ಗೃಹಲಕ್ಷ್ಮೀ ಯೋಜನೆಯಡಿ ಸಿಗಲಿದೆ 4000 ರೂ.: ಗೃಹಿಣಿಯರಿಗೆ ದಸರಾ ಕೊಡುಗೆ ಘೋಷಿಸಿದ ರಾಜ್ಯ ಸರಕಾರ

ರಾಜ್ಯ ಸರಕಾರ ಈಗಾಗಲೇ ಅನ್ನಭಾಗ್ಯ ಯೋಜನೆಯ ಮೂಲಕ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಗೃಹಜ್ಯೋತಿ ಯೋಜನೆಯ ಮೂಲಕ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುತ್ತಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ಕುಟುಂಬದ ಗೃಹಿಣಿಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದೆ. ಇದೀಗ ದಸರಾ ಹೊತ್ತಲ್ಲೇ ಗೃಹಲಕ್ಷ್ಮೀ ಯೋಜನೆಯ ಮೂಲಕ 4000 ರೂಪಾಯಿ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಕರ್ನಾಟಕದಲ್ಲಿ (Karnataka) ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಪ್ರತೀ ಕುಟುಂಬದ ಅರ್ಹ ಗೃಹಿಣಿಯರಿಗೆ ಈ ಯೋಜನೆ ಲಾಭ ದೊರೆಯುತ್ತಿದೆ. ಪ್ರತೀ ತಿಂಗಳು 2000 ರೂಪಾಯಿ ಜಮೆ ಆಗುತ್ತಿದ್ದು, ಇದೀಗ ದಸರಾ ಹೊತ್ತಲ್ಲೇ ಗೃಹಲಕ್ಷ್ಮೀ ಯೋಜನೆಯ ಮೂಲಕ 4000 ರೂಪಾಯಿ ಬ್ಯಾಂಕ್‌ ಖಾತೆಗೆ (Bank Account) ಜಮೆ ಆಗಲಿದೆ.

ರಾಜ್ಯ ಸರಕಾರ (State Government) ಈಗಾಗಲೇ ಅನ್ನಭಾಗ್ಯ (Anna Bhagya) ಯೋಜನೆಯ ಮೂಲಕ ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಗೃಹಜ್ಯೋತಿ (Gruha Jyoti Scheme) ಯೋಜನೆಯ ಮೂಲಕ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುತ್ತಿದೆ. ಇದೀಗ ಗೃಹಲಕ್ಷ್ಮೀ ಯೋಜನೆಯ ಮೂಲಕ ಪ್ರತೀ ಕುಟುಂಬದ ಗೃಹಿಣಿಗೆ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದೆ.

Gruha Lakshmi Scheme Dussehra Big Gift Government Will Deposit Rs 4000
Image Credit to Original Source

ಗೃಹಲಕ್ಷ್ಮೀ ಯೋಜನೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮ್ಮ ಸರಕಾರವು ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಗೃಹಿಣಿಯರು ಹೊತ್ತಿದ್ದಾರೆ. ಗೃಹಿಣಿಯರು ಎದುರಿಸುತ್ತಿರುವ ದೈನಂದಿನ ಸವಾಲುಗಳಿಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಪ್ರತೀ ಕುಟುಂಬ ಮಾಲೀಕರಿಗೆ ಮಾಸಿಕ 2000 ರೂ.ಸಹಾಯಧನ ನೀಡಲಾಗುತ್ತಿದೆ ಎಂದಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 1.08 ಕೋಟಿ ಮಹಿಳೆಯರಿಗೆ ಎರಡು ತಿಂಗಳ ಹಣವನ್ನು ಜಮೆ ಮಾಡಲಾಗಿದೆ. ಸರಕಾರ ಈ ಉದ್ದೇಶಕ್ಕಾಗಿ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 4,449 ಕೋಟಿ ರೂಪಾಯಿಗಳನ್ನು ಅನುದಾನ ನೀಡಿದೆ. ಮಹಿಲೆಯ ಸಬಲೀಕರಣದ ಉದ್ದೇಶಿದಿಂದ ನಮ್ಮ ಸರಕಾರವು ಹಣವನ್ನು ಜಮೆ ಮಾಡುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ಲಕ್ಷಾಂತರ ಮಹಿಳೆಯರ ಖಾತೆಗೆ ಈಗಾಗಲೇ ಸಪ್ಟೆಂಬರ್‌ ತಿಂಗಳ ಹಣ ಜಮೆ ಆಗಿದೆ. ಆದರೆ ಗೃಹಲಕ್ಷ್ಮೀ ಯೋಜನೆಗೆ ಇನ್ನೂ ಹಣ ಜಮೆ ಆಗದೇ ಇರುವವರಿಗೆ ಇದೀಗ ರಾಜ್ಯ ಸರಕಾರ ಒಟ್ಟಿಗೆ 4000 ರೂಪಾಯಿಗಳನ್ನು ಜಮೆ ಮಾಡುವುದಾಗಿ ಘೋಷಣೆಯನ್ನು ಮಾಡಿದೆ.

