ಕುಂದಾಪುರ ಬಿಜೆಪಿಗೆ ಹಾಲಾಡಿಯೇ ಸ್ಟಾರ್‌ ಪ್ರಚಾರಕ !

ಕುಂದಾಪುರ : ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಸದ್ಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಅವರೇ ಸ್ಟಾರ್‌ ಪ್ರಚಾಕರು. ಬಿಜೆಪಿ ಅಭ್ಯರ್ಥಿ ಕಿರಣ್‌ ಕೊಡ್ಗಿ ಅವರ ಪರ ಪ್ರಚಾರಕ್ಕೆ ಇಳಿದಿರುವ ಹಾಲಾಡಿ ಕೈಮುಗಿದು ಮತಯಾಚನೆ ಮಾಡುತ್ತಿದ್ದಾರೆ.

ಕುಂದಾಪುರದ ವಾಜಪೇಯಿ ಅಂತಾನೇ ಖ್ಯಾತಿ ಪಡೆದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಕರಾವಳಿ ಕಂಡ ಶ್ರೇಷ್ಠ ಶಾಸಕರಲ್ಲೊಬ್ಬರು. ಕುಂದಾಪುರದಲ್ಲಿ ಎರಡೂವರೆ ದಶಕಗಳ ಕಾಲ ಶಾಸಕರಾಗಿ ಸೋಲಿಲ್ಲದ ಸರದಾರನಾಗಿ ಮರೆದಿದ್ದಾರೆ. ಅಧಿಕಾರಕ್ಕೆ ಹಪಹಪಿಸುವ ಇಂದಿನ ಕಾಲಘಟ್ಟದಲ್ಲಿ ತಾವಾಗಿಯೇ ಚುನಾವಣಾ ರಾಜಕೀಯಕ್ಕೆ ಗುಡ್‌ಬೈ ಹೇಳಿದವರು. ಟಿಕೆಟ್‌ ಸಿಗದೇ ಮುನಿಸಿಕೊಂಡು ಪಕ್ಷಾಂತರ ಮಾಡುವ ಶಾಸಕರು, ನಾಯಕರ ನಡುವೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಓರ್ವ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಕರಾವಳಿ ಭಾಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಬಿಜೆಪಿಯ ಭೀಷ್ಮ ಎ.ಜಿ.ಕೊಡ್ಗಿ ಅವರ ಶಿಷ್ಯರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಇದೀಗ ತಮ್ಮ ಸ್ಥಾನವನ್ನು ಎಜಿ ಕೊಡ್ಗಿ ಅವರ ಪುತ್ರನಿಗೆ ಬಿಟ್ಟುಕೊಟ್ಟಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದರೂ ಕೂಡ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಪ್ರತೀ ಗೆಲುವಿನಲ್ಲೂ ಸಾಥ್‌ ಕೊಟ್ಟಿರುವ ಕಿರಣ್‌ ಕೊಡ್ಗಿ ಅವರ ಚುನಾವಣೆಯಲ್ಲಿ ಇದೀಗ ಹಾಲಾಡಿ ತಮ್ಮ ಮೇಲಿನ ಋಣ ತೀರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಸದ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಟಾರ್‌. ಕುಂದಾಪುರ ಮಾತ್ರವಲ್ಲ ಉಡುಪಿ ಜಿಲ್ಲೆಯ ಕಾರ್ಕಳ, ಬೈಂದೂರು, ಉಡುಪಿ ಹಾಗೂ ಕಾಪು ಕ್ಷೇತ್ರಗಳಲ್ಲಿಯೂ ಹಾಲಾಡಿ ಹಿಡಿತ ಸಾಧಿಸಿದ್ದಾರೆ. ಅದ್ರಲ್ಲೂ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಎಲ್ಲೇ ಹೋದ್ರು ಜನ ಸಮೂಹವೇ ಹರಿದು ಬರುತ್ತಿದೆ. ಇಷ್ಟು ವರ್ಷಗಳ ಚುನಾವಣೆಗೆ ಹೋಲಿಸಿದ್ರೆ ಈ ಬಾರಿ ಸಭೆ, ಚುನಾವಣಾ ಪ್ರಚಾರ ಕಾರ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವಾಗಿರೋದು ಹಾಲಾಡಿ ಅನ್ನೋ ಶಕ್ತಿ. ಇದನ್ನೂ ಓದಿ : ಹಾಲಾಡಿ ಶ್ರೀನಿವಾಸ್‌ ಶೆಟ್ಟಿ + ಕಿರಣ್‌ ಕೊಡ್ಗಿ : ಗೆಲುವು ಕಾಣುವರೇ ಮೊಳಹಳ್ಳಿ

