ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ದವೂ ಗೆಲುವಿನ ಓಟ ಮುಂದುವರಿಸುತ್ತಾ ಭಾರತ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್

‌‌ವಿಶ್ವಕಪ್‌ 2023 ರಲ್ಲಿ (World Cup 2023)  ಸತತ ಮೂರು ಗೆಲುವಿನಿಂದ ಬೀಗುತ್ತಿರುವ ಭಾರತ ತಂಡಕ್ಕೆ ಇಂದು ಬಾಂಗ್ಲಾದೇಶ ತಂಡ (India Vs Bangladesh) ಸವಾಲು ಒಡ್ಡಲಿದೆ

‌‌ವಿಶ್ವಕಪ್‌ 2023 ರಲ್ಲಿ (World Cup 2023)  ಸತತ ಮೂರು ಗೆಲುವಿನಿಂದ ಬೀಗುತ್ತಿರುವ ಭಾರತ ತಂಡಕ್ಕೆ ಇಂದು ಬಾಂಗ್ಲಾದೇಶ ತಂಡ (India Vs Bangladesh) ಸವಾಲು ಒಡ್ಡಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂನಲ್ಲಿ (Maharashtra Cricket Association Stadium, Pune ) ನಡೆಯಲಿರುವ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ ರೋಹಿತ್‌ ಪಡೆ. ಆದರೆ ಶರ್ದೂಲ್‌ ಠಾಕೂರ್‌ ಬದಲು ಮೊಹಮ್ಮದ್‌ ಸೆಮಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ರೋಹಿತ್‌ ಶರ್ಮಾ ನೇತೃತ್ವದ ಭಾರತ ತಂಡ ಈಗಾಗಲೇ ಸತತ ಮೂರು ಗೆಲುವುಗಳನ್ನು ಕಂಡಿದ್ದು, ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಬಾಂಗ್ಲಾದೇಶದ ವಿರುದ್ದವೂ ತಮ್ಮ ಗೆಲುವಿನ ಅಭಿಯಾನವನ್ನು ಮುಂದುವರಿಸಲು ಭಾರತ ಸಜ್ಜಾಗಿದೆ. ಟೀಂ ಇಂಡಿಯಾಕ್ಕೆ ಶುಭಮನ್‌ ಗಿಲ್‌ ತಂಡ ಸೇರಿಕೊಂಡಿರುವುದು ಆನೆ ಬಲ ಬಂದಂತಾಗಿದೆ.

India vs bangladesh world cup 2023 india playing xi what says pune pitch report
Image credit to original source

ಪುಣೆಯ ಮೈದಾನದ ಪಿಚ್‌ ಪುಣೆಯ ಮೈದಾನ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ. ಮೈದಾನದ ಬೌಂಡರಿ ಗೆರೆಯ ಗಾತ್ರ ಚಿಕ್ಕದಾಗಿದೆ. ಮೊದಲು ಬ್ಯಾಟಿಂಗ್‌ ನಡೆಸುವ ತಂಡವು ಸರಾಸರಿ 300 ಕ್ಕೂ ಅಧಿಕ ರನ್‌ಗಳನ್ನು ಬಾರಿಸುವ ನಿರೀಕ್ಷೆಯಿದೆ. ಅಲ್ಲದೇ ಮೊದಲು ಬ್ಯಾಟಿಂಗ್‌ ತಂಡ ಗೆಲ್ಲುವ ಸಾಧ್ಯತೆ ಅಧಿಕ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆ ಎಡವಟ್ಟು : ತಪ್ಪಾದ ಜರ್ಸಿ ತೊಟ್ಟು ಮೈದಾನಕ್ಕೆ ಬಂದ ವಿರಾಟ್‌ ಕೊಹ್ಲಿ

ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 2017ರಲ್ಲಿ 356/2 ದಾಖಲಿಸಿರುವ ಅತ್ಯಧಿಕ ಸ್ಕೋರ್‌ ಆಗಿದೆ. ಅಲ್ಲದೇ 2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ದಾಖಲಿಸಿದ 232ರನ್‌ ಅತ್ಯಂತ ಕಡಿಮೆ ಸ್ಕೋರ್‌ ಆಗಿದೆ. ಆದರೆ ಈ ಮೈದಾನದಲ್ಲಿ ಎರಡು ವರ್ಷಗಳ ಬಳಿಕ ಈ ಮೈದಾನದಲ್ಲಿ ಪಂದ್ಯಾಟ ನಡೆಯುತ್ತಿದೆ.

India vs bangladesh world cup 2023 india playing xi what says pune pitch report
Image credit to original source

ಈ ಹಿಂದೆ ಸ್ಪಿನ್‌ ಹಾಗೂ ಬ್ಯಾಟಿಂಗ್‌ಗೆ ಪಿಚ್‌ ಹೆಚ್ಚು ನೆರವಾಗುತ್ತಿತ್ತು. ಇದರಿಂದಾಗಿ ಹೆಚ್ಚು ಸ್ಕೋರ್‌ ಗಳಿಸಬಹುದಾಗಿತ್ತು. ಆದರೆ ಇದೀಗ ಪಿಚ್‌ ಯಾವ ರೀತಿಯಲ್ಲಿ ಸಹಕರಿಸುತ್ತೆ ಅನ್ನೋದು ನಿಗೂಢವಾಗಿದೆ. ದೊಡ್ಡ ಮೊತ್ತವನ್ನು ಕಲೆ ಹಾಕಲು ಸಹಕಾರಿಯಾಗಿರುವುದರಿಂದ ಎರಡನೇ ಬ್ಯಾಟಿಂಗ್‌ ಮಾಡುವ ತಂಡ ಒತ್ತಡವನ್ನು ಎದುರಿಸಲಿದೆ.

