Madhya Pradesh Clinched maiden Ranji Trophy : ಚೊಚ್ಚಲ ರಣಜಿ ಟ್ರೋಫಿ ಮುಡಿಗೇರಿಸಿಕೊಂಡ ಮಧ್ಯಪ್ರದೇಶ

ಬೆಂಗಳೂರು: ರಣಜಿ ಟ್ರೋಫಿ ಫೈನಲ್’ನಲ್ಲಿ (Ranji Trophy Final 2022) 41 ಬಾರಿಯ ಚಾಂಪಿಯನ್ಸ್ ಮುಂಬೈ ತಂಡವನ್ನು 6 ವಿಕೆಟ್’ಗಳಿಂದ ಮಣಿಸಿದ ಮಧ್ಯಪ್ರದೇಶ ಚೊಚ್ಚಲ ರಣಜಿ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ರಣಜಿ ಫೈನಲ್’ನಲ್ಲಿ 108 ರನ್’ಗಳ ಗೆಲುವಿನ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡ, 4 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆದಿದ್ದ 1998-99ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಸೋತು ನಿರಾಸೆಗೊಳಗಾಗಿದ್ದ ಮಧ್ಯಪ್ರದೇಶ, 23 ವರ್ಷಗಳ ನಂತರ ಅದೇ ಚಿನ್ನಸ್ವಾಮಿ ಮೈದಾನದಸ್ಸೇ ಚೊಚ್ಚಲ ರಣಜಿ ಟ್ರೋಫಿ ಗೆದ್ದದ್ದು ವಿಶೇಷ. 1998-99ರಫೈನಲ್’ನಲ್ಲಿ ಮಧ್ಯಪ್ರದೇಶ ತಂಡದ ನಾಯಕರಾಗಿದ್ದ ಚಂದ್ರಕಾಂತ್ ಪಂಡಿತ್, ಈಗ ಮಧ್ಯಪ್ರದೇಶ ತಂಡದ ಕೋಚ್ ಆಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಮತ್ತೊಂದು ವಿಶೇಷ.

ರಣಜಿ ಫೈನಲ್ ಪಂದ್ಯದ ಸಂಕ್ಷಿಪ್ತ ಸ್ಕೋರ್
ಮುಂಬೈ: ಪ್ರಥಮ ಇನ್ನಿಂಗ್ಸ್ 374 (ಸರ್ಫರಾಜ್ ಖಾನ್ 134, ಯಶಸ್ವಿ ಜೈಸ್ವಾಲ್ 78)
ಮಧ್ಯಪ್ರದೇಶ: ಪ್ರಥಮ ಇನ್ನಿಂಗ್ಸ್ 536 (ಯಶ್ ದುಬೆ 133, ಶುಭಂ ಶರ್ಮಾ 116, ರಜತ್ ಪಾಟಿದಾರ್ 122)

ಮುಂಬೈ: ದ್ವಿತೀಯ ಇನ್ನಿಂಗ್ಸ್ 269 (ಸುವೇದ್ ಪಾರ್ಕರ್ 51, ಸರ್ಫರಾಜ್ ಖಾನ್ 45)
ಮಧ್ಯಪ್ರದೇಶ: ದ್ವಿತೀಯ ಇನ್ನಿಂಗ್ಸ್ 108/4 (ಹಿಮಾನ್ಶು ಮಂತ್ರಿ 36, ಶುಭಂ ಶರ್ಮಾ 30, ರಜತ್ ಪಾಟಿದಾರ್ 30*)
ಫಲಿತಾಂಶ: ಮಧ್ಯಪ್ರದೇಶಕ್ಕೆ 6 ವಿಕೆಟ್ ಗೆಲುವು

ಇದನ್ನೂ ಓದಿ : Rohit Sharma Tests Covid Positive : ಟೀಂ ಇಂಡಿಯಾಕ್ಕೆ ಆಘಾತ, ರೋಹಿತ್‌ ಶರ್ಮಾ ಗೆ ಕೋವಿಡ್‌ ಪಾಸಿಟಿವ್‌

ಇದನ್ನೂ ಓದಿ : Kapil Dev Gift Sudeep : ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್.. ಗಿಫ್ಟ್ ನೋಡಿ ಸುದೀಪ್ ಕ್ಲೀನ್ ಬೌಲ್ಡ್

ಇದನ್ನೂ ಓದಿ : IND vs IRE : ಇಂದು ಐರ್ಲೆಂಡ್‌ ವಿರುದ್ದ ಮೊದಲ ಟಿ20 ಪಂದ್ಯ : ಹೇಗಿದೆ India Playing XI

Ranji Trophy Final 2022 Madhya Pradesh Clinched maiden Ranji Trophy

Comments are closed.