ಭಾನುವಾರ, ಏಪ್ರಿಲ್ 27, 2025
Homebusinessಗೃಹಲಕ್ಷ್ಮೀ ಯೋಜನೆ :  ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ

ಗೃಹಲಕ್ಷ್ಮೀ ಯೋಜನೆ :  ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸರಕಾರ , ಖಾತೆಗೆ 4000ರೂ. ಜಮೆ

- Advertisement -

ಬೆಂಗಳೂರು : ರಾಜ್ಯದ ಕರ್ನಾಟಕ ಸರಕಾರ (Karnataka Government) ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇದೀಗ ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ 2000 ರೂಪಾಯಿ‌ ಹಣವನ್ನು ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ (Bank Account Transfer ) ಜಮೆ ಮಾಡಿದೆ.

ಗೃಹಲಕ್ಷ್ಮೀ ಯೋಜನೆಯ ಮೂಲಕ ರಾಜ್ಯದಲ್ಲಿ ಅಂತ್ಯೋದಯ (Anthyodaya Card), ಬಿಪಿಎಲ್ (BPL Card) ಹಾಗೂ ಎಪಿಎಲ್ ಕಾರ್ಡು (APL Card) ಹೊಂದಿರುವ ಮನೆಯ ಯಜಮಾನಿಯ ಖಾತೆಗಳಿಗೆ ಪ್ರತೀ ತಿಂಗಳು ತಲಾ 2000 ರೂಪಾಯಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದೀಗ 2 ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಆಗಿದೆ.

Gruha lahakshmi Yojana Government has given good news to the housewives depost Rs. 4000 Bank Account
Image credit To Original Source

ಗೃಹಲಕ್ಷ್ಮೀ ಯೋಜನೆ ಈಗಾಗಲೇ 1.10 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿದ 8 ಲಕ್ಷ ಮಹಿಳೆಯರ ಖಾತೆಗಳಿಗೆ ಇನ್ನೂ ಹಣ ಜಮೆ ಆಗಿಲ್ಲ. ತಾಂತ್ರಿಕ ಸಮಸ್ಯೆಯ ಪರಿಹಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ತಮಗಳನ್ನು ಕೈಗೊಂಡಿದೆ. ಸದ್ಯ ಗೃಹಲಕ್ಷ್ಮೀ ಯೋಜನೆಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಗಾಗಿ ರಾಜ್ಯ ಸರ್ಕಾರ 4,600 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ  : ಗೃಹಲಕ್ಷ್ಮೀ ಯೋಜನೆಯ ಹಣ 2000 ರೂ. ಸಿಗದವರಿಗೆ ಗುಡ್‌ನ್ಯೂಸ್‌ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ವಾರ್ಷಿಕ 17,500 ಕೋಟಿ ರೂಪಾಯಿಯನ್ನು ನಿಗದಿ ಪಡಿಸಲಾಗಿದೆ. ಇದೀಗ ಯೋಜನೆಯ ಮೊದಲ ಕಂತಿಗಾಗಿ 4,375 ಕೋಟಿ ಬಿಡುಗಡೆ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

Gruha lahakshmi Yojana Government has given good news to the housewives depost Rs. 4000 Bank Account
Image Credit to Original Source

ಇದೀಗ ಯೋಜನೆಯ ಆಗಸ್ಟ್, ಸೆಪ್ಟೆಂಬರ್ ತಿಂಗಳಿಗೆ ಒಟ್ಟು 4,600 ಕೋಟಿ ರೂಪಾಯಿ ಅನುದಾವನ್ನು ಬಿಡುಗಡೆ ಮಾಡಲಾಗಿದೆ. ಗಣೇಶ ಹಬ್ಬದ ಸಂದರ್ಭ ದಲ್ಲೇ ರಾಜ್ಯ ಸರಕಾರ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ಪ್ರತೀ ತಿಂಗಳ 5 ಅಥವಾ 6ನೇ ತಾರೀಕಿನಂದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.

