KL Rahul wedding date fix : ಕೆಎಲ್ ರಾಹುಲ್ ಆಥಿಯಾ ಶೆಟ್ಟಿ ಮದುವೆ ದಿನಾಂಕ ಫಿಕ್ಸ್‌ : ಇಲ್ಲಿದೆ ಫಕ್ಕಾ ಮಾಹಿತಿ

KL Rahul wedding date fix : ಟೀಂ ಇಂಡಿಯಾದ ಖ್ಯಾತ ಆಟಗಾರ ಕೆ.ಎಲ್.ರಾಹುಲ್‌ ಹಾಗೂ ಬಾಲಿವುಡ್‌ ನಟಿ ಆಥಿಯಾ ಶೆಟ್ಟಿ ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವಲ್ಲೇ ಆಥಿಯಾ ಶೆಟ್ಟಿ ಅವರ ತಂದೆ ಬಾಲಿವುಡ್‌ ಖ್ಯಾತ ನಟ ಸುನಿಲ್‌ ಶೆಟ್ಟಿ ಅವರು ಇಬ್ಬರ ಮದುವೆಯ ಕುರಿತು ಖಚಿತ ಮಾಹಿತಿ ನೀಡಿದ್ದರು. ಈ ನಡುವಲ್ಲೇ ರಾಹುಲ್‌ ಆಥಿಯಾ ವಿವಾಹ ಮುಂಬೈನಲ್ಲಿ ನಡೆಯಲಿದೆ ಅನ್ನೋ ಪಕ್ಕಾ ಮಾಹಿತಿ ಹೊರಬಿದ್ದಿದೆ.

ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರು ಹಲವು ದಿನಗಳಿಂದಲೂ ಡೇಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ, ಅವರು ಇತ್ತೀಚೆಗೆ ಮುಂಬೈ ಬಿ-ಟೌನ್ ಸೆಂಟರ್, ಬಾಂದ್ರಾದಲ್ಲಿ ಐಷಾರಾಮಿ ಸಮುದ್ರ ತೀರದಲ್ಲಿರುವ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ. ಅಥಿಯಾ ಮತ್ತು ಕೆಎಲ್ ರಾಹುಲ್ ಅವರ ವಿವಾಹದ ಬಗ್ಗೆ ಸುನೀಲ್ ಶೆಟ್ಟಿ ಬಹಿರಂಗಪಡಿಸಿದ ನಂತರ, ಹಿರಿಯ ನಟನ ಖಂಡಾಲಾ ಬಂಗಲೆಯಾದ ‘ಜಹಾನ್’ ನಲ್ಲಿಇಬ್ಬರೂ ಹಸೆಮಣೆ ಏರಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಪಿಂಕ್ವಿಲ್ಲಾ ವರದಿಯ ಪ್ರಕಾರ, ಬಾಲಿವುಡ್ ನಟಿ ಶೆಟ್ಟಿ ಮತ್ತು ಕೆಎಲ್ ರಾಹುಲ್ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಯಾಗಲು ನಿರ್ಧಾರ ಮಾಡಿದ್ದಾರಂತೆ. ಅಲ್ಲದೇ ಆತ್ಮೀಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮದುವೆ ಆಯೋಜಕರು ಇತ್ತೀಚಿಗಷ್ಟೇ ಇದೇ ಬಂಗಲೆಗೆ ಭೇಟಿ ನೀಡುವ ಮೂಲಕ ಮದುವೆ ಕುರಿತು ಎದ್ದಿರುವ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ. ಸ್ನೇಹಿತರು ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಡಿಸೆಂಬರ್‌ ಅಂತ್ಯದಲ್ಲಿ ಅಥವಾ ಜನವರಿ ಮೊದಲ ವಾರದಲ್ಲಿ ಇಬ್ಬರೂ ಕೂಡ ಮದುವೆಯ ಬಂಧನಕ್ಕೆ ಒಳಪಡಲಿದ್ದಾರಂತೆ. ಆದರೆ ಟೀಂ ಇಂಡಿಯಾದ ಉಪನಾಯಕನಾಗಿರುವ ಕೆ.ಎಲ್.ರಾಹುಲ್‌ ಭವಿಷ್ಯ ನಾಯಕ ಅಂತಾನೇ ಹೇಳಲಾಗುತ್ತಿದೆ. ಹೀಗಾಗಿ ರಾಹುಲ್‌ ಕ್ರಿಕೆಟ್‌ ಶೆಡ್ಯೂಲ್‌ಗಳನ್ನು ಆಧರಿಸಿ ಮದುವೆಯ ದಿನಾಂಕ ಫಿಕ್ಸ್‌ ಆಗಲಿದೆ. ಆದರೆ ಮದುವೆಯ ಕುರಿತು ಕೆ.ಎಲ್.ರಾಹುಲ್‌ ಅವರಾಗಲೀ, ಇಲ್ಲಾ ಆಥಿಯಾ ಶೆಟ್ಟಿ ಅವರಾಗಲಿ ಅಥವಾ ಕುಟುಂಬಸ್ಥರಾಗಲೀ ಅಧಿಕೃತವಾದ ಯಾವುದೇ ಹೇಳಿಕೆಯನ್ನೂ ನೀಡಿಲ್ಲ.

