ಮಂಗಳವಾರ, ಏಪ್ರಿಲ್ 29, 2025
HomekarnatakaGod Found in Ramohalli : ಹುಡುಕಿದಾಗ ಸಿಕ್ಕ ದೇವರು…! ರಾಮೋಹಳ್ಳಿಯಲ್ಲೊಂದು ವಿಸ್ಮಯಕಾರಿ ಘಟನೆ

God Found in Ramohalli : ಹುಡುಕಿದಾಗ ಸಿಕ್ಕ ದೇವರು…! ರಾಮೋಹಳ್ಳಿಯಲ್ಲೊಂದು ವಿಸ್ಮಯಕಾರಿ ಘಟನೆ

- Advertisement -

ಬೆಂಗಳೂರು : God Found in Ramohalli : ಬದುಕು ನಂಬಿಕೆಯನ್ನು ಆಧರಿಸಿ ನಿಂತಿದೆ. ಅಂತಹ ಅಗೋಚರವಾದ ಶಕ್ತಿಯೇ ದೇವರು. ಈ ಕಲಿಗಾಲದಲ್ಲೂ ದೇವರು ತನ್ನ ಲೀಲೆ ತೋರಿಸ್ತಾನಾ ಎಂದು ಕೇಳೋ ಜನರಿಗೆ ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ವಿಸ್ಮಯಕಾರಿಯಾಗಿ ತೋರುತ್ತಿದೆ. ಇಲ್ಲಿ ಜನರೇ ದೈವದ ಪ್ರೇರಣೆಯೊಂದಿಗೆ ದೇವರನ್ನು ಹುಡುಕಿದ್ದಾರೆ. ಇಂತಹದೊಂದು ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾಗಿದ್ದು ಬೆಂಗಳೂರಿನ ಗಡಿ ಭಾಗದಲ್ಲಿರೋ ರಾಮೋಹಳ್ಳಿ. ಇಲ್ಲಿನ ಪುರಾತನ ಶಿವ ದೇವಾಲಯ ವೊಂದು ಪಾಳು ಬಿದ್ದಿತ್ತು. ಹೀಗಾಗಿ ಜನರೆಲ್ಲ ಸೇರಿ ದೇವಾಲಯವನ್ನು ಜೀರ್ಣೋದ್ಧಾರ‌ ಮಾಡಿದ್ದರು.

ಕಳೆದ ವರ್ಷ ದೇವಾಲಯದ ಮರುನಿರ್ಮಾಣವಾಗಿತ್ತು. ಆದರೆ ಈ ದೇವಾಲಯದ ಮೂಲ ವಿಗ್ರಹ ಸಿಕ್ಕಿರಲಿಲ್ಲ. ಹೀಗಾಗಿ ಜನರು ಬೇರೊಂದು ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿದ್ದರು. ಹೀಗೆ ಬೇರೆ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದರೂ ದೇವಾಲಯದಲ್ಲಿ ಮೂಲ ವಿಗ್ರಹವಿಲ್ಲ ಎಂಬ ಸಂಗತಿ ಗ್ರಾಮಸ್ಥರನ್ನು ಕಾಡುತಿತ್ತು. ಹೀಗಾಗಿ ಜನರು ಮೂಲ ವಿಗ್ರಹವನ್ನು ಹುಡುಕಿಕೊಡುವಂತೆ ದೇವಿಗೆ ಪ್ರಶ್ನೆ ಇಟ್ಟಿದ್ದರು.ಈ ವೇಳೆ ಜನರಿಗೆ ದೇವಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡಿರುವ ದೇವರನ್ನು ಹಗ್ಗದಲ್ಲಿ ಕಟ್ಟಿ ತಲೆಯ ಮೇಲೆ ಹೊತ್ತು ಕೊಂಡು ಸಾಗಿ ಪಲ್ಲಕ್ಕಿ ನಿಂತ ಸ್ಥಳದಲ್ಲಿ ದೇವರಿಗಾಗಿ ಹುಡುಕಾಟ ನಡೆಸುವಂತೆ ದೇವಿ ಪ್ರೇರಣೆಯಾಗಿತ್ತು ಎನ್ನಲಾಗಿದೆ.

