಆದ್ರೆ ಯಾವುದೇ ಪರಿಹಾರ ನೀಡದೇ ಕೆಲಸದಿಂದ ಸರ್ಕಾರ ವಜಾ ಮಾಡಿದೆ. 19 ವರ್ಷಗಳಿಂದ ದುಡಿಸಿಕೊಂಡು ಇದೀಗ ಯಾವುದೇ ಪರಿಹಾರ ಇಲ್ಲದೆ ಕೆಲಸದಿಂದ ಕೈ ಬಿಟ್ಟಿದ್ದಾರೆ. ಹೀಗಾಗಿ ನಮಗಾದ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ ಅನ್ನೋದು ಹೋರಾಟ ಮಾಡ್ತಿರೋ ಬಿಸಿಯೂಟ ಕಾರ್ಯಕರ್ತೆಯರ ಆಗ್ರಹ.

ಇದನ್ನೂ ಓದಿ : Background of main accused Nadeem : ಶಿವಮೊಗ್ಗ ಗಲಾಟೆ ಪ್ರಕರಣ : ಪ್ರಮುಖ ಆರೋಪಿ ನದೀಮ್​ ಹಿಂದಿದೆ ಕರಾಳ ಇತಿಹಾಸ

ಇದನ್ನೂ ಓದಿ : Savarkar controversy : ನಮ್ಮ ಮೆಟ್ರೋಗೂ ಕಾಲಿಟ್ಟ ಸಾರ್ವಕರ್ ವಿವಾದ : ಪೋಟೋ ಅಳವಡಿಕೆಗೆ ವಿರೋಧ

free Midday Meal Employees Protest In Freedom Park Retirement for Age factor

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular