ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ : ಭರ್ತಿಯಾದ ಜಲಾಶಯದಿಂದ ಜನರಿಗೆ ಆತಂಕ

ಹಾಸನ : ಮಲೆನಾಡಿನ ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Hassan District Heavy Rain) ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಜೀವ ನದಿಗಳಾಗಿರುವ ಹೇಮಾವತಿ, ಕಾವೇರಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿನ ಜನರಿಗೆ ಆತಂಕ ಹೆಚ್ಚಾಗಿದೆ. ರುದ್ರಪಟ್ಟಣದಲ್ಲಿ ಈಶ್ವರ ದೇವಾಲಯ ಸಂಪೂರ್ಣವಾಗಿ ಜಲಾವೃತವಾಗಿದೆ. ಅಲಲ್ಲಿ ಭೂಕುಸಿತವಾಗಿರುವ ಜೊತೆಗೆ ಜಿಲ್ಲೆಯಲ್ಲಿನ ಜಲಾಶಯಗಳು ಭರ್ತಿಯಾಗಿದ್ದು, ಡ್ಯಾನಿಂದ ನೀರನ್ನು ಹೊರ ಬಿಟ್ರೆ ಅನಾಹುತಗಳು ಸಂಭವಿಸುವ ಸಾಧ್ಯತೆಯಿದೆ.

ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಅದ್ರಲ್ಲೂ ಜಿಲ್ಲೆಯ ಮಲೆನಾಡಿನ ಭಾಗಗಳಲ್ಲಿ ಉಂಟಾಗುತ್ತಿರುವ ಭೂ ಕುಸಿತದಿಂದಾಗಿ ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಹೇಮಾವತಿ ಡ್ಯಾಂ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿಯೂ ನೀರನ್ನು ಹೊರ ಬಿಡುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಅದ್ರಲ್ಲೂ ಸಕಲೇಶಪುರ, ಆಲೂರು, ಬೇಲೂರು ಭಾಗಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಕೊಡಗಿನ ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ರುದ್ರಪಟ್ಟಣದಲ್ಲಿ ಈಶ್ವರ ದೇವಾಲಯದಲ್ಲಿ ಜಲಾವೃತವಾಗಿದೆ. ಜೊತೆಗೆ ಕೃಷಿ ಭೂಮಿಗೆ ನೀರು ನುಗ್ಗಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಸಕಲೇಶಪುರ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಭೂಕುಸಿತ ಉಂಟಾಗಿದೆ. ಅಪಾಯದ ಸ್ಥಿತಿಗೆ ಗ್ರಾಮದ ತಿಮ್ಮಯ್ಯ ಎಂಬುವವರ ಮನೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಈಡೀ ಮನೆಯೇ ಕುಸಿದು ಬೀಳೋ ಆತಂಕ ಎದುರಾಗಿದೆ.‌ ಇನ್ನು ಕ್ಯಾಮನಹಳ್ಳಿ ಸಮೀಪ ಕಾರು ಹೋಗುವ ಸಂದರ್ಭದಲ್ಲಿ ಕಾರು ಸಹಿತ ಕಾಡುಮನೆ ಪವರ್ ಲೈನ್ ಮೇಲೆ ಮರ ಬಿದ್ದಿದೆ, ಸಧ್ಯಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇಷ್ಟೇ ಅಲ್ಲದೇ ಅನೇಕ ಕಡೆಗಳಲ್ಲಿ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮಳೆ ಹೀಗೆ ಮುಂದುವರೆದರೆ ಹೆಚ್ಚಿನ ಅನಾಹುತಗಳು ಸಂಭಸುತ್ತವೆ ಅಂತಾ ಸ್ಥಳಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈಗಾಲೇ ಬಹುತೇಕ ಡ್ಯಾಂಗಳು ಭರ್ತಿಯ ಹಂತಕ್ಕೆ ಬಂದಿದ್ದು, ಇನ್ಮುಂದೆ ಬರೋ ನೀರನ್ನು ಡ್ಯಾಂ‌ನಿಂದ ಹೊರಗೆ ಬಿಡಬೇಕಾಗುತ್ತದೆ. ಆಗ ಬಿಟ್ಟಾಗ ಮಾತ್ರವೇ ಹೆಚ್ಚಿನ ಅನಾಹುತ ಗಳು ಸಂಭವಿಸೋದು ಅನ್ನೋದು ಜನರ ಆತಂಕ. ಒಟ್ನಲ್ಲಿ, ಕಳೆದ ನಾಲ್ಕೈದು‌ ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಮಳೆಗೆ, ಜಿಲ್ಲೆಯ ಮಲೆನಾಡು ಭಾಗದ ಜನರು ಹೈರಾಣಾಗಿರೋದಂತು ಸುಳ್ಳಲ್ಲ.

ಇದನ್ನೂ ಓದಿ : Chandrashekhar Guruji murder case : ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಹೋಟೆಲ್‌ನಲ್ಲಿ ಸುದರ್ಶನ ಹೋಮ, ಹವನದ

ಇದನ್ನೂ ಓದಿ : ಇಂದಿರಾ ಆಗಿ ತೆರೆಗೆ ಬಂದ ಅನಿತಾ ಭಟ್‌ : Voot Select ನಲ್ಲಿ ರಿಲೀಸ್‌

Hassan District Heavy Rain, Hemavathi Dam filled

Comments are closed.