Gruha Lakshmi Scheme Dussehra Big Gift Government Will Deposit Rs 4000
Image Credit to Original Source

ದಸರಾ ಹಬ್ಬದ ಹೊತ್ತಲ್ಲೇ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ದೊಡ್ಡ ಉಡುಗೊರೆಯನ್ನು ರಾಜ್ಯ ಸರಕಾರ ನೀಡಿದ್ದು, ಈ ಯೋಜನೆಯ ಅಡಿಯಲ್ಲಿ 4000 ರೂ.ಗಳನ್ನು ನೀಡುವುದಾಗಿ ಘೋಷಣೆಯನ್ನು ಮಾಡಿದೆ. ಆದರೆ ಇದುವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಗದೇ ಇರುವವರಿಗೆ ಮಾತ್ರವೇ ಈ ಲಾಭ ದೊರೆಯಲಿದೆ.

ಕಾಂಗ್ರೆಸ್‌ ಸರಕಾರ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಉಳಿದಂತೆ ಯುವನಿಧಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ಘೋಷಣೆಯನ್ನು ಮಾಡಿದೆ. ಯುವ ನಿಧಿ ಯೋಜನೆಯು ಜನವರಿ 2024 ರಿಂದ ಪ್ರಾರಂಭವಾಗಲಿದೆ.

ಈ ಯೋಜನೆಯ ಮೂಲಕ ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ಹಾಗೂ ಪದವಿ ಶಿಕ್ಷಣ ಪೂರೈಸಿದ ನಿರುದ್ಯೋಗಿ ಯುವಕರಿಗೆ 3000 ರೂಪಾಯಿ ಹಣವನ್ನು ರಾಜ್ಯ ಸರಕಾರ ಪ್ರತಿ ತಿಂಗಳು ಜಮೆ ಮಾಡಲಿದೆ. ಯುವನಿಧಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈಗಾಗಲೇ ಸರಕಾರ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.

ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲವೇ ? ಇಲ್ಲಿದೆ ಅಸಲಿ ಕಾರಣ

ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿದವರ ಪೈಕಿ ರಾಜ್ಯದಲ್ಲಿ 9,44,155 ಮಂದಿಗೆ ಇನ್ನೂ ಹಣ ಬ್ಯಾಂಕ್‌ ಖಾತೆಗೆ ಜಮೆ ಆಗಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಹಣ ಜಮೆ ಆಗಿಲ್ಲದ ಕುರಿತು ಕಾರಣವನ್ನು ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರ ಪೈಕಿ 3082 ಅರ್ಜಿದಾರರು ಸಾವನ್ನಪ್ಪಿದ್ದಾರೆ. 1,59,356 ಅರ್ಜಿದಾರರ ಡೆಮೊ ಪರಿಶೀಲನೆ ವಿಫಲವಾಗಿದೆ. ಫಲಾನುಭವಿಯ ಆಧಾರ್ ಮತ್ತು ಬ್ಯಾಂಕ್ ಖಾತೆ ಹೆಸರು ವ್ಯತ್ಯಾಸದಿಂದ ಹಣ ಜಮಾ ಆಗಿಲ್ಲ. ಈ ಖಾತೆಗಳ ತಿದ್ದುಪಡಿಯನ್ನು ಮಾಡಲಾಗಿದೆ. 5,96,268 ಫಲಾನುಭವಿಗಳ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಎಂದಿದ್ದಾರೆ.

Comments are closed.