ದಿನಭವಿಷ್ಯ 03 ನವೆಂಬರ್ 2023 : ಸಿದ್ಧಿ ಯೋಗದಿಂದ ಮೇಷ, ಸಿಂಹ ರಾಶಿಯವರಿಗೆ ಅದೃಷ್ಟ

Horoscope Today : ದಿನಭವಿಷ್ಯ 03 ನವೆಂಬರ್ 2023 ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಸಿದ್ದಿಯೋಗವು ಹಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಮೇಷರಾಶಿಯಿಂದ

Horoscope Today : ದಿನಭವಿಷ್ಯ 03 ನವೆಂಬರ್ 2023 ಶುಕ್ರವಾರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಸಿದ್ದಿಯೋಗವು ಹಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಕುಟುಂಬದಲ್ಲಿ ನೆಮ್ಮದಿ. ಮಕ್ಕಳ ಜೊತೆಗೆ ಸಂಜೆ ಮೋಜು ಮಸ್ತಿಯಲ್ಲಿ ಭಾಗಿಯಾಗುವಿರಿ. ಪೂರ್ವಜರ ಆಸ್ತಿಯಲ್ಲಿ ಹಣವನ್ನು ಪಡೆಯುವಿರಿ. ನಿಮ್ಮ ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನ. ಖರ್ಚು ವೆಚ್ಚಗಳು ಅಧಿಕವಾಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ.

ವೃಷಭ ರಾಶಿ ದಿನಭವಿಷ್ಯ
ವೃಷಭರಾಶಿಯವರು ಇಂದು ನಿರಾಸೆಗೊಳ್ಳುತ್ತಾರೆ. ಆರೋಗ್ಯದ ವಿಚಾರದಲ್ಲಿ ನೀವು ಜಾಗರೂಕರಾಗಿ ಇರಬೇಕು. ಆಹಾರ ಪದ್ದತಿಯನ್ನು ಗಮನದಲ್ಲಿ ಇಟ್ಟುಕೊಳ್ಳಿ. ದೂರ ಪ್ರಯಾಣಕ್ಕೆ ಬಯಸಿದರೆ ಅದನ್ನು ಮುಂದೂಡುವುದು ಸೂಕ್ತ. ಮಗುವಿನಿಂದ ಇಂದು ಶುಭ ಸುದ್ದಿಯನ್ನು ಕೇಳುವಿರಿ.

ಮಿಥುನ ರಾಶಿ ದಿನಭವಿಷ್ಯ
ತಮ್ಮ ವ್ಯವಹಾರದಲ್ಲಿ ಕೆಲವು ಅಗತ್ಯ ಬದಲಾವಣೆ ಮಾಡಬಹುದು. ಯಾವುದೇ ಒಪ್ಪಂದಗಳನ್ನು ನಂಬಿಕೆಯಿಂದಲೇ ಒಪ್ಪಿಕೊಳ್ಳಿ. ನಿಮ್ಮ ಕಾರ್ಯ ಯೋಜನೆಗಳಿಂದ ಹೆಚ್ಚು ಲಾಭವನ್ನು ಪಡೆಯುವಿರಿ. ವೈವಾಹಿಕ ಜೀವನದಲ್ಲಿ ಯಾವುದೇ ತೊಂದರೆಗಳಿದ್ದರೂ ಕೊನೆಗೊಳ್ಳುತ್ತದೆ. ವ್ಯವಹಾರಕ್ಕೆ ಉತ್ತಮ ಸಮಯ.

ಕರ್ಕಾಟಕ ರಾಶಿ ದಿನಭವಿಷ್ಯ
ಹೊಸ ಹೂಡಿಕೆಗಳು ಇಂದು ಲಾಭವನ್ನು ತಂದು ಕೊಡಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವೇಳೆಯಲ್ಲಿ ಎಚ್ಚರವಾಗಿರಿ. ಸಹೋದರರ ಜೊತೆಗೆ ಭಿನ್ನಾಭಿಪ್ರಾಯ ಕಂಡು ಬರಲಿದೆ. ಸಂಗಾತಿಯ ಬೆಂಬಲ, ಸಹಕಾರ ದೊರೆಯಲಿದೆ. ಕುಟುಂಬ ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರಲಿದೆ.

ಇದನ್ನೂ ಓದಿ : ಕೇವಲ 55 ರನ್‌ಗೆ ಶ್ರೀಲಂಕಾ ಆಲೌಟ್‌ : ವಿಶ್ವಕಪ್‌ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಭಾರತ

ಸಿಂಹ ರಾಶಿ ದಿನಭವಿಷ್ಯ
ಸಂಗಾತಿಯೊಂದಿಗೆ ಆರಂಭಿಸಿದ ವ್ಯವಹಾರ ಭವಿಷ್ಯದಲ್ಲಿ ಉತ್ತಮ ಲಾಭವನ್ನು ತರಲಿದೆ. ಕುಟುಂಬದ ಸದಸ್ಯರಿಂದ ಸಹಕಾರ ದೊರೆಯಲಿದೆ. ಸಂಗಾತಿಯೊಂದಿಗೆ ಸೇರಿ ಆರಂಭಿಸಿದ ವ್ಯವಹಾರದಿಂದ ಯಶಸ್ಸು. ಅನಿರೀಕ್ಷಿತ ಪಾರ್ಟಿಯನ್ನು ಆಯೋಜಿಸುವಿರಿ. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ಸಂತಸ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.