ಬಿಜೆಪಿ ಅನ್ನೋ ಹೆಸರೇ ಇಲ್ಲದ ಕಾಲದಲ್ಲಿ ಕಾಂಗ್ರೆಸ್‌ನ ಹಳೆಯ ಹುಲಿ ಪ್ರತಾಪ್‌ ಚಂದ್ರ ಶೆಟ್ಟಿ ಅವರಿಗೆ ಸೋಲಿನ ರುಚಿ ತೋರಿಸಿದವರು. ಕಾಂಗ್ರೆಸ್‌ ಪ್ರತೀ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಾಗಲೂ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡವರು ಹಾಲಾಡಿ. ಒಂದು ಬಾರಿ ಪಕ್ಷೇತರರಾಗಿ ಕಣಕ್ಕೆ ಇಳಿದು ಪ್ರಚಾ ಈ ಬಾರಿಯ ಚುನಾವಣೆಯಲ್ಲಿಯೂ ಹಾಲಾಡಿ ಕಿರಣ್‌ ಕೊಡ್ಗಿ ಪರ ಸ್ಟಾರ್‌ ಪ್ರಚಾರಕಾಗಿ ಗುರುತಿಸಿಕೊಂಡಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಟ್ಟಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಹೊರತು ಪಡಿಸಿ ಅನ್ಯ ಸ್ಟಾರ್‌ ಪ್ರಚಾರಕರ ಅಗತ್ಯವಿಲ್ಲ ಅಂತಾ ಖುದ್ದು ಬಿಜೆಪಿ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್‌ ಕೊಡ್ಗಿ ಅವರೇ ಇದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಚುನಾವಣೆ ಅಂತಾ ಹೇಳಿಕೊಂಡಿದ್ದಾರೆ. ತಾನು ಪ್ರತಿನಿಧಿಸಿದ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಅಂತರ ಕಡಿಮೆ ಆಗಬಾರದು ಅನ್ನೋ ಕಾರಣಕ್ಕಾಗಿ ಹಾಲಾಡಿ ಹಗಲು ಇರುಳು ಶ್ರಮಿಸುತ್ತಿದ್ದಾರೆ. ಇದನ್ನೂ ಓದಿ : ಕುಂದಾಪುರದ ವಾಜಪೇಯಿ ಹಾಲಾಡಿ ಶ್ರೀನಿವಾಸ ಶೆಟ್ಟಿ : ರಾಜಕೀಯ ನಿವೃತ್ತಿ ಘೋಷಣೆ

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೂ ಮೊದಲೇ ಚುನಾವಣಾ ರಾಜಕೀಯಕ್ಕೆ ರಾಜೀನಾಮೆಯನ್ನು ಘೋಷಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯ ಪರ ಕೆಲಸ ಮಾಡುವುದಾಗಿಯೂ ಹೇಳಿಕೊಂಡಿದ್ದರು. ಕುಂದಾಪುರ ಕ್ಷೇತ್ರದಲ್ಲಿ ಹಾಲಾಡಿ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ಉಡುಪಿ ಜಿಲ್ಲೆಯ ಉಳಿದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಬದಲಾಯಿಸಿತ್ತು. ಅಷ್ಟೇ ಅಲ್ಲಾ ರಾಜ್ಯದ ಹಲವು ನಾಯಕರು ಹಾಲಾಡಿ ಅವರ ಹಾದಿಯನ್ನೇ ಹಿಡಿದಿದ್ದರು. ಇದನ್ನೂ ಓದಿ : ಹುಬ್ಬಳ್ಳಿ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ಕಮ್ಮಾರ್‌ನ್ನು ಚಾಕುವಿನಿಂದ ಇರಿದು ಕೊಲೆ : 3 ಬಂಧನ

Comments are closed.