ಇತ್ತೀಚೆಗೆ, ಸಂವಾದದ ಸಂದರ್ಭದಲ್ಲಿ ನಟ ಸುನಿಲ್‌ ಶೆಟ್ಟಿ ಅವರು ಹಲವು ವಿಚಾರಗಳನ್ನು ಬಹಿರಂಗ ಪಡಿಸಿದ್ದರು. ಮಕ್ಕಳು ನಿರ್ಧಾರ ಮಾಡಿದ ತಕ್ಷಣದಲ್ಲಿಯೇ ಮದುವೆ ಆಗಲಿದ್ದಾರೆ. ಆದರೆ ಕೆ.ಎಲ್.ರಾಹುಲ್‌ ಪ್ರಸ್ತುತ ಕ್ರಿಕೆಟ್‌ನಲ್ಲಿ ಸಕ್ರೀಯರಾಗಿದ್ದಾರೆ. ಏಷ್ಯಾ ಕಪ್‌, ವಿಶ್ವಕಪ್‌, ದಕ್ಷಿಣ ಆಫ್ರಿಕಾ ಸರಣಿ, ಆಸ್ಟ್ರೇಲಿಯಾ ಪ್ರವಾಸದ ನಂತರದಲ್ಲಿ ಅವರು ಬಿಡುವು ಮಾಡಿಕೊಂಡು ಮದುವೆಯಾಗಲಿದ್ದಾರೆ ಎಂದಿದ್ದಾರೆ.

ಕೆ.ಎಲ್.ರಾಹುಲ್‌ ಅವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜರ್ಮನಿಯಲ್ಲಿ ಸ್ಪೋರ್ಟ್ಸ್ ಹರ್ನಿಯಾದ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಕೆಲವು ಸರಣಿಗಳನ್ನು ಮಿಸ್‌ ಮಾಡಿಕೊಂಡಿದ್ದರು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿರುವ ಕೆ.ಎಲ್.‌ ರಾಹುಲ್ T20I ಫಾರ್ಮೆಟ್‌ನ ಅತ್ಯಂತ ಬೇಡಿಕೆಯ ಆಟಗಾರ ಎನಿಸಿಕೊಂಡಿದ್ದಾರೆ. 30 ವರ್ಷ ವಯಸ್ಸಿನ ಅವರು ಕಳೆದ ಎಂಟು ವರ್ಷಗಳಲ್ಲಿ ಭಾರತಕ್ಕಾಗಿ 42 ಟೆಸ್ಟ್, 42 ODI ಮತ್ತು 56 T20I ಗಳನ್ನು ಆಡಿದ್ದಾರೆ.

ಇದನ್ನೂ ಓದಿ : MS Dhoni captaincy : ವಿರಾಟ್, ರೋಹಿತ್ ನಾಯಕತ್ವಕ್ಕಿಂತ ಪಾಕಿಸ್ತಾನ ವಿರುದ್ಧ ಧೋನಿ ಕ್ಯಾಪ್ಟನ್ಸಿಯೇ ಬೆಸ್ಟ್

ಇದನ್ನೂ ಓದಿ : Suresh Rains Retires: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ

KL Rahul wedding date fix Check Date Venue and other details

Comments are closed.