ಭಾನುವಾರ, ಏಪ್ರಿಲ್ 27, 2025
HomekarnatakaTown hall rental rates reduced : ರಂಗಕರ್ಮಿಗಳು, ಕಲಾವಿದರಿಗೆ ಸಿಹಿಸುದ್ದಿ: ಸೆ.1 ರಿಂದ ಟೌನ್...

Town hall rental rates reduced : ರಂಗಕರ್ಮಿಗಳು, ಕಲಾವಿದರಿಗೆ ಸಿಹಿಸುದ್ದಿ: ಸೆ.1 ರಿಂದ ಟೌನ್ ಹಾಲ್ ಬಾಡಿಗೆ ದರ ಇಳಿಕೆ

- Advertisement -

ಬೆಂಗಳೂರು : Town hall rental rates reduced :ಕೊರೋನಾ ಬಳಿಕ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳ ಸಂಖ್ಯೆ ಕುಸಿದಿದೆ. ಹೀಗಾಗಿ ಕಲಾವಿದರನ್ನು ಪ್ರೋತ್ಸಾಹಿಸಲು ಹಾಗೂ ರಂಗ ಕಲಾವಿದರಿಗೆ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಲು ಟೌನ್ ಹಾಲ್ ಬಾಡಿಗೆಯನ್ನು ಕಡಿಮೆ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಡೆತನದಲ್ಲಿರುವ ಪುಟ್ಟಣ್ಣ ಶೆಟ್ಟಿ ಪುರ ಭವನದ ಬಾಡಿಗೆ ದರವನ್ನು ಇಳಿಸಿ ಆದೇಶ ಹೊರಡಿಸಿದೆ. ಸಪ್ಟೆಂಬರ್ 1 ರಿಂದ ಈ ಆದೇಶ ಜಾರಿಗೆ ಬರಲಿದೆ.

ಈ ಬಗ್ಗೆ ನೀಡಿರುವ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ ಪುರ ಅವರು, ಟೌನ್‌ಹಾಲ್‌ ಈ ಹಿಂದೆ ಪೂರ್ತಿ ದಿನ ಬೆಳಗ್ಗೆ 8 ರಿಂದ ರಾತ್ರಿ 10. ಗಂಟೆವರೆಗೆ ಎಸಿ ಸಹಿತ (ಹವಾ ನಿಯಂತ್ರಿತ) ಬಾಡಿಗೆ ಬೇಕಾದರೆ 75,000 ರೂಪಾಯಿ ದರವಿದೆ. ಈ ಮೊದಲು ನಾನ್ ಎ.ಸಿ (ಎಸಿ ರಹಿತ) 60,000 ರೂ. ನೀಡಬೇಕಿತ್ತು. ಇದೀಗ ದರ ಪರಿಷ್ಕರಿಸಿದ್ದರಿಂದ ಪೂರ್ತಿ ಒಂದು ದಿನಕ್ಕೆ ಎಸಿ ಸಹಿತ 60,000 ರೂ.ಗೆ ಲಭ್ಯವಾಗಲಿದೆ. ಎಸಿ ರಹಿತ 50,000 ರೂ.ದರ ನಿಗದಿಪಡಿಸಲಾಗಿದೆ. ಇದಕ್ಕೆ ತೆರಿಗೆಗಳು ಪ್ರತ್ಯೇಕವಾಗಿವೆ ಸೇರ್ಪಡೆಗೊಳ್ಳಲಿವೆ ಎಂದು ಬಿಬಿಎಂಪಿ ಆದೇಶದಲ್ಲಿ ವಿವರಿಸಲಾಗಿದೆ.

ಇನ್ನು ಮೊದಲಾರ್ಧ ದಿನ (ಬೆಳಗ್ಗೆ 8 ರಿಂದ ಮಧ್ಯಾಹ್ನ 3.00 ಗಂಟೆವರೆಗೆ) ಹಾಗೂ ದ್ವಿತಿಯಾರ್ಧ ದಿನ (ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆವರೆಗೆ) ಬಾಡಿಗೆಗೆ ಎಸಿ ಸಹಿತ 30,000 ಹಾಗೂ ಎಸಿ ರಹಿತ 25,000 ರೂ. ದರ ನಿಗದಿಪಡಿಸಿದ್ದು, ತೆರಿಗೆಗಳು ಪ್ರತ್ಯೇಕವಾಗಿರುತ್ತದೆ. ದರ ಪರಿಷ್ಕರಣೆಗೂ ಮುನ್ನ ಟೌನ್‌ಹಾಲ್‌ ಅನ್ನು ಹೀಗೆ ಅರ್ಧ ದಿನದ ಮಟ್ಟಿಗೆ ಬಾಡಿಗೆ ಕೊಡುವ ಪರಿಪಾಠ ಇರಲಿಲ್ಲ.

ಇನ್ನೂ ವಿಶೇಷವಾಗಿ ರಂಗಭೂಮಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಖ್ಯವಾಗಿ ಕನ್ನಡ ರಂಗಭೂಮಿಯ ಎಲ್ಲಾ ನಾಟಕಗಳ ಪ್ರಸಂಗಗಳಿಗೆ ಹಾಗೂ ವಿಶೇಷ ಅನುಮತಿ ಪಡೆದ ಕಾರ್ಯಕ್ರಮಗಳಿಗೆ ಪರಿಷ್ಕೃತ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲು ಬಿಬಿಎಂಪಿ ನಿರ್ಧರಿಸಿದೆ. ಅಂದರೆ ಟೌನ್ ಹಾಲ್ ನ ಒಟ್ಟು ಬಾಡಿಗೆ ಮೇಲೆ ಅರ್ಧದಷ್ಟು ಮಾತ್ರವೇ ಕಲಾವಿದರು, ಆಯೋಜಕರು ಅಥವಾ ಸಂಬಂಧಿಸಿದವರು ಪಾವತಿಸಬೇಕು ಎಂದು ನಿಯಮ ರೂಪಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇದರಿಂದ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ಮಾಡುವವರಿಗೆ ಉತ್ತೇಜನ ಸಿಕ್ಕಿದಂತಾಗಲಿದೆ.

ಇದನ್ನೂ ಓದಿ : attempt to smuggle gold worth crores : ಒಳ ಉಡುಪು, ಶೂನಲ್ಲಿ ಕೋಟಿ ಮೌಲ್ಯದ ಚಿನ್ನ ಅಕ್ರಮ ಸಾಗಾಟ ಯತ್ನ : ಆರೋಪಿ ಬಂಧನ

ಇದನ್ನೂ ಓದಿ : KMF Milk Price Hike Karnataka : ರೈತರಿಗೆ ಸಿಹಿ ಗ್ರಾಹಕರಿಗೆ ಕಹಿ : ಶೀಘ್ರದಲ್ಲೇ ಹಾಲಿನ ದರ ಏರಿಕೆ ಸುಳಿವುಕೊಟ್ಟ ಕೆಎಂಎಫ್

Good news for actors and artists, Town hall rental rates reduced from September 1

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular