HD Kumaraswamy : ಗಾಂಧೀಜಿ ಪತ್ನಿ ಕೂಡ ತಲೆ‌ಮೇಲೆ ಸೆರಗು ಹಾಕುತ್ತಿದ್ದರು : ಹಿಬಾಜ್ ಬೆಂಬಲಕ್ಕೆ ನಿಂತ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ವಿವಾದ ಸೃಷ್ಟಿಸಿದ್ದ ಹಿಜಾಬ್ ವಿವಾದ (Hijab Controversy) ಸದ್ಯಕ್ಕೆ ಕೊನೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣಕ್ಕೆ ಈಗಾಗಲೇ ಹೈಕೋರ್ಟ್ ನ ತ್ರೀಸದಸ್ಯ ಪೀಠ ತೀರ್ಪು ಘೋಷಿಸಿದೆ. ಹೀಗಿದ್ದರೂ ರಾಜ್ಯದಲ್ಲಿ ಹಿಜಾಬ್ ಪರ ಹಾಗೂ ವಿರುದ್ಧ ಚರ್ಚೆ ಜೋರಾಗಿದೆ. ಈ ಮಧ್ಯೆ ಮಾಜಿಸಿಎಂ ಕುಮಾರಸ್ವಾಮಿ (HD Kumaraswamy ) ಈಗ ಹಿಜಾಬ್ ಗೆ ತಮ್ಮ ಬೆಂಬಲ ಸೂಚಿಸಿದ್ದು, ಮಹಾತ್ಮಾ ಗಾಂಧೀಜಿಯವರ ಪತ್ನಿ ಯೂ ಹಿಜಾಬ್ ಧರಿಸುತ್ತಿದ್ದರು ಎಂದಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿಸಿಎಂ ಎಚ್ಡಿಕೆ, ನಾವು ಪೋಟೋಗಳಲ್ಲಿ ನೋಡಿದ್ದೇವೆ. ಮಹಾತ್ಮಾಗಾಂಧೀಜಿಯವರ ಪತ್ನಿ ಕಸ್ತೂರಬಾ ಕೂಡ ತಲೆ ಮೇಲೆ ಸೆರಗು ಹಾಕುತ್ತಾರೆ. ಎಷ್ಟೋ ಸಂದರ್ಭದಲ್ಲಿ ಬಿಸಿಲಿಗಾಗಿ ಹಿಂದೂ ಹೆಣ್ಣುಮಕ್ಕಳು ತಲೆಗೆ ಬಟ್ಟೆ ಸುತ್ತಿಕೊಳ್ಳುತ್ತಾರೆ. ಇದನ್ನು ದೊಡ್ಡ ವಿವಾದ ಮಾಡುವ ಅಗತ್ಯವೇ ಇರಲಿಲ್ಲ ಎಂದು ಎಚ್ಡಿಕೆ ಹಿಜಾಬ್ ಪರ ಬ್ಯಾಟಿಂಗ್ ನಡೆಸಿದ್ದಾರೆ.

ಎಲ್ಲ ಸಮುದಾಯದ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಬೇರೆ ಧರ್ಮದ ಹೆಣ್ಣುಮಕ್ಕಳು ತಲೆ ಮೇಲೆ ಬಟ್ಟೆ ಹಾಕಿದ್ದನ್ನು ನಾವು‌ ನೋಡಿದ್ದೇವೆ. ಆ ತರ ಪೋಟೋಗಳು ನಮ್ಮ ಬಳಿ ಇದೆ. ಆದರೆ ಈಗ ಯಾವ ಕಾರಣಕ್ಕೆ ಈ ಸಂಗತಿ ವಿವಾದವಾಗುತ್ತಿದೆ ಗೊತ್ತಿಲ್ಲ ಎಂದು ಎಚ್ಡಿಕೆ ಕಿಡಿಕಾರಿದ್ದಾರೆ. ಹೆಣ್ಣುಮಕ್ಕಳಿಗೆ ತಮ್ಮ ಸಮವಸ್ತ್ರದ ಜೊತೆಗೆ ಅನೇಕ ಸಂದರ್ಭದಲ್ಲಿ ದುಪ್ಪಟ್ಟಾ ಧರಿಸುತ್ತಾರೆ. ಇದೇ ರೀತಿ ಸಮವಸ್ತ್ರ ಕ್ಕೆ ಸರಿಹೊಂದುವ ದುಪ್ಪಟ್ಟಾ ಧರಿಸಲು ಅವಕಾಶ ನೀಡಬೇಕು. ಇದನ್ನು ಬಿಟ್ಟು ವಿವಾದ ಮಾಡಿಕೊಂಡು ಕೂತರೇ ವಿದ್ಯಾರ್ಥಿನಿಯರ ಭವಿಷ್ಯ ಹಾಳು ಮಾಡುವುದು ಎಷ್ಟು ಸರಿ ಎಂದು ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.

ಕೆಲವೆಡೆ ಹೆಣ್ಣುಮಕ್ಕಳು ಕೆಲಸ ಮಾಡುವಾಗ ತಲೆ ಮೇಲೆ ದುಪ್ಪಟ್ಟಾ ಹಾಕಿಕೊಳ್ಳುವ ವ್ಯವಸ್ಥೆ ಇದೆ. ಒಂದೊಂದು ಕಡೆ ಒಂದೊಂದು ಸಂಪ್ರದಾಯವಿದೆ. ಆದರೆ ಈ ಕಾರಣಕ್ಕೆ ವಿದ್ಯಾರ್ಥಿನಿಯರು ಕಷ್ಟಪಡುವಂತಾಗಬಾರದು. ಹೀಗಾಗಿ ಈ ಬಗ್ಗೆ ನಾನು ಸದನದಲ್ಲಿ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ವಿಶ್ವಾಸ ನೀಡಿದ್ದಾರೆ. ಹಿಜಾಬ್ ನಮ್ಮ ಧಾರ್ಮಿಕ ಹಕ್ಕು ಎಂದಿದ್ದ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದರು. 11 ದಿನಗಳ ಕಾಲ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಬರೋಬ್ಬರಿ ೧೮ ದಿನಗಳ ಬಳಿಕ ತನ್ನ ತೀರ್ಪು ಪ್ರಕಟಿಸಿತ್ತು. ಈ ತೀರ್ಪಿನ ಬಳಿಕ ಈಗಾಗಲೇ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಹೊತ್ತಿನಲ್ಲಿ ಕುಮಾರಣ್ಣ ಹಿಜಾಬ್ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ : ಕೆಜಿಎಫ್ ದಾಖಲೆ ಮುರಿದ ಜೇಮ್ಸ್: ಟಿವಿ ರೈಟ್ಸ್ ದಾಖಲೆಯ ಮೊತ್ತಕ್ಕೆ ಮಾರಾಟ

ಇದನ್ನೂ ಓದಿ : ಹಿಜಾಬ್ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ: ರೀ ಎಕ್ಸಾಂಗೆ ಅವಕಾಶವಿಲ್ಲ ಎಂದ ಸರ್ಕಾರ

( Gandhiji’s wife was also covering his head, HD Kumaraswamy Support Hijab Controversy)

Comments are closed.