ಮದುವೆ ಮನೆಯಲ್ಲಿ ರಸಗುಲ್ಲಾ ಕಡಿಮೆಯಾಯ್ತು ಅಂತಾ ಫೈಟಿಂಗ್​ : ಆರು ಮಂದಿ ಆಸ್ಪತ್ರೆಗೆ ದಾಖಲು

rasgulla fight: ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ರಸಗುಲ್ಲಾ ಕಡಿಮೆಯಾದ ಕಾರಣ ಗಲಾಟೆ ನಡೆದಿದ್ದು ಈ ಗಲಾಟೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

rasgulla fight : ಮದುವೆ ಮನೆ ಅಂದಮೇಲೆ ಅಲ್ಲಿ ಸಿಹಿತಿಂಡಿಗಳಿಗೆ ಬರಗಾಲ ಇರೋದಿಲ್ಲ. ಆದರೂ ಸಹ ಮದುವೆ ಮನೆಗಳಲ್ಲಿ ಚಿಕ್ಕಪುಟ್ಟ ವಿಚಾರಕ್ಕೆ ಕಿರಿಕ್​ ಆಗೋದು ಜಾಸ್ತಿ.ಇದೇ ಕಾರಣಕ್ಕೆ ಹಿರಿಯರು ಮನೆ ಕಟ್ಟಿ ನೋಡು. ಮದುವೆ ಮಾಡಿ ನೋಡು ಅಂತಾ ಹೇಳ್ತಾರೆ. ಕ್ಷುಲ್ಲಕ ಕಾರಣಗಳಿಗೆ ಮದುವೆ (wedding rasgulla fighting) ಮಂಟಪದಲ್ಲಿಯೇ ಮದುವೆ ನಿಂತು ಹೋದ ಅನೇಕ ಪ್ರಕರಣಗಳನ್ನು ನಾವು ಕೇಳಿದ್ದೇವೆ.

ಮದುವೆ ಮನೆಗಳಲ್ಲಿ ಯಾವ ವಿಚಾರಕ್ಕೆ ಕಿರಿಕ್​ ಆರಂಭವಾಗುತ್ತೆ ಅನ್ನೊದನ್ನ ಊಹಿಸೋಕೂ ಸಾಧ್ಯವಿಲ್ಲ. ಮದುವೆಯ ಮನೆಯ ಸಿಹಿ ತಿಂಡಿಗಳಿಗೂ ಮದುವೆ ಮನೆಯಲ್ಲಿ ಉಂಟಅಗೋ ಕಿರಿಕ್​ಗಳಿಗೂ ಏನು ಲಿಂಕ್​ ಅಂತಾ ನೀವು ಯೋಚನೆ ಮಾಡ್ತಿರಬಹುದು . ನಾವು ಈ ವಿಚಾರ ಮಾತನಾಡೋದ್ರ ಹಿಂದೆ ಕಾರಣ ಕೂಡ ಇದೆ.

Uttar pradesh 6 injured In figth over Shortage of rasagullas at Wedding Functions in agra
Image Credit to Original Source

ಉತ್ತರ ಪ್ರದೇಶದಲ್ಲಿ ಸೋಮವಾರ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ರಸಗುಲ್ಲಾ ಕಡಿಮೆಯಾದ (Shortage of rasagullas ) ಕಾರಣ ಗಲಾಟೆ ನಡೆದಿದ್ದು ಈ ಗಲಾಟೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಮಧ್ಯರಾತ್ರಿಯಿಂದ ಉತ್ತರ ಪ್ರದೇಶದ ಶಂಸಾಬಾದ್​ ಎಂಬಲ್ಲಿ ಮದುವೆ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಈ ವೇಳೆ ಊಟದ ಸಂದರ್ಭದಲ್ಲಿ ರಸಗುಲ್ಲಾ ಕಡಿಮೆಯಾಗಿರೋದು ಗಮನಕ್ಕೆ ಬಂದಿದೆ.