ದೇವಿ ತೋರಿಸಿದ ಜಾಗದಲ್ಲಿ ಮೂಲ ವಿಗ್ರಹ ಸಿಗುವ ಬಗ್ಗೆ ನಂಬಿಕೆಯಿಂದ ಜನರು ಎರಡು ಗಂಟೆ ಜಮೀನು ರಸ್ತೆಯಲ್ಲಿ ದೇವಿ ಮೆರವಣಿಗೆ ಮಾಡಿದ್ದರು. ಈ ವೇಳೆ ತಮ್ಮದೇವಿಯ ಪಲ್ಲಕ್ಕಿ ಎಲ್ಲಿ ನಿಲ್ಲುತ್ತೋ ಅಲ್ಲಿ ದೇವಿಯ ವಿಗ್ರಹ ಹುದುಗಿ ಎಂದು ಹುಡುಕಾಟ ನಡೆಸಲು‌ ನಿರ್ಧರಿಸಿದ್ದರು. ಎರಡು ಗಂಟೆಗಳ ಕಾಲ ಸಂಚರಿಸಿದ್ದ ದೇವಿ ವಿಗ್ರಹ ಬಳಿಕ ಒಂದು ಹುತ್ತದ ಬಳಿ ನಿಂತಿತ್ತು. ಅದನ್ನೇ ದೇವಿ ಸೂಚನೆ ಎಂದುಕೊಂಡ ಜನರು ಅರ್ಚಕರ ಸಮ್ಮುಖದಲ್ಲಿ ಹುತ್ತವನ್ನು ಅಗೆದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ವಿಸ್ಮಯವೊಂದು ನಡೆದಿದ್ದು, ಹುತ್ತದಲ್ಲಿ ಲಿಂಗ ಸ್ವರೂಪಿ ದೇವರ ವಿಗ್ರಹ ಪತ್ತೆಯಾಗಿದೆ.

ಇದನ್ನು ಕಂಡು ಜನರು ಮೂಕವಿಸ್ಮಿತರಾಗಿದ್ದು, ತಮ್ಮ ಬೇಡಿಕೆಗೆ ದೇವರೇ ಒಲಿದು ದೇವರ ಮೂಲ ಸ್ಥಾನವನ್ನು ತೋರಿಸಿದ್ದಾನೆ ಎಂದು ಸಂಭ್ರಮಿಸಿದ್ದಾರೆ. ಮಾತ್ರವಲ್ಲ ಮೂಲ ದೇವರ ಪ್ರತಿಷ್ಠಾಪನೆಗೂ ಸಿದ್ಧತೆ ನಡೆಸಿದ್ದಾರೆ. ಇನ್ನು ದೇವಿಯ ಪ್ರೇರಣೆಯಿಂದ ರಾಮೋಹಳ್ಳಿ ಗ್ರಾಮದಲ್ಲಿ ದೇವರ ಮೂಲ ವಿಗ್ರಹ ಪತ್ತೆಯಾಗಿರೋ ವಿಚಾರ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಗ್ರಾಮಸ್ಥರು ದೇವರ ದರ್ಶನಕ್ಕೆ ದೌಡಾಯಿಸಿದ್ದಾರೆ.

ಇದನ್ನೂ ಓದಿ : 7.25 ಲಕ್ಷ ಪ್ಯಾಕೇಜ್ ಕೊಟ್ರು ಶಿಕ್ಷಕರು ಸಿಗುತ್ತಿಲ್ಲ : ಖಾಸಗಿ‌ ಶಾಲೆಗಳಲ್ಲೀಗ ಶಿಕ್ಷಕರ ಕೊರತೆ

ಇದನ್ನೂ ಓದಿ : Garbage Problem : ಸಿಲಿಕಾನ್ ಸಿಟಿಗೆ ಕಾದಿದೆ ಕಸದ ಶಾಕ್: ಜುಲೈ 1 ರಿಂದ ಮುಷ್ಕರಕ್ಕೆ ಸಜ್ಜಾಗ್ತಿದ್ದಾರೆ ಪೌರ ಕಾರ್ಮಿಕರು

God Found in Ramohalli Near Banagalore, people searching in god

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular