ಬೆಂಗಳೂರು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಸಂಧ್ಯಾ ಸುರಕ್ಷ, ವಿಧವಾ ವೇತನ ಹಾಗೂ ದಿವ್ಯಾಂಗರ ವೇತನವನ್ನು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಕ್ಯಾಬಿನೆಟ್ ಸಭೆಯ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರ ಮಕ್ಕಳ ಅನುಕೂಲಕ್ಕಾಗಿ ಶಿಷ್ಯ ವೇತನ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೇ ಸಂಧ್ಯಾ ಸುರಕ್ಷಾ ಯೋಜನೆಯಡಿಯಲ್ಲಿನ ಫಲಾನುಭವಿಗಳಿಗೆ ಇದುವರೆಗೆ 1 ಸಾವಿರ ನೀಡಲಾಗುತ್ತಿದ್ದು, ಅದನ್ನು ರೂಪಾಯಿಗೆ ಹೆಚ್ಚಳ ಮಾಡಲಾಗುತ್ತದೆ. ಈ ಯೋಜನೆಗೆ ಸುಮಾರು 853 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಈ ಯೋಜನೆಯಿಂದ 35.98 ಲಕ್ಷ ಜನರಿಗೆ ಸಹಕಾರಿಯಾಗಲಿದೆ.
ಇನ್ನು ವಿಧವಾ ವೇತನ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಪ್ರಸ್ತುತ 600 ರೂಪಾಯಿ ನೀಡಲಾಗುತ್ತಿದ್ದು, ಇದನ್ನ 800 ರೂಪಾಯಿಗೆ ಹೆಚ್ಚಳ ಮಾಡಲಾಗು ತ್ತದೆ. ಇದರಿಂದ ಸರಕಾರ 414 ಕೋಟಿ ಹೆಚ್ಚುರಿ ಹಣ ವ್ಯಯ ಮಾಡಲಾಗುತ್ತಿದೆ. ಇನ್ನು 17.25 ಲಕ್ಷ ಜನರಿಗೆ ಸಹಕಾರಿಯಾಗಲಿದೆ.
ಅಲ್ಲದೇ ದಿವ್ಯಾಂಗರಿಗೆ ಅನುಕೂಲಕ್ಕಾಗಿ ನೀಡಲಾಗುತ್ತಿರುವ ಅಂಗವಿಕಲರಿಗೆ ಶೇ.40 ರಂದ 75 ರಷ್ಟು ವಿಕಲಚೇತನರಿಗೆ600 ರೂಪಾಯಿ ನೀಡಲಾಗುತ್ತಿದ್ದು, ಅದನ್ನ 800 ರೂಪಾಯಿ ಗೆ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದಾಗಿ ಸುಮಾರು 90 ಕೋಟಿ ಹೆಚ್ಚುವರಿ ಹೊರೆ ಸರಕಾರದ ಮೇಲೆ ಬೀಳಲಿದೆ. ಆದರೆ 3.66ಲಕ್ಷ ಜನರಿಗೆ ಸಹಕಾರಿಯಾಗಲಿದೆ.