Hijab Re Exams : ಹಿಜಾಬ್ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ: ರೀ ಎಕ್ಸಾಂಗೆ ಅವಕಾಶವಿಲ್ಲ ಎಂದ ಸರ್ಕಾರ

ಬೆಂಗಳೂರು : ಧಾರ್ಮಿಕ ಹಕ್ಕು ಹಿಜಾಬ್ ( Hijab) ಗಾಗಿ ಹೋರಾಟ ನಡೆಸುತ್ತಿರೋ ವಿದ್ಯಾರ್ಥಿನಿಯರಿಗೆ ( Hijab Re Exams) ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಹಿಜಾಬ್ ಗಾಗಿ ಕಾಲೇಜು ತೊರೆದಿದ್ದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆ ನಡೆಸುವ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಮತ್ತೊಮ್ಮೆ ಪರೀಕ್ಷೆ ನಡೆಸುವ ವಿಚಾರಕ್ಕೆ ಸರ್ಕಾರ ಸಮ್ಮತಿ ನೀಡಿಲ್ಲ. ಉಡುಪಿಯ ಹಿಜಾಬ ಹೋರಾಟದ ವಿದ್ಯಾರ್ಥಿನಿಯರಿಗೆ ಒಂದೊಮ್ಮೆ ಹಿಜಾಬ್ (Hijab) ಬಿಚ್ಚಿಟ್ಟು ಬಂದರೇ ಮತ್ತೊಮ್ಮೆ ಪ್ರಾಯೋಗಿಕ ಪರೀಕ್ಷೆ ನಡೆಸಬೇಕು ಎಂಬ ವಿಚಾರವನ್ನು ಶಾಸಕ ರಘುಪತಿ ಭಟ್ ಸದನದ ಗಮನಕ್ಕೆ ತಂದರು.

ಈ ವಿಚಾರಕ್ಕೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಬಿಜೆಪಿಯ ಸಿ.ಟಿ.ರವಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು, ವಿದ್ಯಾರ್ಥಿನಿಯರು ಘನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವಂತೆ ಮಾತನಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ನಿಯಮ ಸಡಿಲಿಸಿ ಯಾವುದೇ ರೀತಿಯ ಸಹಾಯ ನೀಡುವ ಅಗತ್ಯವಿಲ್ಲ ಎಂಬರ್ಥದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಿಜಾಬ್ ತೀರ್ಪು ಒಪ್ಪದೇ ಮೇಲ್ಮನವಿ ಹಾಕಲು ಅವಕಾಶವಿದೆ. ಆದರೆ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ಯಾವ ಅಧಿಕಾರವಿದೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಆದರೆ ಇದಕ್ಕೆ ಸಿದ್ಧರಾಮಯ್ಯನವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್ ತೀರ್ಪು ಒಪ್ಪಬೇಕು ಸರಿ. ಆದರೆ ಅವರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದರೇ ಅದನ್ನು ತಪ್ಪಿಸಲು ಎಲ್ಲಿ ಅವಕಾಶವಿದೆ ಎಂದರು. ಆದರೆ ವಿದ್ಯಾರ್ಥಿನಿಯರಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಬೇಕು ಎಂಬ ವಾದಕ್ಕೆ ಕಾನೂನು ಸಚಿವ ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಮಧ್ಯಂತರ ಆದೇಶಕ್ಕೂ ಮುನ್ನ ಮಕ್ಕಳು ಪರೀಕ್ಷೆ ತಪ್ಪಿಸಿಕೊಂಡಿದ್ದರೇ, ಆಗ ಮಾನವೀಯತೆಯ ದೃಷ್ಟಿಯಿಂದ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಬಹುದಿತ್ತು. ಆದರೆ ಇಂದು ಹೈಕೋರ್ಟ್ ನ ಮಧ್ಯಂತರ ಆದೇಶದ ಬಳಿಕವೂ ನಡೆದಿರುವ ಕೃತ್ಯ. ವಿದ್ಯಾರ್ಥಿನಿಯರು ಎಲ್ಲವೂ ಅರಿವಿದ್ದು ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಮಧ್ಯಂತರ ಆದೇಶದ ಬಳಿಕವೂ ಈ ವಿದ್ಯಾರ್ಥಿನಿಯರು ಪರೀಕ್ಷೆ ತಪ್ಪಿಸಿಕೊಂಡಿರೋದರಿಂದ ಮತ್ತೆ ಪರೀಕ್ಷೆಗೆ ಅವಕಾಶ ಕೊಡೋಕೆ ಸಾಧ್ಯವಿಲ್ಲ.

ನಾವು ಒಂದು ವ್ಯವಸ್ಥೆಯಲ್ಲಿ ಇದ್ದೇವೆ. ಈಗ ಮತ್ತೊಮ್ಮೆ ಅರಿವಿದ್ದು ನ್ಯಾಯಾಲಯದ ಆದೇಶ ಉಲ್ಲಂಘಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟರೇ ಅದು ಬೇರೆ ರೀತಿ ಆಗುತ್ತದೆ ಎಂದು ಮಾಧುಸ್ವಾಮಿ ಅಭಿಪ್ರಾಯಿಸಿದ್ದಾರೆ. ಹೈಕೋರ್ಟ್ ತೀರ್ಪಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಶಾಸಕ ರಘುಪತಿ ಭಟ್, ಸರ್ಕಾರದ ಗಮನ ಸೆಳೆದು ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸುತ್ತೇನೆ. ಅವರು ಹಿಜಾಬ್ ಬಿಚ್ಚಿಟ್ಟು ಪರೀಕ್ಷೆಗೆ ಬರೋದಾದರೇ ಬರಲಿ ಎಂದಿದ್ದರು. ಆದರೆ ಈಗ ಪ್ರಸ್ತಾಪಕ್ಕೆ ಸರಕಾರ ಅನುಮತಿ ನೀಡದೇ ಇರೋದರಿಂದ ವಿದ್ಯಾರ್ಥಿನಿಯರ ಪರೀಕ್ಷಾ ಭವಿಷ್ಯ ಆತಂಕಕ್ಕೆ ಸಿಲುಕಿದಂತಾಗಿದೆ.

ಇದನ್ನೂ ಓದಿ : ಪರೀಕ್ಷೆ ಹೊತ್ತಲ್ಲಿ ಪೋಷಕರ ಪರದಾಟ: ಫೀಸ್ ಕಟ್ಟಿದ್ರೇ ಮಾತ್ರ ಹಾಲ್ ಟಿಕೇಟ್ ಎಂದ ಸ್ಕೂಲ್ ಗಳು

ಇದನ್ನೂ ಓದಿ :  ಗೇಟ್ ಫಲಿತಾಂಶ 2022 ಪ್ರಕಟ : ಉತ್ತರ ಕೀ, ಟಾಪರ್‌ಗಳ ಪಟ್ಟಿ, ಇತರ ವಿವರಗಳನ್ನು ಪರಿಶೀಲಿಸಿ

( Hijab Re Exams : Hijab students have no chance of re-examination )

Comments are closed.