ಗೃಹಲಕ್ಷ್ಮೀ ಹಣ ಜಮೆ ಆಗದವರಿಗೆ ಸಿಗುತ್ತೆ 4000 ರೂ. :

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಇದುವರೆಗೆ ಹಣ ಜಮೆ ಆಗದೇ ಇರುವವರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ. ಬಹುತೇಕರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಅಗಸ್ಡ್ ತಿಂಗಳ 2000 ರೂಪಾಯಿ ಹಣ ವರ್ಗಾವಣೆ ಆಗಿತ್ತು. ಆದರೆ ಸುಮಾರು 8 ಲಕ್ಷ ಜನರಿಗೆ ಇನ್ನೂ ಹಣ ವರ್ಗಾವಣೆ ಆಗಿರಲಿಲ್ಲ.

ಅರ್ಜಿ ಸಲ್ಲಿಸಿ ಹಣ ವರ್ಗಾವಣೆ ಆಗದ ಬಹುತೇಕ ಫಲಾನುಭವಿಗಳ ಪಡಿತರ ಕಾರ್ಡ್ ನಲ್ಲಿ ಮನೆಯ ಯಜಮಾನರ ಸ್ಥಾನದಲ್ಲಿ ಪುರುಷರಿದ್ದಾರೆ. ಆದರೆ ಮನೆಯ ಯಜಮಾನಿ ಮಹಿಳೆಯರು ಆಗಿದ್ದರೇ ಮಾತ್ರವೇ ಅಂತಹ ಕುಟುಂಬಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಲಿದೆ. ಪಡಿತರ ಖಾತೆಗಳಲ್ಲಿನ ಸಮಸ್ಯೆ ನಿವಾರಣೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ : ಪಡಿತರ ಚೀಟಿ ತಿದ್ದುಪಡಿಗೆ ಇಂದೇ ಕೊನೆಯ ದಿನ : ಮಿಸ್‌ ಮಾಡಿದ್ರೆ ಸಿಗಲ್ಲ ಗೃಹಲಕ್ಷ್ಮೀ ಹಣ

ಸಪ್ಟೆಂಬರ್ 1ರಿಂದ 10 ರ ವರೆಗೆ ಆರಂಭದಲ್ಲಿ ಕಾಲಾವಕಾಶವನ್ನು ನೀಡಲಾಗಿತ್ತು. ನಂತರ ಸೆಪ್ಟೆಂಬರ್ 14ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ  ಬಹುತೇಕರಿಗೆ ರೇಷನ್ ಕಾರ್ಡ್ ಗೆ  ತಿದ್ದುಪಡಿ ಮಾಡಿಸಲು ಕೆಲವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ವಿಸ್ತರಣೆ ಸಾಧ್ಯತೆಯಿದೆ.

Gruha lahakshmi Yojana Government has given good news to the housewives depost Rs. 4000 Bank Account
Image Credit To Original Source

ಇನ್ನು ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಅರ್ಜಿ ನೋಂದಾಯಿಸಿ ಹಣ ವರ್ಗಾವಣೆ ಆಗದೇ ಇರುವವರು ಚಿಂತೆ ಮಾಡುವ ಅಗತ್ಯವಿಲ್ಲ. ರಾಜ್ಯ ಸರಕಾರ ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂಧಿಗಳನ್ನು ಮನೆ ಮನೆಗೆ ಕಳುಹಿಸಿ ಸಮಸ್ಯೆ ಪರಿಹರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಅಲ್ಲದೇ ಈಗಾಗಲೇ ವರ್ಗಾವಣೆ ಆಗದವರಿಗೆ ಒಟ್ಟಿಗೆ 4000 ರೂ. ಹಣ ಒಟ್ಟಿಗೆ ವರ್ಗಾವಣೆ ಆಗಲಿದೆ.

Gruha lahakshmi Yojana Government has given good news to the housewives depost Rs. 4000 Bank Account

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular