ಮೂರು ತಿಂಗಳು ಕಳೆದರೂ ಗೃಹಲಕ್ಷ್ಮೀ ಹಣ ಬರುತ್ತಿಲ್ಲವೇ..? ನೀವು ಮಾಡಬೇಕಾಗಿರೋದು ಇಷ್ಟು

Gruha Lakshmi Scheme 3rd installment : ಪ್ರತಿ ತಿಂಗಳು 20ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮೀ ಹಣವನ್ನು ಜಮೆ ಮಾಡಲಾಗುತ್ತಿದೆ. ಈ ತಿಂಗಳ ಗೃಹಲಕ್ಷ್ಮೀ ಹಣಕ್ಕಾಗಿ ಮೂರನೇ ಹಂತಿನ ಹಣ ಕೂಡ ಬಿಡುಗಡೆಯಾಗಿದೆ

Gruha Lakshmi Scheme 3rd installment: ಕಾಂಗ್ರೆಸ್​ ಸರ್ಕಾರ ಪ್ರತಿಯೊಬ್ಬ ಮನೆಯೊಡತಿಗೆ ಮಾಸಿಕವಾಗಿ 2000 ರೂಪಾಯಿಗಳನ್ನು ನೀಡೋದಾಗಿ ಘೋಷಣೆ ಮಾಡಿತ್ತು. ನುಡಿದಂತೆ ನಡೆದು ಕೊಂಡ ಕರ್ನಾಟಕ ಸರಕಾರ  ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿರೋದು ಹಾಗೂ ಅನೇಕರು ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಲಾಭ ವನ್ನು ಪಡೆಯುತ್ತಿದ್ದಾರೆ.

Gruha Lakshmi Scheme 3rd installment has been relesed  Karnataka Government
Image Credit to Original Source

ಪ್ರತಿ ತಿಂಗಳು 20ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮೀ ಹಣವನ್ನು ಜಮೆ ಮಾಡಲಾಗುತ್ತಿದೆ. ಈ ತಿಂಗಳ ಗೃಹಲಕ್ಷ್ಮೀ ಹಣಕ್ಕಾಗಿ ಮೂರನೇ ಹಂತಿನ ಹಣ ಕೂಡ ಬಿಡುಗಡೆಯಾಗಿದೆ. ಆದರೆ ರಾಜ್ಯದಲ್ಲಿ ಇನ್ನೂ ಕೆಲವು ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಸಹ ಈವರೆಗೆ ಅವರಿಗೆ ಒಂದು ಕಂತಿನ ಹಣ ಬಿಡುಗಡೆಯಾಗಿಲ್ಲ.

ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ರಾಜ್ಯದ 99.53 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಈವರೆಗೆ ಗೃಹಲಕ್ಷ್ಮೀ ಯೋಜನಗಾಗಿ 11,200 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಕಾಂಗ್ರೆಸ್​ ಸರ್ಕಾರ ಕೂಡ ಆರು ತಿಂಗಳ ಅಧಿಕಾರಾವಧಿ ಪೂರ್ಣಗೊಳಿಸಿದೆ.

ಇದನ್ನೂ ಓದಿ :  ಗೃಹಲಕ್ಷ್ಮೀ ಹಣ ಬರ್ತಿಲ್ಲ ಯಾಕೆ ? ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಅಸಲಿ ಕಾರಣ

ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿರುವ ಅನೇಕರು ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಇನ್ನೂ ಕೆಲವರು ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ತಲೆಕೆಡಿಸಿಕೊಳ್ತಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಇನ್ನೂ ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂದು ನಿಮಗೆ ಎನಿಸುತ್ತಿದ್ದರೆ ಈ ಬಗ್ಗೆ ನೀವು ಮನೆಯಲ್ಲಿಯೆ ಕುಳಿತು ನಿಮ್ಮ ಸ್ಮಾರ್ಟ್​ ಫೋನ್​ನಲ್ಲಿ ಪರಿಶೀಲನೆ ಮಾಡಬಹುದಾಗಿದೆ.

ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ. ನಿಮ್ಮ ಆಂಡ್ರಾಯ್ಡ್​ ಫೋನ್​ನಲ್ಲಿ ಗೂಗಲ್​ ಪ್ಲೇಸ್ಟೋರ್​ಗೆ ಹೋಗಿ ಡಿಬಿಟಿ ಕರ್ನಾಟಕ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಇದಾದ ಬಳಿಕ ನೀವು ಅಲ್ಲಿ ಕೇಳಲಾಗುವ ಸೂಕ್ತ ಮಾಹಿತಿಯನ್ನು ನೀಡಿ ಡಿಬಿಟಿ ಕರ್ನಾಟಕ ಆ್ಯಪ್​ಗೆ ಲಾಗಿನ್​ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ

ನಿಮ್ಮ ಆಧಾರ್​ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ನಿಮ್ಮ ಗೃಹಲಕ್ಷ್ಮೀ ಅರ್ಜಿಯ ಸ್ಟೇಟಸ್ ಹೇಗಿದೆ ಅನ್ನೋದನ್ನು ತಿಳಿದುಕೊಳ್ಳ ಬಹುದಾಗಿದೆ. ನೀವು ಆಧಾರ್​ ಕಾರ್ಡ್​ ಸಂಖ್ಯೆಯನ್ನು ಆಪ್​ನಲ್ಲಿ ಡೌನ್​ಲೋಡ್​ ಮಾಡುತ್ತಿದ್ದಂತೆಯೇ ನಿಮಗೆ ಒಟಿಪಿ ಬರುತ್ತದೆ. ಇಲ್ಲಿ ನೀವು ಒಟಿಪಿ ಯನ್ನು ನಮೂದಿಸಬೇಕು. ಅದಾದ ಬಳಿಕ ನಿಮಗೆ ನಿಮ್ಮ ಗೃಹಲಕ್ಷ್ಮೀ ಖಾತೆಯ ಹಣ ವರ್ಗಾವಣೆ ಆಗಿದ್ಯೋ ಇಲ್ಲವೋ ಎಂಬುದು ತಿಳಿಯುತ್ತದೆ.

ಇದನ್ನು ಹೊರತುಪಡಿಸಿ ನೀವು ನಿಮ್ಮ ವ್ಯಾಪ್ತಿಯ ಸಿಡಿಪಿಓ ಕಚೇರಿಗೆ ಭೇಟಿ ನೀಡುವ ಮೂಲಕ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಅರ್ಜಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆಯಾ ಸಿಡಿಪಿಓ ಕಚೇರಿಗಳಿಗೆ ಪ್ರತ್ಯೇಕ ಸಹಾಯವಾಣಿ ಸಂಖ್ಯೆ ಕೂಡ ಇರಲಿದ್ದು ಆ ನಂಬರ್​ ಕಲೆಕ್ಟ್​ ಮಾಡಿಕೊಂಡು ಕರೆ ಮಾಡಿ ನಿಮ್ಮ ರೇಷನ್​ ಕಾರ್ಡ್ ಸಂಖ್ಯೆಯನ್ನು ನೀಡಬೇಕು.

Gruha Lakshmi Scheme 3rd installment has been relesed Karnataka Government
Image Credit to Original Source

ಇದನ್ನೂ ಓದಿ : Shakti Scheme : ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ : ಮಹಿಳೆಯರಿಗೆ ಸರಕಾರದ ಗುಡ್‌ನ್ಯೂಸ್‌ : ಶಕ್ತಿ ಯೋಜನೆಗೆ ಹೊಸ ರೂಲ್ಸ್‌ ಜಾರಿ

ಆಗ ಅಲ್ಲಿನ ಸಿಬ್ಬಂದಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಅರ್ಜಿಯಲ್ಲಿ ಯಾವುದೇ ದೋಷವಿದ್ದರೂ ಮಾಹಿತಿ ನೀಡುತ್ತಾರೆ. ಹೀಗಾಗಿ ನೀವು ಈ ಮೂರು ಮಾರ್ಗಗಳ ಮೂಲಕ ನಿಮ್ಮ ಗೃಹಲಕ್ಷ್ಮೀ ಅರ್ಜಿಯ ಸ್ಟೇಟಸ್​ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Gruha Lakshmi Scheme 3rd installment has been relesed Karnataka Government

Comments are closed.