ಇದನ್ನೂ ಓದಿ : 11.5 ಕೋಟಿ ಪ್ಯಾನ್ ಕಾರ್ಡ್ ರದ್ದು : ನಿಮ್ಮ ಪ್ಯಾನ್ ಕಾರ್ಡ್ ಕೂಡ ರದ್ದಾಗಿದೆಯಾ ? ಯಾವುದಕ್ಕೂ ಒಮ್ಮೆ ಪರಿಶೀಲಿಸಿ

ಇದೇ ವಿಚಾರವಾಗಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದವರ ನಡುವೆ ಗಲಾಟೆ ಏರ್ಪಟ್ಟಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಈ ರಸಗುಲ್ಲಾ ಗಲಾಟೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶಂಸಾಬಾದ್​ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಆಫಿಸರ್​ ಎಸ್​ಹೆಚ್​ಒ ಅನಿಲ್​ ಶರ್ಮಾ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಶಂಸಾಬಾದ್​ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಆಫೀಸರ್​ ಅನಿಲ್​ ಶರ್ಮಾ, ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಮಾಹಿತಿ ಸೋರಿಕೆ : ಡಾರ್ಕ್‌ವೆಬ್‌ನಲ್ಲಿ 81 ಕೋಟಿ ಭಾರತೀಯರ ಮಾಹಿತಿ ಮಾರಾಟ

ಈ ಪ್ರಕರಣ ಸಂಬಂಧ ನಾವು ಕೇಸು ದಾಖಲಿಸಿಕೊಂಡಿದ್ದೇವೆ. ಆಸ್ಪತ್ರೆಯಲ್ಲಿ ದಾಖಲಾಗಿರುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ . ಭಾನುವಾರಂದು ಭ್ರಜಬನ್​ ಕುಶ್ವಾಹಾ ಎಂಬವರ ನಿವಾಸದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ರಸಗುಲ್ಲಾ ಕಡಿಮೆಯಾಗಿರುವ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು ಎನ್ನಲಾಗಿದೆ.

Uttar pradesh 6 injured In figth over Shortage of rasagullas at Wedding Functions in agra
Image Credit to Original Source

ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು ಕೈ ಕೈ ಮಿಲಾಯಿಸುವ ಹಂತಕ್ಕೆ ಈ ಗಲಾಟೆ ಬಂದು ತಲುಪಿದೆ. ಈ ರಸಗುಲ್ಲಾ ಗಲಾಟೆಯಲ್ಲಿ ಭಘವಾನ್​ ದೇವಿ, ಯೋಗೇಶ್​, ಮನೋಜ್​, ಕೈಲಾಶ್​ , ಧರ್ಮೇಂದ್ರ ಹಾಗೂ ಪವನ್​ ಎಂಬವರು ಗಾಯಗೊಂಡಿದ್ದಾರೆ ಎಂದು ಸ್ಟೇಷನ್​ ಹೌಸ್​ ಆಫೀಸರ್​​ ಅನಿಲ್​ ಶರ್ಮಾ ಮಾಹಿತಿ ನೀಡಿದ್ದಾರೆ .

ಇದನ್ನೂ ಓದಿ : ಹೆರಿಗೆಗೆಂದು ತವರಿಗೆ ಬಂದಿದ್ದ ಪತ್ನಿಗೆ ವಿದೇಶದಲ್ಲೇ ಕುಳಿತು ತ್ರಿವಳಿ ತಲಾಕ್‌ ನೀಡಿದ ಪತಿ

ಕಳೆದ ವರ್ಷ ಅಕ್ಟೋಬರ್​ ತಿಂಗಳಿನಲ್ಲಿ ಎತ್ಮಾದ್​ಪುರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಸ್ವೀಟು ಕಡಿಮೆಯಾದ ವಿಚಾರಕ್ಕೆ ನಡೆದ ಗಲಾಟೆಯೊಂದರಲ್ಲಿ ಓರ್ವ ವ್ಯಕ್ತಿಯನ್ನು ಕೊಲೆಯೇ ಮಾಡಲಾಗಿತ್ತು. ಉತ್ತರ ಪ್ರದೇಶದ ರಸಗುಲ್ಲಾ ಗಲಾಟೆ ಇದೀಗ ಈ ಘಟನೆಯನ್ನು ಮೆಲುಕು ಹಾಕುವಂತೆ ಮಾಡಿದೆ.

Uttar pradesh 6 injured In figth over Shortage of rasagullas at Wedding Functions in agra

Comments are closed.