Cooking Oil : ಗುಡ್​ನ್ಯೂಸ್​ : ಅಡುಗೆ ಎಣ್ಣೆ ಪ್ರತಿ ಲೀಟರ್​ಗೆ 15 ರೂಪಾಯಿ ಕಡಿತಗೊಳಿಸಿ ಕೇಂದ್ರದಿಂದ ಆದೇಶ

Cooking Oil : ದಿನನಿತ್ಯದ ವಸ್ತುಗಳ ದರ ಏರಿಕೆಯಿಂದ ಕಂಗೆಟ್ಟಿದ್ದ ಶ್ರೀ ಸಾಮಾನ್ಯನಿಗೆ ಕೇಂದ್ರ ಸರ್ಕಾರವು ಇಂದು ಬಿಗ್​ ರಿಲೀಫ್​ ನೀಡಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರಿದ್ದ ಅಡುಗೆ ಎಣ್ಣೆಗಳ ದರದಲ್ಲಿ ಪ್ರತಿ ಲೀಟರ್​ಗೆ 15 ರೂಪಾಯಿ ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ. ಈ ಆದೇಶವು ತತ್ತಕ್ಷಣದಿಂದಲೇ ಜಾರಿಗೆ ಬರುವಂತೆ ಖಾದ್ಯ ತೈಲ ಸಂಘಗಳಿಗೆ ನಿರ್ದೇಶನ ನೀಡಲಾಗಿದೆ.


ಜುಲೈ ಆರರಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಖಾದ್ಯ ತೈಲ ಸಂಘಗಳ ಜೊತೆಯಲ್ಲಿ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಅಡುಗೆ ಎಣ್ಣೆಗಳ ಎಂಆರ್​ಪಿ ದರದಲ್ಲಿ 15 ರೂಪಾಯಿ ಇಳಿಕೆ ಮಾಡುವ ಬಗ್ಗೆ ನಿರ್ಣಯ ಹೊರ ಬಿದ್ದಿತ್ತು. ಈ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಇಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.


ಖಾದ್ಯ ತೈಲಗಳ ಬೆಲೆಯನ್ನು ತಕ್ಷಣವೇ ಕಡಿಮೆ ಮಾಡಿ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಖಾದ್ಯ ತೈಲ ತಯಾರಕರು ಹಾಗೂ ಸಂಸ್ಕರಣಾಗಾರರಿಗೆ ಕೇಂದ್ರ ಸರ್ಕಾರ ಸಲಹೆಯನ್ನು ನೀಡಿದೆ. ತಯಾರಕರು / ಸಂಸ್ಕರಣಾಗಾರರಿಂದ ವಿತರಕರಿಗೆ ಬೆಲೆಯಲ್ಲಿ ಕಡಿತವನ್ನು ಮಾಡಿದಾಗ, ಲಾಭವನ್ನು ಉದ್ಯಮದಿಂದ ಗ್ರಾಹಕರಿಗೆ ವರ್ಗಾಯಿಸಬೇಕು ಮತ್ತು ಇಲಾಖೆಗೆ ನಿಯಮಿತವಾಗಿ ಮಾಹಿತಿ ನೀಡಬಹುದು” ಎಂದು ಸಚಿವಾಲಯವು ಸೇರಿಸಲಾಗಿದೆ. ಈ ಹಿಂದೆ ಬೆಲೆಯನ್ನು ಕಡಿಮೆ ಮಾಡದ ಪ್ರಮುಖ ತೈಲ ಉತ್ಪಾದಕರು ತಮ್ಮ ಬೆಲೆಗಳನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ 300-450 ಅಮೆರಿಕನ್​ ಡಾಲರ್​​ನಷ್ಟು ಕಡಿಮೆಯಾದ ನಂತರ ಈ ಕ್ರಮವು ಬಂದಿದೆ. ಭಾರತವು ತನ್ನ ವಾರ್ಷಿಕ ಖಾದ್ಯ ತೈಲ ಬೇಡಿಕೆಯ ಸುಮಾರು 56 ಪ್ರತಿಶತವನ್ನು ಆಮದುಗಳಿಂದ ಪೂರೈಸುತ್ತದೆ. ಹಾಗಾಗಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲಿನ ಕುಸಿತವು ದೇಶೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಇದನ್ನು ಓದಿ : Rashmika Mandanna : ಬಾಲಿವುಡ್ ನಟ ಟೈಗರ್​ ಶ್ರಾಫ್​ಗೆ ಶೀಘ್ರದಲ್ಲಿಯೇ ನಾಯಕಿಯಾಗಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : Chandrasekhar Guruji : ಗುರೂಜಿ ಇನ್ನಿಲ್ಲದ ಕಿರುಕುಳ ನೀಡಿದ್ದರು,ಸಾಯಿಸದೇ ಬೇರೆ ವಿಧಿಯಿರಲಿಲ್ಲ :ಕೊಲೆ ಹಿಂದಿನ ಕಾರಣ ಬಿಚ್ಚಿಟ್ಟ ಹಂತಕರು

Cooking Oil to Become Cheaper by Rs 15/Litre as Centre Directs Firms to Cut MRP Immediately

Comments are closed.