Gruha Lakshmi Scheme : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್‌ನ್ಯೂಸ್‌

ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಪಡೆಯಲು ಪ್ರತೀ ಯಜಮಾನಿಯರು ತಮ್ಮ ಖಾತೆಯನ್ನು ಇ - ಕೆವೈಸಿ ಅಪ್ಡೇಟ್ಸ್‌ ಮಾಡಲು ಸೂಚಿಸಲಾಗಿದೆ. ಪಡಿತರ ಚೀಟಿಯನ್ನು ಹೊಂದಿರುವ ಮನೆಯ ಯಜಮಾನಿಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಕರ್ನಾಟಕ ರಾಜ್ಯದ ಗೃಹಿಣಿಯರಿಗೆ ಈಗಾಗಲೇ ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗಳಿಗೆ ಜಮೆ ಆಗಿದೆ. ಆದರೆ ಎರಡನೇ ಕಂತಿನ ಹಣ ಬಹುತೇಕ ಯಜಮಾನಿಯರಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟಿದೆ.

ರಾಜ್ಯದ ಕಾಂಗ್ರೆಸ್‌ ಸರಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಪ್ರತೀ ತಿಂಗಳು ಕುಟುಂಬದ ಯಜಮಾನಿಯ ಖಾತೆಗೆ 2000 ರೂಪಾಯಿ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಬಹುತೇಕ ಮಹಿಳೆಯರಿಗೆ ಎರಡು ತಿಂಗಳ ಗೃಹಲಕ್ಷ್ಮೀ ಹಣವನ್ನು ಅವರ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ.

Gruha Lakshmi Scheme Karnataka Governament Good news for Gruha Lakshmi Yojana beneficiaries
Image Credit to Original Source

ಆದರೆ ಎರಡು ಕಂತುಗಳ ಹಣ ಬಹುತೇಕ ಶೇ.100ರಷ್ಟು ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಿಲ್ಲ ಎಂದು ಖುದ್ದು ರಾಜ್ಯ ಸರಕಾರ ಒಪ್ಪಿ ಕೊಂಡಿದೆ. ಈ ಹಣವನ್ನು ಹಂತ ಹಂತವಾಗಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ತಿಳಿಸಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಪಡೆಯಲು ಪ್ರತೀ ಯಜಮಾನಿಯರು ತಮ್ಮ ಖಾತೆಯನ್ನು ಇ – ಕೆವೈಸಿ ಅಪ್ಡೇಟ್ಸ್‌ ಮಾಡಲು ಸೂಚಿಸಲಾಗಿದೆ. ಪಡಿತರ ಚೀಟಿಯನ್ನು ಹೊಂದಿರುವ ಮನೆಯ ಯಜಮಾನಿಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ತಮ್ಮ ಆಧಾರ್‌ ಕಾರ್ಡ್‌ ಜೊತೆಗೆ ರೇಷನ್‌ ಕಾರ್ಡ್‌ ಲಿಂಕ್‌ ಆಗಿರಬೇಕು.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

ಅಷ್ಟೇ ಅಲ್ಲಾ ಆಧಾರ್‌ ಕಾರ್ಡ್‌ ಜೊತೆಗೆ ಬ್ಯಾಂಕ್‌ ಖಾತೆಯನ್ನು ಕೆವೈಸಿ ಮಾಡಿಸಿರಬೇಕು. ಅರ್ಜಿದಾರರ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಪ್ರತೀ ತಿಂಗಳು ( DBT) 2000 ರೂಪಾಯಿ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಲಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಪೈಕಿ ಕೆಲವರಿಗೆ ಒಂದು ತಿಂಗಳ ಹಣ ಜಮೆ ಆಗಿದ್ರೆ, ಇನ್ನೂ ಕೆಲವರಿಗೆ ಎರಡೂ ತಿಂಗಳ ಹಣ ಜಮೆ ಆಗಿಲ್ಲ.

Gruha Lakshmi Scheme Karnataka Governament Good news for Gruha Lakshmi Yojana beneficiaries
Image Credit to Original Source

ಗೃಹಲಕ್ಷ್ಮೀ ಯೋಜನೆಯ ಹಣ ಬಾರದೆ ಗೃಹಿಣಿಯರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕೆಲವೊಂದು ಅರ್ಜಿಗಳಿಗೆ ಸರಕಾರದ ಕಡೆಯಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಇನ್ನೂ ಕೆಲವೊಂದು ಅರ್ಜಿದಾರರು ತಮ್ಮ ಬ್ಯಾಂಕ್‌ ಖಾತೆಗೆ ಇ -ಕೆವೈಸಿ ಮಾಡಿಸಿಲ್ಲ. ಆದರೆ ಎಲ್ಲಾ ಅರ್ಜಿದಾರರಿಗೂ ಗೃಹಲಕ್ಷ್ಮೀ ಹಣವನ್ನು ಸಂದಾಯ ಮಾಡಲು ಸರಕಾರ ಸಿದ್ದವಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ನೀವು ಬಿಪಿಎಲ್‌ ಕಾರ್ಡ್‌ ಹೊಂದಿದ್ದೀರಾ ? ಜೊತೆಗೆ ಕಾರು ಇದ್ಯಾ ? ಹಾಗಾದ್ರೆ ರದ್ದಾಗುತ್ತೆ ನಿಮ್ಮ ರೇಷನ್‌ ಕಾರ್ಡ್‌

ಅಲ್ಲದೇ ಬಾಕಿ ಇರುವ ಎರಡು ತಿಂಗಳ ಗೃಹಲಕ್ಷ್ಮೀ ಹಣವನ್ನು ಯಜಮಾನಿಯರ ಖಾತೆಗೆ ಹಂತ ಹಂತವಾಗಿ ವರ್ಗಾವಣೆಯನ್ನು ಮಾಡಲಾಗುತ್ತದೆ. ನವೆಂಬರ್‌ ಅಂತ್ಯದ ಒಳಗಾಗಿ ಶೇ.೧೦೦ರಷ್ಟು ಗೃಹಲಕ್ಷ್ಮೀ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎನ್ನುವ ಮೂಲಕ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ.

Gruha Lakshmi Scheme Karnataka Governament Good news for Gruha Lakshmi Yojana beneficiaries

Comments are closed.