Horoscope Today 03 November 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿ ಬಲ ಪಡಿಸಲು ನೀವು ಮಾಡುವ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಯಶಸ್ವಿ ಆಗುತ್ತೀರಿ. ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಅವಕಾಶ ದೊರೆಯಲಿದೆ. ಸಂಜೆಯ ವೇಳೆಗೆ ನೀವು ಮಹಾನ್‌ ವ್ಯಕ್ತಿಯನ್ನು ಭೇಟಿಯಾಗುವಿರಿ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಅಗತ್ಯ. ಆಸ್ತಿ ವಿವಾದಗಳು ಶೀಘ್ರದಲ್ಲಿಯೇ ಪರಿಹಾರ ಆಗಲಿದೆ.

ತುಲಾರಾಶಿ ದಿನಭವಿಷ್ಯ
ಯಾವುದೇ ಹೊಸ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಸಾಲವಾಗಿ ಪಡೆದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಮಗುವಿನ ಶೈಕ್ಷಣಿಕ ಕಾರ್ಯಕ್ಕಾಗಿ ಸಮಯವನ್ನು ಮೀಸಲಿಡಿ. ಸಂಗಾತಿಯ ಆರೋಗ್ಯದ ಬಗ್ಗೆ ಜಾಗರೂಕರಾಗಿ ಇರಬೇಕು. ಕುಟುಂಬ ಸದಸ್ಯರ ಜೊತೆಗೆ ಸಂತೋಷದ ಸಂಜೆ ಕಳೆಯುವಿರಿ.

ಇದನ್ನೂ ಓದಿ : India vs Sri lanka : ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಪಾಲಿಗೆ 3 ಕೆಟ್ಟ ದಿನಗಳು !

ವೃಶ್ಚಿಕರಾಶಿ ದಿನಭವಿಷ್ಯ
ಯಾವುದೇ ಸಮಸ್ಯೆಯನ್ನು ನೀವಿಂದು ಧೈರ್ಯವಾಗಿ ಎದುರಿಸುತ್ತೀರಿ. ಎಲ್ಲಾ ಪ್ರಯತ್ನಗಳಲ್ಲಿಯೂ ಯಶಸ್ಸನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ದೈಹಿಕ, ಮಾನಸಿಕ ಸಮಸ್ಯೆಯ ಬಗ್ಗೆ ಎಚ್ಚರವಾಗಿರಿ.

ಧನಸ್ಸುರಾಶಿ ದಿನಭವಿಷ್ಯ
ಸಾಮಾಜಿಕ ಸೇವೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ವ್ಯಾಪಾರಸ್ಥರು ವ್ಯವಹಾರ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡಬೇಕು. ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆಯಿದೆ. ಕುಟುಂಬ ಜೀವನವು ನಕಾರಾತ್ಮಕವಾಗಿ ಇರುತ್ತದೆ. ಮಕ್ಕಳ ವಿಚಾರದಲ್ಲಿ ಕೆಲವೊಂದು ತೃಪ್ತಿಕರ ಸುದ್ದಿಯನ್ನು ಕೇಳಬಹುದು. ವಿದೇಶದಲ್ಲಿ ನೆಲೆಸಿರುವವರಿಗೆ ದೂರವಾಣಿ ಮೂಲಕ ಶುಭ ಸುದ್ದಿ ದೊರೆಯಲಿದೆ.

ಮಕರ ರಾಶಿ ದಿನಭವಿಷ್ಯ
ಕೆಲಸಗಾರರಿಗೆ ಹೆಚ್ಚುವರಿ ಕೆಲಸದ ಹೊರ ಇರಲಿದೆ. ಸಹೋದ್ಯೋಗಿಗಳ ಸಹಕಾರಕಾರದಿಂದ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ವ್ಯವಹಾರ ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಣ್ಣಪುಟ್ಟ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಇಲ್ಲವಾದ್ರೆ ಕಷ್ಟಗಳು ಎದುರಾಗಲಿದೆ.

ಇದನ್ನೂ ಓದಿ : ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೋಚಿಂಗ್‌ ಇಲ್ಲದೇ ಪಾಸ್‌ ಆದ ಉಡುಪಿಯ 3 ವರ್ಷದ ಮಗುವಿನ ತಾಯಿ ನಿವೇದಿತಾ ಶೆಟ್ಟಿ

ಕುಂಭ ರಾಶಿ ದಿನಭವಿಷ್ಯ
ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಇಂದು ಒತ್ತಡದಲ್ಲಿ ಜೀವನ ನಡೆಸಲಿದ್ದಾರೆ. ಆಸ್ತಿಗೆ ಸಂಬಂಧಿಸಿದ ವಿವಾದಗಳನ್ನು ದೀರ್ಘ ಕಾಲದ ವರೆಗೆ ಮುಂದೂಡಿಕೆ ಮಾಡುವುದು ಉತ್ತಮವಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಷೇರು ಮಾರುಕಟ್ಟೆಯಲ್ಲಿಯ ಹೂಡಿಕೆ ಅಧಿಕ ಲಾಭವನ್ನು ತಂದು ಕೊಡಲಿದೆ.

ಮೀನ ರಾಶಿ ದಿನಭವಿಷ್ಯ
ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದಗಳನ್ನು ಮೌನವಾಗಿ ಪರಿಹರಿಸಿಕೊಳ್ಳಿ. ಇಲ್ಲದಿದ್ದರೆ, ಸಂಬಂಧಗಳಲ್ಲಿ ಬಿರುಕು ಮೂಡಲಿದೆ. ಸಂಬಂಧಿಕರು ಸಾಲವನ್ನು ಕೇಳಿದರೆ ನೀವು ಅದನ್ನು ಸುಲಭವಾಗಿ ಪಡೆಯುವಿರಿ. ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮಗುವಿನ ಪ್ರಗತಿ ನಿಮಗೆ ಸಂತಸವನ್ನು ತರಲಿದೆ.

Horoscope Today 03 November 2023 Zordic Sign

Comments are closed.