teacher burns a boy’s genitals:ಚಡ್ಡಿಯಲ್ಲಿ ಮೂತ್ರ ಮಾಡಿದ್ದಕ್ಕೆ ಬಾಲಕನ ಗುಪ್ತಾಂಗವನ್ನೇ ಸುಟ್ಟ ಶಿಕ್ಷಕಿ

ತುಮಕೂರು : teacher burns a boy’s genitals :ಚಿಕ್ಕ ಮಕ್ಕಳು ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುವುದು ಹೊಸ ವಿಚಾರವೇನಲ್ಲ. ಬಾಲ್ಯದಲ್ಲಿ ಈ ಕೆಲಸವನ್ನು ಎಲ್ಲರೂ ಮಾಡಿರುತ್ತಾರೆ. ಹೀಗಾಗಿ ಇದನ್ನು ಒಂದು ದೊಡ್ಡ ಅಪರಾಧವೆಂಬಂತೆ ಯಾರೂ ಭಾವಿಸುವುದಿಲ್ಲ. ಆದರೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಎಂಬಲ್ಲಿ ಮೂರು ವರ್ಷದ ಬಾಲಕ ಚಡ್ಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾನೆಂದು ಕೋಪಗೊಂಡ ಶಿಕ್ಷಕಿಯು ಆತನಿಗೆ ಅತ್ಯಂತ ವಿಚಿತ್ರವಾದ ಶಿಕ್ಷೆ ನೀಡಿದ್ದಾರೆ.


ಚಿಕ್ಕನಾಯಕನಹಳ್ಳಿಯ ಅಂಗನವಾಡಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಮೂರು ವರ್ಷದ ಬಾಲಕ ಪದೇ ಪದೇ ಚಡ್ಡಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದು ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಗೆ ಬಾಲಕನ ಮೇಲೆ ಕೋಪ ಬರುವಂತೆ ಮಾಡಿತ್ತು. ಬಾಲಕ ಚಡ್ಡಿಯಲ್ಲಿ ಮೂತ್ರ ಮಾಡುವುದನ್ನು ತಪ್ಪಿಸಬೇಕೆಂದು ಪ್ಲಾನ್​ ಮಾಡಿದ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೆಂಕಿ ಕಡ್ಡಿಯಿಂದ ಆತನ ಗುಪ್ತಾಂಗವನ್ನೇ ಸುಟ್ಟಿದ್ದಾರೆ..!


ಬಾಲಕನ ಗುಪ್ತಾಂಗ ಹಾಗೂ ತೊಡೆಯ ಭಾಗದಲ್ಲಿ ಸುಟ್ಟ ಗಾಯಗಳನ್ನು ಪೋಷಕರು ಗಮನಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆ ಸಂಬಂಧ ತನಿಖೆ ನಡೆಸಲು ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಚಿಕ್ಕನಾಯಕನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದಾರೆ. ಕೃತ್ಯವೆಸಗಿದೆ ಶಿಕ್ಷಕಿ , ಸಹಾಯಕಿ ಹೇಳಿಕೆಗಳನ್ನು ದಾಖಲಿಸಿಕೊಂಡ ಅಧಿಕಾರಿಗಳು ಬಳಿಕ ಬಾಲಕನ ಪೋಷಕರನ್ನೂ ಸಂಪರ್ಕಿಸಿದ್ದಾರೆ.


ಈ ಘಟನೆ ಸಂಬಂಧ ಚಿಕ್ಕನಾಯಕನಹಳ್ಳಿ ಅಂಗನವಾಡಿಯ ಶಿಕ್ಷಕಿ ಹಾಗೂ ಸಹಾಯಕಿಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ನೋಟಿಸ್​ ನೀಡಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಇದನ್ನು ಓದಿ : Shubman Gill dating : ಈ ಬಾಲಿವುಡ್ ನಟಿ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಟೀಮ್ ಇಂಡಿಯಾ ಸ್ಟಾರ್ ಶುಭಮನ್ ಗಿಲ್?

ಇದನ್ನೂ ಓದಿ :Ramya : ‘ನಾಳೆ ಅಧಿಕೃತವಾಗಿ ಗುಡ್​ ನ್ಯೂಸ್​ ನೀಡುವೆ’ : ಫ್ಯಾನ್ಸ್​ ತಲೆಯಲ್ಲಿ ಹುಳಬಿಟ್ಟ ನಟಿ ರಮ್ಯಾ

A teacher burns a boy’s genitals for urinating in his pants

Comments are closed.