H. Vishwanath’s statement :‘ಆರೋಪ ಮುಕ್ತರಾಗುವವರೆಗೂ ಮುರುಘಾ ಶರಣರು ಪೀಠ ತ್ಯಜಿಸಲಿ’: ಹೆಚ್​.ವಿಶ್ವನಾಥ್​ ಆಗ್ರಹ

ಮೈಸೂರು: H. Vishwanath’s statement :ಡಾ.ಶಿವಮೂರ್ತಿ ಮುರುಘಾ ಶರಣರ ಮೇಲೆ ಎದುರಾಗಿರುವ ಲೈಂಗಿಕ ದೌರ್ಜನ್ಯ ಆರೋಪದ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ವಿಧಾನಪರಿಷತ್​ ಸದಸ್ಯ ಹೆಚ್​​.ವಿಶ್ವನಾಥ್​, ಮುರುಘಾ ಮಠ ಇತಿಹಾಸ ಪರಂಪರೆಯ ಮಠ. ತ.ರಾ.ಸಿ ತಮ್ಮ ದುರ್ಘಾಸ್ತಾಮಾನ ಕೃತಿಯಲ್ಲಿ ಇದನ್ನು ವಿವರವಾಗಿ ತಿಳಿಸಿದ್ದಾರೆ. ಅಂತಹ ಮಠದ ಸ್ವಾಮೀಜಿಯ ಮೇಲೆ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿರುವುದು ದುಃಖದ ಸಂಗತಿ ಎಂದು ಹೇಳಿದರು.


ಮುರುಘಾ ಶರಣರ ಮೇಲೆ ಕಠಿಣ ಪೋಕ್ಸೋ ಕಾಯ್ದೆ ರಿಜಿಸ್ಟರ್​ ಆಗಿದೆ. ನಿರ್ಭಯ ಪ್ರಕರಣ ಆದಮೇಲೆ ಈ ಕಾಯ್ದೆ ಜಾರಿಗೆ ಬಂದಿದೆ. ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ನೀಡಲು ತರಲಾಗಿದೆ. ಇಂತಹ ಕಾಯ್ದೆಯ ಅಡಿಯಲ್ಲಿ ಗುರುಗಳ ವಿರುದ್ಧ ಕೇಸ್​ ದಾಖಲಾಗಿದೆ .ಇಬ್ಬರು ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ದಲಿತೆ ಆಗಿರುವುದರಿಂದ ಎಸ್ಸಿ/ಎಸ್ಟಿ ಕಾಯ್ದೆ ಕೂಡ ಸೇರಿಕೊಂಡಿದೆ. ಸ್ವಾಮೀಜಿಗಳ ಮೇಲೆ ಬಹಳ ಕಠಿಣವಾದ ಕೇಸ್​ ದಾಖಲಾಗಿದೆ .

ಇವೆಲ್ಲ ನಾವೇ ಒಪ್ಪಿಕೊಂಡಿರುವ ಕಾನೂನು. ನಾವೇ ಒಪ್ಪಿಕೊಂಡಿರುವ ಕಾನೂನು ಇದು ಎಂದಮೇಲೆ ನಾವು ಅದನ್ನು ಗೌರವಿಸಲೇಬೇಕು.ಇದರಲ್ಲಿ ಯಡಿಯೂರಪ್ಪ ಅಥವಾ ಗೃಹ ಸಚಿವರು ಮಧ್ಯ ಪ್ರವೇಶ ಮಾಡಬಾರದು. ಪೋಕ್ಸೋ ಕೇಸ್​ ದಾಖಲಾದರೆ ಆತ ಆರೋಪಿ ಆಗೋದಿಲ್ಲ, ಅಪರಾಧಿ ಆಗುತ್ತಾನೆ . ಸರ್ಕಾರ ಈ ಪ್ರಕರಣದಲ್ಲಿ 24 ಗಂಟೆಗಳ ಒಳಗಾಗಿ ಕ್ರಮ ಕೈಗೊಳ್ಳಬೇಕಿತ್ತು. ಒಂದು ದಿನದ ಒಳಗಾಗಿ ಆರೋಪಿಯನ್ನು ಬಂಧಿಸಬೇಕಿತ್ತು. ಅಪರಾಧಿ ಆದವರನ್ನು ಬಂಧಿಸಲೇಬೇಕು. ಇಂತಹ ಪ್ರಕರಣದಲ್ಲಿ ಸಂಧಾನ, ಅನುಸಂಧಾನಕ್ಕೆಲ್ಲ ಅವಕಾಶ ನೀಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .


ಗೃಹ ಮಂತ್ರಿಗಳು ಅಪರಾಧ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ಅಂತಾ ಹೇಳುತ್ತಾರೆ. ಹಾಗೆ ಹೇಳೋಕೆ ಇವರೆಲ್ಲ ಯಾರು..? ನೊಂದ ಮಕ್ಕಳಿಗೆ ನ್ಯಾಯ ಸಿಗಬೇಕು ಎನ್ನುವುದು ಜನರ ಒತ್ತಾಯವಾಗಿದೆ. ಆದರೆ ರಾಜಕಾರಣಿಗಳು ಇದನ್ನು ಡೈಲ್ಯೂಟ್​ ಮಾಡ್ತಿದ್ದಾರೆ. ಈಗಲೂ ಸ್ವಾಮೀಜಿಯನ್ನು ಗೌರವದಿಂದ ಕರೆದುಕೊಂಡು ಬರಲಾಗ್ತಿದೆ. ಅವರಿಗೆ ಜೈಕಾರ ಹಾಕುವುದು ಸರಿಯಲ್ಲ. ಹಾಗಾದರೆ ಲೈಂಗಿಕ ದೌರ್ಜನ್ಯಕ್ಕೆ ನಿಮ್ಮ ಬೆಂಬಲ ಎಂದು ಅರ್ಥವೇ..? ಆ ಚಿತ್ರದುರ್ಗ ಎಸ್ಪಿ ಏನು ಮಾಡ್ತಿದ್ದಾರೆ..? ಅವರನ್ನು ಮೊದಲು ಸಸ್ಪೆಂಡ್​ ಮಾಡಿ ಎಂದು ವಿಶ್ವನಾಥ್​ ಆಗ್ರಹಿಸಿದ್ದಾರೆ.


ಇದು ಅಪ್ರಾಪ್ತ ಮಕ್ಕಳ ವಿಚಾರವಾಗಿದೆ. ದೊಡ್ಡವರ ವಿಚಾರವಾಗಿದ್ದರೆ ಅದು ಬೇರೆಯೇ ಆಗಿತ್ತು. ಪೋಕ್ಸೋದಲ್ಲಿ 20 ವರ್ಷದ ನಂತರವೂ ಬಂದು ನ್ಯಾಯ ಕೇಳಬಹುದು. ಗುರುಗಳನ್ನೇ ದೇವರು ಎಂದು ನಾವು ಒಪ್ಪಿದ್ದೇವೆ. ಖಾವಿ ಹಾಕಿಕೊಂಡವರ ಕಾಲಿಗೆ ಬೀಳುತ್ತೇವೆ. ಶಿವಮೂರ್ತಿ ಮುರುಘಾ ಶರಣರು ತಾತ್ಕಾಲಿಕವಾಗಿ ಪೀಠವನ್ನು ತ್ಯಜಿಸಿ ಕಾನೂನಿಗೆ ಸಹಕರಿಸಬೇಕು. ಕಾನೂನು ಏನು ಮಾಡುತ್ತೆ ನೋಡೋಣ. ನಿಮ್ಮ ತಪ್ಪಿಲ್ಲ ಎಂಬುದು ಸಾಬೀತಾದರೆ ನಿಮ್ಮನ್ನು ಪುನಃ ನಾವು ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ.


ಸ್ವಾಮೀಜಿ ತಮ್ಮ ಮೇಲೆ ಬಂದಿರುವ ಆರೋಪವನ್ನು ಕಾನೂನು ಮೂಲಕವೇ ಹೋಗಲಾಡಿಸಿಕೊಳ್ಳಬೇಕು. ಸರ್ಕಾರ ಈ ಸಂಬಂಧ ಗಂಭೀರ ಹಾಗೂ ಭದ್ರ ಕ್ರಮವನ್ನು ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಮುಲಾಜು ನೋಡಬೇಕು. ಎಲ್ಲದಕ್ಕೂ ಉತ್ತರ ನೀಡಬೇಕಾಗಿರುವುದು ಸರ್ಕಾರ. ಸರ್ಕಾರಕ್ಕೆ ಚ್ಯುತಿಯಾದರೆ ಅದನ್ನು ಯಾರೂ ಸಹಿಸೋದಿಲ್ಲ ಎಂದಿದ್ದಾರೆ.

ಇದನ್ನು ಓದಿ : Ramya : ‘ನಾಳೆ ಅಧಿಕೃತವಾಗಿ ಗುಡ್​ ನ್ಯೂಸ್​ ನೀಡುವೆ’ : ಫ್ಯಾನ್ಸ್​ ತಲೆಯಲ್ಲಿ ಹುಳಬಿಟ್ಟ ನಟಿ ರಮ್ಯಾ

ಇದನ್ನೂ ಓದಿ : teacher burns a boy’s genitals:ಚಡ್ಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಬಾಲಕನ ಗುಪ್ತಾಂಗವನ್ನೇ ಸುಟ್ಟ ಶಿಕ್ಷಕಿ

H. Vishwanath’s statement regarding the sexual assault case facing Muruga Sharanaru

Comments are closed.