ಟೀಂ ಇಂಡಿಯಾದ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ಶಾರ್ದೂಲ್‌ ಠಾಕೂರ್‌ ಬದಲು ಮೊಹಮ್ಮದ್‌ ಸೆಮಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಆದರೆ ಪಿಚ್‌ ಸ್ಪಿನ್ನರ್‌ ಗಳಿಗೆ ಹೆಚ್ಚು ನೆರವು ನೀಡಲಿರುವುದರಿಂದ ಆರ್.ಅಶ್ವಿನ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ. ಒಂದೊಮ್ಮೆ ಅಶ್ವಿನ್‌ ಕಣಕ್ಕೆ ಇಳಿದ್ರೆ ಶಾರ್ದೂಲ್‌ ಠಾಕೂರ್‌ ಹಾಗೂ ಮೊಹಮ್ಮದ್‌ ಸೆಮಿ ಔಟ್‌ ಆಗಲಿದ್ದಾರೆ.

India vs bangladesh world cup 2023 india playing xi what says pune pitch report
Image credit to original source

ಭಾರತ ತಂಡ ವಿಶ್ವಕಪ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿಯೂ ಗೆಲುವು ಸಾಧಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಸದ್ಯ ನಾಲ್ಕು ಪಂದ್ಯಗಳನ್ನು ಗೆದ್ದಿರುವ ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ಬಾಂಗ್ಲಾದೇಶ ತಂಡ ಇದುವರೆಗೆ ವಿಶ್ವಕಪ್‌ನಲ್ಲಿ ಒಟ್ಟು 3 ಪಂದ್ಯಗಳನ್ನು ಆಡಿದೆ. ಈ ಪೈಕಿ 2 ಪಂದ್ಯಗಳಲಿ ಸೋಲನ್ನು ಕಂಡಿದ್ದು, ಒಂದು ಪಂದ್ಯವನ್ನು ಜಯಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಸದ್ಯ ಶಕೀಬ್‌ ಉಲ್ ಹಸನ್‌ ನೇತೃತ್ವದ ಬಾಂಗ್ಲದೇಶದ ತಂಡ 6ನೇ ಸ್ಥಾನದಲ್ಲಿದೆ.

ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಆರಂಭಿಕರಾಗಿ ಭಾರತ ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ. ಇದರಿಂದಾಗಿ ಇಶಾನ್‌ ಕಿಶನ್‌ ಬೇಂಜ್‌ ಕಾಯಬೇಕಾಗಿದೆ. ಒಂದನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌ ಬ್ಯಾಟಿಂಗ್‌ ನಡೆಸಲಿದ್ದಾರೆ.

India vs bangladesh world cup 2023 india playing xi what says pune pitch report
Image credit : bangladesh cricket board

ರವೀಂದ್ರ ಜಡೇಜಾ ಹಾಗೂ ಹಾರ್ದಿಕ್‌ ಪಾಂಡ್ಯ ಆಲ್‌ರೌಂಡರ್‌ ಸ್ಥಾನವನ್ನು ತುಂಬಲಿದ್ದು, ಮೊಹಮದ್‌ ಸಿರಾಜ್‌ ಹಾಗೂ ಜಸ್ಪ್ರಿತ್‌ ಬೂಮ್ರಾ ಕಣಕ್ಕೆ ಇಳಿಯುವುದು ಖಚಿತ. ಇನ್ನು ಸ್ಪಿನ್ನರ್‌ ಕೋಟಾದಲ್ಲಿ ಕುಲದೀಪ್‌ ಯಾದವ್‌ ಹಾಗೂ ಆರ್‌.ಅಶ್ವಿನ್‌ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಭಾರತ ತಂಡ ಸಂಭಾವ್ಯ XI :
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್) ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ ಮೊಹಮ್ಮದ್ ಶಮಿ/ ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ : ರೋಹಿತ್‌ ಶರ್ಮಾ ಭರ್ಜರಿ ಶತಕ : ಒಂದೇ ಪಂದ್ಯದಲ್ಲಿ 2 ವಿಶ್ವದಾಖಲೆ ಬರೆದ ಟೀಂ ಇಂಡಿಯಾ ನಾಯಕ

ಬಾಂಗ್ಲಾದೇಶ ತಂಡ ಸಂಭಾವ್ಯ XI:
ಲಿಟ್ಟನ್ ದಾಸ್, ತಂಝಿದ್ ತಮೀಮ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್ (ನಾಯಕ), ಮುಶಿಫಿಕುರ್ ರಹೀಮ್ (ವಿಕೆಟ್‌ ಕೀಪರ್), ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ

ವಿಶ್ವಕಪ್‌ 2023 ಭಾರತ ಹಾಗೂ ಬಾಂಗ್ಲಾದೇಶ ತಂಡಗಳು:

ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ , ರವಿಚಂದ್ರನ್ ಅಶ್ವಿನ್‌

ಬಾಂಗ್ಲಾದೇಶ ತಂಡ:
ಲಿಟ್ಟನ್ ದಾಸ್, ತಂಝಿದ್ ಹಸನ್, ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್(ನಾಯಕ), ಮುಶ್ಫಿಕರ್ ರಹೀಮ್(ವಿಕೆಟ್‌ ಕೀಪರ್), ತೌಹಿದ್ ಹೃದಯೋಯ್, ಮಹ್ಮುದುಲ್ಲಾ, ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್, ಶೊರಿಫುಲ್ ಹಸನ್ ಇಸ್ಲಾಂ, ತಂಝೀಮ್ ಹಸನ್ , ಮಹೇದಿ ಹಸನ್, ನಸುಮ್ ಅಹಮದ್

india vs Bangladesh World Cup 2023 india Playing XI What says Pune Pitch Report

Comments are closed.