Heavy Rain : ಕರಾವಳಿಯಲ್ಲಿ ಮೂವರನ್ನು ಬಲಿ ಪಡೆದ ಆರಿದ್ರಾ ಮಳೆ : ಇಂದೂ ರೆಡ್‌ ಅಲರ್ಟ್‌ – ಶಾಲೆ, ಕಾಲೇಜಿಗೆ ರಜೆ

ಉಡುಪಿ/ ಮಂಗಳೂರು :Heavy Rain : ಕರಾವಳಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ಆತಂಕವನ್ನು ಮೂಡಿಸಿದೆ. ಆರಿದ್ರಾ ಮಳೆ ಈಗಾಗಲೇ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರನ್ನು ಬಲಿ ಪಡೆದಿದೆ

ಆರಿದ್ರಾ ಮಳೆ ಮುಗಿದು ಪುನರ್ವಸು ಮಳೆ ಆರಂಭವಾಗಿದೆ. ಇಂದಿನಿಂದ ಪುನರ್ವಸು ಮಳೆ ಆರಂಭವಾಗಿದ್ದು, ಆರಂಭದಲ್ಲಿಯೇ ಮಳೆಯ ಆರ್ಭಟ ಜೋರಾಗಿದೆ. ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಿಂದಾಗಿ ಭಾರೀ ಅನಾಹುತಗಳು ಸಂಭವಿಸಿದೆ. ಜಿಲ್ಲೆಯಲ್ಲಿ ಇಬ್ಬರು ಮಳೆಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 12 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಉಡುಪಿ ಜಿಲ್ಲೆಯ ಪಡುವರಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಸಿದೆ. ಪಡುವರಿಯಲ್ಲಿ 221 ಮೀ.ಮೀ. ಮಳೆಯಾಗಿದ್ದರೆ, ಯಡ್ತರೆಯಲ್ಲಿ 207 , ಕಾರ್ಕಳದ ರೇಂಜಾಳದಲ್ಲಿ 205 ಮಿ.ಮೀ., ಶಿರೂರಿನಲ್ಲಿ 196 ಮಿ.ಮೀ., ಉಪ್ಪುಂದದಲ್ಲಿ 176.5ಮಿ.ಮೀ., ಕಾಲ್ತೋಡುವಿನಲ್ಲಿ 175.5 ಕಾಂತಾವರದಲ್ಲಿ 164.5 ಮಿ.ಮೀ, ಕೇರ್ಗಾಲುವಿನಲ್ಲಿ 164.5 ಮಿ.ಮೀ.,, ಮಣಿಪುರದಲ್ಲಿ 154.5 ಮಿ.ಮೀ., ವಡ್ಡರ್ಸೆಯಲ್ಲಿ 154 ಮಿ.ಮೀ. ಮಳೆ ಸುರಿದಿದೆ.

ಗುರುವಾರವೂ ಕೂಡ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ಎರಡು ದಿನಗಳಿಂದಲೂ ಜಿಲ್ಲೆಯಲ್ಲಿನ ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ, ಹೆಬ್ರಿ, ಕಾಪು ತಾಲೂಕಿನ ಬಹುತೇಕ ಕಡೆಗಳಲ್ಲಿ ನೆರೆಹಾವಳಿ ಉಂಟಾಗಿದ್ದು, ಜಿಲ್ಲೆಯಲ್ಲಿ ಕಡಲ್ಕೊರೆತದ ಆತಂಕ ಶುರುವಾಗಿದೆ.

ಇದನ್ನೂ ಓದಿ : Gruha Lakshmi Yojana : ಗೃಹಲಕ್ಷ್ಮೀ ಯೋಜನೆಗೆ ಮುಹೂರ್ತ ಫಿಕ್ಸ್‌ : ಯಜಮಾನಿ 2000 ರೂ. ಪಡೆಯಲು ಈ ದಾಖಲೆಗಳು ಕಡ್ಡಾಯ

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಮುಂದುವರಿದಿದೆ. ಜಿಲ್ಲೆಯ ಮರೋಡಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದೆ. ಮರೋಡಿಯಲ್ಲಿ 202 ಮಿ.ಮೀ. ಮಳೆ ಸುರಿದಿದ್ದು, ಬಳಂಜದಲ್ಲಿ 192 ಮಿ.ಮೀ., ಪಜಿರು 188 ಮಿ.ಮೀ., ಅಳದಂಗಡಿಯಲ್ಲಿ 175ಮಿ.ಮೀ., ಕುಕ್ಕೆಡಿಯಲ್ಲಿ 175 ಮಿ.ಮೀ, ಮೆಲಂತಬೆಟ್ಟುವಿನಲ್ಲಿ 169 ಮಿ.ಮೀ., ಪದಂಗಡಿಯಲ್ಲಿ 162 ಮಿ.ಮೀ., ಲೈಲಾದಲ್ಲಿ 162 ಮಿ.ಮೀ., ಕಾಶಿಪಟ್ಣದಲ್ಲಿ 160 ಮಿ.ಮೀ., ತೆಕ್ಕಾರುವಿನಲ್ಲಿ 154 ಮಿ.ಮೀ. ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಒಟ್ಟು 33 ಮನೆಗಳು ಕುಸಿತವಾಗಿದ್ದು, ಹಲವು ಕಡೆಗಳಲ್ಲಿ ಗುಡ್ಡಕುಸಿತದ ಪ್ರಕರಣ ದಾಖಲಾಗಿದೆ.

ಉಳ್ಳಾಲದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೋರ್ವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಂಗನವಾಡಿ, ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆಯನ್ನು ಘೋಷಣೆ ಮಾಡಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.

ಜುಲೈ 10 ರ ವರೆಗೆ ರಾಜ್ಯದಲ್ಲಿ ಮಳೆಯ ಆರ್ಭಟ

ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರುವಾಗಿದೆ. ರಾಜ್ಯಕ್ಕೆ ಪುನರ್ವಸು ಮಳೆಯ ಎಂಟ್ರಿಯಾಗಿದ್ದು, ಮಳೆ ಇನ್ನಷ್ಟು ಚುರುಕಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಕರಾವಳಿ ಮಾತ್ರವಲ್ಲದೇ ಮಲೆನಾಡಿನ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಳಗಾವಿ, ಹಾವೇರಿ, ಕಲಬುರಗಿ, ರಾಯಚೂರು, ದಾವಣಗೆರೆ ಜಿಲ್ಲೆಗಳಲ್ಲಿಯೂ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಇದನ್ನೂ ಓದಿ : ಉಡುಪಿ ಜಿಲ್ಲೆಯಲ್ಲಿ ಜುಲೈ 6 ರಂದು ಶಾಲೆಗಳಿಗೆ ರಜೆ : ರೆಡ್‌ ಅಲರ್ಟ್‌ ಘೋಷಣೆ

Comments are closed.