BCCI former Secretary Amitabh Chaudhary : ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೃದಯಾಘಾತದಿಂದ ಸಾವು

ರಾಂಚಿ: (BCCI former Secretary Amitabh Chaudhary ) ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (Board of Control for Cricket in India – BCCI) ಮಾಜಿ ಕಾರ್ಯದರ್ಶಿ, ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ (JKCA) ಹಾಲಿ ಅಧ್ಯಕ್ಷ ಅಮಿತಾಭ್ ಚೌಧರಿ (Amitabh Chaudhary) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

58 ವರ್ಷ ವಯಸ್ಸಿನ ಅಮಿತಾಭ್ ಚೌಧರಿ ನಿವೃತ್ತ ಐಪಿಎಲ್ ಅಧಿಕಾರಿಯೂ ಹೌದು. ಜಾರ್ಖಂಡ್ ಪೊಲೀಸ್ ಇಲಾಖೆಯಲ್ಲಿ ಐಜಿಪಿಯಾಗಿದ್ದ ಅಮಿತಾಭ್ ಚೌಧರಿ, ಪೊಲೀಸ್ ಸೇವೆಯಿಂದ ನಿವೃತ್ತರಾದ ನಂತರ ಕ್ರಿಕೆಟ್ ಆಡಳಿತದ ಕಡೆ ಗಮನ ಹರಿಸಿದ್ದರು. ಜಾರ್ಖಂಡ್’ನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಿದ್ದ ಹಿಂದಿನ ಸೂತ್ರಧಾರ ಇವರೇ.

ಅಮಿತಾಭ್ ಚೌಧರಿ ನಿಧನಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದಕ್ಷ ಕ್ರಿಕೆಟ್ ಆಡಳಿತಗಾರನ ಅಕಾಲಿಕ ಮರಣಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.

ಇದನ್ನೂ ಓದಿ :

ಇದನ್ನೂ ಓದಿ :

BCCI former Secretary Amitabh Chaudhary is no more

Comments are closed.