Petrol Diesel price : ಉಕ್ರೇನ್ – ರಷ್ಯಾ ಯುದ್ಧದ ಎಫೆಕ್ಟ್ : 150 -175 ರೂ.ಗೆ ಏರಿಕೆಯಾಗುತ್ತಾ ಪೆಟ್ರೋಲ್‌

ನವದೆಹಲಿ : ದೂರದ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ( Russian Ukraine crisis) ಜಾಗತಿಕ ಮಟ್ಟದಲ್ಲಿ ಹಾಗೂ ಭಾರತಕ್ಕೂ ಸಂಕಷ್ಟ ತಂದೊಡ್ಡುವ ಸ್ಥಿತಿ ತಲುಪಿದ್ದು, ಈಗಾಗಲೇ ಕೊರೋನಾ ಮೂರು ಅಲೆಗಳ ಕಾರಣಕ್ಕೆ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆ ಏರಿಕೆ (Petrol Diesel price) ಭಯ ಕಾಡಲಾರಂಭಿಸಿದೆ. ತೈಲ ಬೆಲೆ ಏರಿಕೆ ಚೈನ್ ಲಿಂಕ್ ನಂತೆ ಆರಂಭವಾಗೋ ಬೆಲೆ ಏರಿಕೆ ಯಾಗಿದ್ದು ತೈಲ ಬೆಲೆ ಏರಿಕೆಯೊಂದಿಗೆ ದಿನಸಿ, ತರಕಾರಿ, ಬಸ್ ಸಂಚಾರ, ಟ್ಯಾಕ್ಸಿ ಸೇವೆ ಸೇರಿದಂತೆ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ.

ಈಗಾಗಲೇ ನೂರರ ಗಡಿದಾಟಿರುವ ಪೆಟ್ರೋಲ್ ದರ ಉಕ್ರೇನ್ ರಷ್ಯಾ ವಾರ್ ನಿಂದ ಮತ್ತಷ್ಟು ಏರಿಕೆಯಾಗೋ ಸಾಧ್ಯತೆ ದಟ್ಟವಾಗಿದೆ. ಉಕ್ರೇನ್ ವಿರುದ್ಧ ರಷ್ಯಾ ಯುದ್ಧದ ಹಿನ್ನೆಲೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಸಧ್ಯದಲ್ಲೇ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಆದರೆ ಯಾವ ಪ್ರಮಾಣದಲ್ಲಿ ದರ ಏರಿಕೆ ಆಗಲಿದೆ ಅನ್ನೋ ಅಂದಾಜು ಸಿಗುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಅಗಸ್ಟ್ 2014 ರ ಬಳಿಕ ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆ ಕಂಡಿತ್ತು. ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 105 ಡಾಲರ್ ಗೆ ಏರಿಕೆಯಾಗಿತ್ತು. ಈಗ ಉಕ್ರೇನ್ ಹಾಗೂ ರಷ್ಯಾದ ನಡುವೆ ಕಳೆದ ಒಂದು ವಾರದಿಂದ ಯುದ್ಧ ನಡೆದಿದೆ. ಈಗಾಗಲೇ ನಡೆದ ಮೂರು ಸುತ್ತಿನ ಸಂಧಾನ ಸಭೆಗಳು ವಿಫಲಗೊಂಡಿರೋದರಿಂದ ಸದ್ಯ ಯುದ್ಧ ನಿಲ್ಲುವ ಯಾವುದೇ ಲಕ್ಷಣಗಳಿಲ್ಲ. ಹೀಗಾಗಿ ಭಾರತಕ್ಕೆ ಮತ್ತೆ ತೈಲ ಬೆಲೆ ಏರಿಕೆ ಆತಂಕ ಕಾಡಲಾರಂಭಿಸಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮೇಲೆ ಆರ್ಥಿಕ ನಿರ್ಭಂದ ಹೇರಲು ಮುಂದಾಗಿರುವ ಹಲವು ರಾಷ್ಟ್ರಗಳು ಈಗಾಗಲೇ ವ್ಯಾಪಾರ ವಹಿವಾಟು ನಿಲ್ಲಿಸಿವೆ. ಅಲ್ಲದೇ ನಿರ್ಬಂಧದ ಭಾಗವಾಗಿ ಕಚ್ಚಾತೈಲ ಆಮದು ಕೂಡ ಬಂದ್ ಮಾಡಲಾಗಿದೆ. ಅಲ್ಲದೇ ತೈಲ ಉತ್ಪಾದಿಸುವ ಬೇರೆ ದೇಶಗಳಿಂದ ತೈಲ ಖರೀದಿ ಆರಂಭಿಸಿದ್ದಾರೆ.

ಇನ್ನು ತೈಲಕ್ಕೆ ಬೇಡಿಕೆ ಕಡಿಮೆಯಾಗಿರೋದರಿಂದ ಹಾಗೂ ದೇಶದಲ್ಲಿ ಯುದ್ಧದ ವಾತಾವರಣ ಇರೋದರಿಂದ ರಷ್ಯಾ ತೈಲ ಉತ್ಪಾದಕರು ಉತ್ಪಾದನೆ ನಿಲ್ಲಿಸಿದ್ದಾರೆ. ಪ್ರಪಂಚದ ಎರಡನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿರುವ ರಷ್ಯಾದಿಂದ ತೈಲ ಪೊರೈಕೆ ಸ್ಥಗಿತವಾಗಿರೋದರಿಂದ ಸಹಜವಾಗಿಯೇ ತೈಲ ಅಭಾವ ತಲೆದೋರಿದ್ದು ಇತರೆ ತೈಲ ಉತ್ಪನ್ನ ರಾಷ್ಟ್ರ ಗಳ ಮೇಲೆ ಒತ್ತಡ ಹೆಚ್ಚಿದೆ.

ಇದನ್ನೂ ಓದಿ : Cryptocurrency: ಕ್ರಿಪ್ಟೋಕರೆನ್ಸಿ ಭಾರತದಲ್ಲಿ ಕಾನೂನುಬದ್ಧವೇ, ಅಲ್ಲವೇ? ಸುಪ್ರೀಂ ಪ್ರಶ್ನೆ

ಇದನ್ನೂ ಓದಿ : LPG price hike : ಗ್ರಾಹಕರಿಗೆ ಬಿಸಿ; ಎಲ್‌ಪಿಜಿ ಸಿಲಿಂಡರ್ ಬೆಲೆ 105 ರೂ. ಏರಿಕೆ

( Russian Ukraine crisis Petrol price in India will go up to 150 to 175 per liter )

Comments are closed.